ಬಹುಮತ ಪಡೆಯುವಲ್ಲಿ ಎಡವಿದ ದೋಸ್ತಿ ಸರ್ಕಾರ ಈಗಾಗಲೇ ಪತನಗೊಂಡಿದ್ದು, ಎಚ್. ಡಿ ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಪ್ರಹಸನ ಕೊನೆಯಾಗುತ್ತಿದ್ದಂತೆಯೇ ಅತ್ತ ಬಿಜೆಪಿ ಪಕ್ಷ ಸರ್ಕಾರ ರಚಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸುತ್ತಿದೆ. ಅಲ್ಲದೇ ಈ ಹಿಂದೆ ನಡೆದ ಯಾವುದೇ ತಪ್ಪು ಮರುಕಳಿಸದಂತೆ ವಿಶೇಷ ಎಚ್ಚರಿಕೆ ವಹಿಸಲಾಗಿದ್ದು, ಸರ್ಕಾರ ರಚನೆಯಲ್ಲಿ ರಾಷ್ಟ್ರೀಯ ನಾಯಕರೇ ವಹಿಸಿಕೊಳ್ಳಲಿದ್ದಾರೆ.  

ಇನ್ನು ಈ ಬಾರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್ ಯಡಿಯೂರಪ್ಪ ಮತ್ತೊಮ್ಮೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವುದು ಬಹುತೇಕ ಖಚಿತವಾಗಿದೆ. ಹೀಗಿರುವಾಗ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ಯಾರಿಗೆ ಅವಕಾಶ ಸಿಗುತ್ತೆ? ಯಾವೆಲ್ಲಾ ಶಾಸಕರಿಗೆ ಮಂತ್ರ ಸ್ಥಾನ ಸಿಗುತ್ತೆ? ಇಲ್ಲಿದೆ ಸಂಭಾವ್ಯ ಪಟ್ಟಿ

ತರಾತುರಿಯಲ್ಲಿ ಸರ್ಕಾರ ರಚನೆ: ರಾಜ್ಯ ಬಿಜೆಪಿಗೆ ಬ್ರೇಕ್ ಹಾಕಿದ ಹೈಕಮಾಂಡ್

* ಕೆ. ಎಸ್. ಈಶ್ವರಪ್ಪ- ಶಿವಮೊಗ್ಗ ನಗರ[ಕುರುಬ]

* ವಿ.ಸುನೀಲ್ ಕುಮಾರ್- ಕಾರ್ಕಳ[ಈಡಿಗ]

* ಆರ್ ಅಶೋಕ್- ಪದ್ಮನಾಭನಗರ[ಒಕ್ಕಲಿಗ]

* ಸಿ. ಟಿ. ರವಿ- ಚಿಕ್ಕಮಗಳೂರು[ಒಕ್ಕಲಿಗ]

* ಕೆ. ಜಿ. ಬೋಪಯ್ಯ- ಮಡಿಕೇರಿ[ಅರೆಭಾಷೆ ಗೌಡ]

* ಬಸವರಾಜ್ ಬೊಮ್ಮಾಯಿ- ಶಿಗ್ಗಾಂವ್[ಲಿಂಗಾಯತ]

* ಮಾಧುಸ್ವಾಮಿ - ಚಿಕ್ಕನಾಯಕನಹಳ್ಳಿ[ಲಿಂಗಾಯತ]

* ಉಮೇಶ್ ಕತ್ತಿ- ಹುಕ್ಕೇರಿ[ಲಿಂಗಾಯತ]

* ಬಸನಗೌಡ ಪಾಟೀಲ್ ಯತ್ನಾಳ್- ವಿಜಯಪುರ ನಗರ[ಲಿಂಗಾಯತ]

* ಶಶಿಕಲಾ ಜೊಲ್ಲೆ- ನಿಪ್ಪಾಣಿ[ಲಿಂಗಾಯತ]

* ಕಳಕಪ್ಪ ಬಂಡಿ- ರೋಣ[ಲಿಂಗಾಯತ]

* ಅರವಿಂದ್ ಬೆಲ್ಲದ್ -ಧಾರವಾಡ[ಲಿಂಗಾಯತ]

* ಮುರುಗೇಶ್ ನಿರಾಣಿ - ಬಿಳಗಿ[ಲಿಂಗಾಯತ]

* ಎಸ್ ವಿ ರವೀಂದ್ರನಾಥ್-ದಾವಣಗೆರೆ[ಲಿಂಗಾಯತ]

* ದತ್ತಾತ್ತ್ರೇಯ ಪಾಟೀಲ್ ರೇವೂರು- ಕಲಬುರಗಿ ದಕ್ಷಿಣ[ಲಿಂಗಾಯತ]

* ವಿಶ್ವೇಶ್ವರ ಹೆಗಡೆ ಕಾಗೇರಿ- ಶಿರಸಿ[ಬ್ರಾಹ್ಮಣ]

* ಎಸ್ ಎ ರಾಮದಾಸ್- ಕೃಷ್ಣರಾಜ[ಬ್ರಾಹ್ಮಣ]

* ಎಸ್ ಆಂಗಾರ- ಸುಳ್ಯ[ದಲಿತ (ಬಲ)]

* ಗೋವಿಂದ್ ಕಾರಜೋಳ- ಮುಧೋಳ[ದಲಿತ (ಎಡ)]

* ಶ್ರೀರಾಮುಲು- ಮೊಳಕಾಲ್ಮೂರು[ವಾಲ್ಮೀಕಿ]

* ಜಗದೀಶ್ ಶೆಟ್ಟರ್ - ವಿಧಾನಸಭಾಧ್ಯಕ್ಷ.

ಜಾತಿ, ಜಿಲ್ಲೆ, ಪಕ್ಷ ನಿಷ್ಠೆ, ಹಿರಿತನ, ಅತೃಪ್ತರ ಸಹಕಾರವೇ ಮಾನದಂಡದ ಮೇಲೆ ಬಿಎಸ್‌ವೈ ಮಂತ್ರಿಮಂಡಲ ರಚನೆಯಾಗಲಿದೆ ಎಂದು ಉ್ನನತ ಮೂಲಗಳು ತಿಳಿಸಿವೆ.

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಕಳೆದ ಮೂರು ವಾರಗಳಿಂದ ಏನೇನಾಯ್ತು?