ಬೆಳಗಾವಿ [ಆ.21]:  ಕಿತ್ತೂರು ರಾಣಿ ಚನ್ನಮ್ಮ, ಬೆಳವಾಡಿ ಮಲ್ಲಮ್ಮರಂತಹ ವೀರವನಿತೆಯರ ನಾಡಾಗಿರುವ ಬೆಳಗಾವಿ ಜಿಲ್ಲೆಯ ಮಹಿಳೆ ಯೊಬ್ಬರಿಗೆ ಎರಡೂವರೆ ದಶಕಗಳ ಬಳಿಕ ಸಚಿವ ಸ್ಥಾನ ಒಲಿದುಬಂದಿದೆ.

ನಿಪ್ಪಾಳಿ ಕ್ಷೇತ್ರದ ಶಾಸಕಿ ಶಶಿಕಲಾ ಜೊಲ್ಲೆ ಯಡಿಯೂರಪ್ಪ ಸಂಪುಟದಲ್ಲಿ ಮಂತ್ರಿಯಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. 

1994 ರಲ್ಲಿ ಅಥಣಿ ಕ್ಷೇತ್ರದಿಂದ ಜಯ ಸಾಧಿಸಿದ್ದ ಲೀಲಾ ದೇವಿ ಆರ್. ಪ್ರಸಾದ್ ಅವರು ಜನತಾದಳ ಸರ್ಕಾರ ದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆಯಾಗಿದ್ದೇ ಕೊನೆಯದಾಗಿತ್ತು. 

ಈಗ ಸಚಿವ ಸ್ಥಾನ ವಂಚಿತರ ಕಣ್ಣು ಎತ್ತ? ಮತ್ತೊಂದು ಆಫರ್

ಬಳಿಕ ಜಿಲ್ಲೆಯ ಯಾವ ಶಾಸಕಿಗೂ ಸಚಿವ ಸ್ಥಾನದ ಭಾಗ್ಯ ಲಭಿಸಿರಲಿಲ್ಲ. ಇದೀಗ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ನಿಪ್ಪಾಣಿ ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿರುವ ಶಶಿಕಲಾ ಜೊಲ್ಲೆಗೆ ಮಂತ್ರಿ ಸ್ಥಾನದ ಅದೃಷ್ಟ ಒಲಿದಿದೆ.