ಈ ಬಾರಿಯ ಬಜೆಟ್ ನಲ್ಲಿ ಮುಖ್ಯಮಂತ್ರಿಯವರು  ಶೈಕ್ಷಣಿಕ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. 

ಬೆಂಗಳೂರು (ಮಾ.15): ಈ ಬಾರಿಯ ಬಜೆಟ್ ನಲ್ಲಿ ಮುಖ್ಯಮಂತ್ರಿಯವರು ಶೈಕ್ಷಣಿಕ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏನೇನು ಸಿಕ್ಕಿದೆ ಎನ್ನುವ ವಿವರ ಇಲ್ಲಿದೆ ನೋಡಿ

ಉನ್ನತ ಶಿಕ್ಷಣ ಇಲಾಖೆಗೆ ಒಟ್ಟು 4,401 ಕೋಟಿ ರೂ ಅನುದಾನ

10,000 ತರಬೇತಿ ಪಡೆದ ಪದವೀಧರರ ಶಿಕ್ಷಕರ ನೇಮಕ

1,626 ಪ್ರೌಢ ಶಾಲಾ ಶಿಕ್ಷಕರ ನೇಮಕ

 1,191 ಪಿಯು ಉಪನ್ಯಾಸಕರನ್ನು 2 ಹಂತಗಳಲ್ಲಿ ನೇಮಕ

ಶಾಲಾ ನಿರ್ವಹಣೆ, ಸುಧಾರಣೆಗೆ 'ಶಿಕ್ಷಣ ಕಿರಣ' ಯೋಜನೆ

 ಪ್ರೌಢ ಶಿಕ್ಷಣ ಇಲಾಖೆಗೆ 18,266 ಕೋಟಿ ರೂ ಮೀಸಲು

ಹೈ-ಕ ಭಾಗದವರಿಗಾಗಿ ರಾಯಚೂರಿನಲ್ಲಿ ವಿವಿ ಸ್ಥಾಪನೆ

ಒಬಿಸಿ ವಿದ್ಯಾರ್ಥಿಗಳಿಗೆ 4 ಕೋಟಿ ರೂ ವೆಚ್ಚದಲ್ಲಿ 25 ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, 23 ಮಹಿಳಾ ಹಾಸ್ಟೆಲ್ ನಿರ್ಮಾಣ

ಬೆಂಗಳೂರು, ಧಾರವಾಡ ವಿವಿ ಮೂಲಸೌಕರ್ಯ ನವೀಕರಣಕ್ಕೆ 30 ಕೋಟಿ ರೂ ಮೀಸಲು

ಹಂಪಿ ಕನ್ನಡ ವಿವಿಗೆ 25 ಕೋಟಿ ರೂ ಅನುದಾನ

ವೇಮನ ಅಧ್ಯಯನ ಪೀಠಕ್ಕಾಗಿ 3 ಕೋಟಿ ಅನುದಾನ

ಸಾಹುಮಹಾರಾಜ್ ಹೆಸರಿನಲ್ಲಿ ಧಾರವಾಡದಲ್ಲಿ ಅಧ್ಯಯನ ಪೀಠ ಸ್ಥಾಪನೆ

ಎಸ್ಸಿ/ಎಸ್ಟಿ ವಸತಿಯುಕ್ತ 10 ಪ್ರಥಮ ದರ್ಜೆ ಕಾಲೇಜು ಸ್ಥಾಪನೆ

1 ರಿಂದ 10 ನೇ ತರಗತಿ- NCERT ಪಠ್ಯ ಪುಸ್ತಕಗಳ ಅಳವಡಿಕೆ

ಜುಲೈನಿಂದ ಜಾರಿಗೆ ಬರುವಂತೆ ವಾರದಲ್ಲಿ 5 ದಿನಗಳ ಹಾಲು ವಿತರಣೆ

ಬಿಸಿಯೂಟದಲ್ಲಿ ಸಾರವರ್ಧಕ ಅಕ್ಕಿ-4 ಜಿಲ್ಲೆಗಳಿಗೆ ವಿತರಣೆ

ಮಂಗಳೂರು ವಿವಿಯಲ್ಲಿ ಬ್ಯಾರಿ ಅಧ್ಯಯನ ಪೀಠ ಸ್ಥಾಪನೆ

ಕಾಲೇಜು ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟ್ಯಾಪ್ ವಿತರಣೆ