Asianet Suvarna News Asianet Suvarna News

ರಾಹುಲ್‌ ಗಾಂಧಿಗೆ ಕರ್ನಾಟಕ ಬಿಜೆಪಿಯಿಂದ ಪಂಚ ಪ್ರಶ್ನೆ

ಕರ್ನಾಟಕದಲ್ಲಿ ಚುನಾವಣಾ ಪ್ರವಾಸ ಕೈಗೊಳ್ಳಲಿರುವ ರಾಹುಲ್‌ ಗಾಂಧಿ ಅವರಿಗೆ ಬಿಜೆಪಿ ಕರ್ನಾಟಕಕ್ಕೆ ಸಂಬಂಧಪಟ್ಟ ಐದು ಪ್ರಶ್ನೆಗಳನ್ನು ಕೇಳಿದ್ದು, ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಉತ್ತರಿಸುವಂತೆ ಒತ್ತಾಯಿಸಿದೆ.

Karnataka BJP Ask Question To Rahul Gandhi

ಬೆಂಗಳೂರು : ಕರ್ನಾಟಕದಲ್ಲಿ ಚುನಾವಣಾ ಪ್ರವಾಸ ಕೈಗೊಳ್ಳಲಿರುವ ರಾಹುಲ್‌ ಗಾಂಧಿ ಅವರಿಗೆ ಬಿಜೆಪಿ ಕರ್ನಾಟಕಕ್ಕೆ ಸಂಬಂಧಪಟ್ಟ ಐದು ಪ್ರಶ್ನೆಗಳನ್ನು ಕೇಳಿದ್ದು, ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಉತ್ತರಿಸುವಂತೆ ಒತ್ತಾಯಿಸಿದೆ.

ಬುಧವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಅನಂತಕುಮಾರ್‌, ರಾಹುಲ್‌ ಸಾರಥ್ಯ ಎಂದರೆ ಅದು ಕಾಂಗ್ರೆಸ್‌ ಪತನ ಮತ್ತು ವಿಘಟನೆ. ರಾಹುಲ್‌ ಅಧ್ಯಕ್ಷ ಹುದ್ದೆಗೇರಿದ ದಿನದಿಂದ ಕಾಂಗ್ರೆಸ್‌ ಪತನಕ್ಕೆ ಕಣಗಣನೆ ಶುರುವಾಗಿದೆ ಎಂದರು.

ರಾಹುಲ್‌ ಗಾಂಧಿ ಈ ಹಿಂದೆ ‘ಭಾರತ್‌ ಖೋಜೊ’ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಭಾರತ್‌ ಕೋಜೋ ಕಾರ್ಯಕ್ರಮದಡಿ ಮಧ್ಯಪ್ರದೇಶ, ಗುಜರಾತ್‌, ಛತೀಸ್‌ಗಡ್‌, ಜಾರ್ಖಂಡ್‌ ಸೇರಿದಂತೆ ಹಲವು ರಾಜ್ಯಗಳಿಗೆ ಭೇಟಿ ನೀಡಿದ್ದರು. ಭಾರತ್‌ ಖೋಜೊ ಕಾರ್ಯಕ್ರಮವನ್ನು ‘ಕಾಂಗ್ರೆಸ್‌ ಖೋಜೊ’ ಕಾರ್ಯಕ್ರಮವನ್ನಾಗಿ ಪರಿವರ್ತಿಸಿದ ಕೀರ್ತಿ ರಾಹುಲ್‌ಗೆ ಗಾಂಧಿಗೆ ಸಲ್ಲುತ್ತದೆ ಎಂದು ವ್ಯಂಗ್ಯವಾಡಿದರು.

ಈಗಾಲೇ ರಾಹುಲ್‌ ಗಾಂಧಿ ಹೆಜ್ಜೆ ಇಟ್ಟಲೆಲ್ಲಾ ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡಿದೆ. ಮುಂದಿನ ಸರದಿ ಕರ್ನಾಟಕದ್ದು. ಮುಂದಿನ ದಿನಗಳಲ್ಲಿ ಪುದುಚೇರಿ ಮತ್ತು ಪಂಜಾಬ್‌ನಲ್ಲೂ ಕಾಂಗ್ರೆಸ್‌ ಅಧಿಕಾರ ಕಳೆದುಕೊಳ್ಳಲಿದೆ. ರಾಹುಲ್‌ ಅವರನ್ನು ಜನ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಛೇಡಿಸಿದರು.

ರಾಹುಲ್‌ಗೆ ಕೇಳಿರುವ ಪ್ರಶ್ನೆಗಳು

1.ಕಳೆದ ನಾಲ್ಕೂವರೆ ವರ್ಷದಲ್ಲಿ ಕರ್ನಾಟಕದಲ್ಲಿ 3718 ರೈತರ ಆತ್ಮಹತ್ಯೆಗೆ ಶರಣಾಗಿದ್ದು, ದೇಶದಲ್ಲಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡ ರಾಜ್ಯ ಎಂಬ ಕುಖ್ಯಾತಿ ಪಡೆದಿದೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಕಡಿಮೆಯಾಗಿದೆ. ರೈತರ ಆತ್ಮಹತ್ಯೆ ತಡೆಗೆ ಯಾವ ಕ್ರಮ ಕೈಗೊಳ್ಳಲಾಗಿದೆ?

2.ಯುಪಿಎ ಸರ್ಕಾರದ 10 ವರ್ಷದ ಅವಧಿಯಲ್ಲಿ ಪ್ರಕೃತಿ ವಿಕೋಪ ಮತ್ತು ಬರ ಪರಿಹಾರಕ್ಕೆ 4822 ಕೋಟಿ ರು. ಬಿಡುಗಡೆ ಮಾಡಿತ್ತು. ಮೂರು ವರ್ಷದಲ್ಲಿ ಮೋದಿ ಸರ್ಕಾರ 5693 ಕೋಟಿ ಹಣ ಬಿಡುಗಡೆ ಮಾಡಿದೆ. ಈ ಹಣದ ಬಳಕೆ ಬಗ್ಗೆ ಮಾಹಿತಿ ನೀಡಿ.

3.ಮಹಿಳೆಯರ ಸುರಕ್ಷತೆ, ಸಬಲೀಕರಣದ ಬಗ್ಗೆ ಸಹಾನುಭೂತಿ ಹೊಂದಿರುವುದಾಗಿ ರಾಹುಲ್‌ ತೋರಿಸಿಕೊಳ್ಳುತ್ತಿದ್ದಾರೆ. ಇಂಡಿಯಾ ಗೇಟ್‌ನಲ್ಲಿ ಮೋಂಬತ್ತಿ ಹಚ್ಚಿ ‘ಭೇಟಿ ಬಚಾವೋ’ ಎಂದು ಪ್ರತಿಭಟನೆ ನಡೆಸಿದ್ದರು. ರಾಜ್ಯದಲ್ಲಿ 3857 ಲೈಂಗಿಕ ದೌರ್ಜನ್ಯ, 800ಕ್ಕೂ ಹೆಚ್ಚು ಹೆಚ್ಚಿನ ದಲಿತ ಮಹಿಳೆಯರ ಮೇಲೆ ಅತ್ಯಾಚಾರ, 7523ರ ಮಹಿಳೆಯರ ಹತ್ಯೆ ನಡೆದಿದೆ. ರಾಜ್ಯದಲ್ಲೂ ಮೋಂಬತ್ತಿ ಹಚ್ಚಿ ಪ್ರತಿಭಟನೆ ನಡೆಸುವಿರಾ?

4.ಕರ್ನಾಟಕದಲ್ಲಿ 2015ರಲ್ಲಿ ಒಂದೇ ವರ್ಷದಲ್ಲಿ 254 ಕೋಟಿ ಗಲಭೆ ಪ್ರಕರಣ ವರದಿಯಾಗಿದೆ. ರಾಜ್ಯ ಸರ್ಕಾರ ತುಷ್ಠೀಕರಣ, ವೋಟ್‌ ಬ್ಯಾಂಕ್‌ ರಾಜಕಾರಣ ಮಾಡುತ್ತಿದೆ. ಬಹುಸಂಖ್ಯಾತರ ಮೇಲಿನ ದೌರ್ಜನ್ಯ, ದೌರ್ಜನ್ಯ ಮಾಡುತ್ತಿರುವವರಿಗೆ ರಕ್ಷಣೆ ನೀಡುತ್ತಿದೆ. ಅದಕ್ಕೆ ಉದಾಹರಣೆ ಎಂಬಂತೆ ಪಿಎಫ್‌ಐ ಮತ್ತು ಎಸ್‌ಟಿಪಿಐ ಸಂಘಟನೆ ಮೇಲಿನ 175 ಪ್ರಕರಣ ಹಿಂಪಡೆದಿರುವ ಕುರಿತು ಉತ್ತರಿಸಬೇಕು?

5.ಮೂಲಸೌಕರ್ಯ ಯೋಜನೆಗಳಲ್ಲಿ ಒಂದಕ್ಕಿಂತ ಒಂದು ದೊಡ್ಡ ಭ್ರಷ್ಟಾಚಾರಗಳು ನಡೆಯುತ್ತಿವೆ. ಇದಕ್ಕೆ ಬೆಂಗಳೂರಿನ ಆರ್ಟಿರಿಯಲ್‌ ವರ್ತುಲ ರಸ್ತೆ ಒಂದು ನಿದರ್ಶನವಾಗಿದೆ. 10.7 ಕಿ.ಮೀ ಉದ್ದದ ಈ ರಸ್ತೆ 468 ಕೋಟಿ ರು. ನಿಗದಿಪಡಿಸಲಾಗಿದೆ. ವಿಚಿತ್ರ ಎಂದರೆ ಇಸ್ರೋನ ಮಂಗಳಯಾನ ಖರ್ಚಿಗಿಂತಲೂ ಇದು ಅಧಿಕ. ಇವೆರಡನ್ನೂ ಹೋಲಿಕೆ ಮಾಡಿ ರಾಹುಲ್‌ಗಾಂಧಿ ಏನು ಹೇಳುತ್ತಾರೆ?

Follow Us:
Download App:
  • android
  • ios