ಬೆಂಗಳೂರು[ಆ.20] ಬಿಎಸ್‌ವೈ 17 ಜನರ ಸೇನೆಯನ್ನು ಸಿದ್ಧಮಾಡಿಕೊಂಡಿದ್ದಾರೆ. ಅನುಭವಿ ತಲೆಗಳಿಗೆ ಮಣೆ ಹಾಕಲಾಗಿದೆ. ಹಾಗಾದರೆ ಯಾರಿಗೆ ಯಾವ ಖಾತೆ ನೀಡಲಾಗುತ್ತದೆ ಎನ್ನುವುದು ಸಹ ಅಷ್ಟೇ ಮುಖ್ಯ.

ಬಿಜೆಪಿಯ ಹಿರಿಯರಾದ ಜಗದೀಶ ಶೆಟ್ಟರ್,  ಕೆ. ಎಸ್. ಈಶ್ವರಪ್ಪ, ಮಾಧುಸ್ವಾಮಿ, ಆರ್. ಅಶೋಕ್  ಜತೆಗೆ ಪಕ್ಷೇತರ ನಾಗೇಶ್ ಸೇರಿ  7 ಮಂದಿ ಶಾಸಕರು ಕರ್ನಾಟಕದ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇನ್ನೊಂದು ದಿನದ ಅವಧಿಯಲ್ಲಿ ಬಿಜೆಪಿ ಹೈಕಮಾಂಡ್ ಸೂಚನೆ ಅನ್ವಯ ಸಚಿವಗಿರಿ ನೀಡುವ ಸಾಧ್ಯತೆ ಇದೆ.

24 ವರ್ಷಗಳ ಬಳಿಕ ಬೆಳಗಾವಿ ಮಹಿಳೆ ಮಂತ್ರಿ

ಸಂಭಾವ್ಯ ಸಚಿವರ ಪಟ್ಟಿ

1.  ಗೋವಿಂದ ಕಾರಜೋಳ-ಮುಧೋಳ- ಜಲ ಸಂಪನ್ಮೂಲ

2.  ಅಶ್ವತ್ಥ್ ನಾರಾಯಣ್-ಮಲ್ಲೇಶ್ವರಂ-  ಆರೋಗ್ಯ ಮತ್ತು ವೈದ್ಯ ಶಿಕ್ಷಣ

3. ಲಕ್ಷ್ಮಣ್ ಸವದಿ-ಅಥಣಿ[ಶಾಸಕ ಅಲ್ಲ] ಸಕ್ಕರೆ ಮತ್ತು ತೋಟಗಾರಿಕೆ

4. ಕೆ.ಎಸ್.ಈಶ್ವರಪ್ಪ-ಶಿವಮೊಗ್ಗ ನಗರ-ಲೋಕೋಪಯೋಗಿ

5. ಆರ್.ಅಶೋಕ್-ಪದ್ಮನಾಭನಗರ -ಗೃಹ ಮತ್ತು ನಗರಾಭಿವೃದ್ಧಿ

6. ಜಗದೀಶ್ ಶೆಟ್ಟರ್-ಹುಬ್ಬಳ್ಳಿ ಕೇಂದ್ರ- ಕಂದಾಯ

7. ಶ್ರೀರಾಮುಲು-ಮೊಳಕಾಲ್ಮೂರು-ಸಮಾಜ ಕಲ್ಯಾಣ

8. ಸುರೇಶ್ ಕುಮಾರ್-ರಾಜಾಜಿನಗರ ಕ್ಷೇತ್ರ- ಕಾನೂನು ಮತ್ತು ಸಂಸದೀಯ ವ್ಯವಹಾರ

9. ವಿ.ಸೋಮಣ್ಣ-ಗೋವಿಂದರಾಜನಗರ-ವಸತಿ

10. ಸಿ.ಟಿ.ರವಿ-ಚಿಕ್ಕಮಗಳೂರು- ಉನ್ನತ ಶಿಕ್ಷಣ ಮತ್ತು ಅರಣ್ಯ

11. ಬಸವರಾಜ ಬೊಮ್ಮಾಯಿ-ಶಿಗ್ಗಾವಿ-ಗ್ರಾಮೀಣ ಅಭಿವೃದ್ಧಿ

12. ಕೋಟಾ ಶ್ರೀನಿವಾಸ್ ಪೂಜಾರಿ-ಎಂಎಲ್ಸಿ- ಮುಜರಾಯಿ ಇಲಾಖೆ/ ಪ್ರಾಥಮಿಕ ಶಿಕ್ಷಣ ಇಲಾಖೆ

13.  ಮಾಧುಸ್ವಾಮಿ-ಚಿಕ್ಕನಾಯಕನಹಳ್ಳಿ-ಕೃಷಿ

14. ಸಿ.ಸಿ.ಪಾಟೀಲ್-ನರಗುಂದ-ಕನ್ನಡ ಮತ್ತು ಸಂಸ್ಕೃತಿ

15.  ಎಚ್.ನಾಗೇಶ್-ಮುಳಬಾಗಿಲು- ಸಣ್ಣ ಕೈಗಾರಿಕೆ

16.  ಪ್ರಭು ಚವ್ಹಾಣ್-ಔರಾದ್- ಕ್ರೀಡೆ ಮತ್ತು ಯುವಜನ

17. ಶಶಿಕಲಾ ಜೊಲ್ಲೆ-ನಿಪ್ಪಾಣಿ-ಮಹಿಳಾ ಮತ್ತು ಮಕ್ಕಳ ಕಲ್ಯಾಣ