ಚುನಾವಣೆಗೆ ಸ್ಪರ್ಧಿಸಲು ಕ್ಯೂ ನಿಂತಿದ್ದಾರೆ ಕಾಂಗ್ರೆಸ್ ಮುಖಂಡರ ಮಕ್ಕಳು

First Published 6, Mar 2018, 12:39 PM IST
Karnataka Assembly Election News
Highlights

ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ, ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್, ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ಮತ್ತು ಜಯಚಂದ್ರ ಪುತ್ರ ಸಂತೋಷ್ ಜಯಚಂದ್ರ. ಹೀಗೆ ಕಾಂಗ್ರೆಸ್‌ನ ಘಟಾನುಘಟಿಗಳ ಪುತ್ರರು ಚುನಾವಣೆಗೆ ಸ್ಪರ್ಧಿಸಲು ಕೆಪಿಸಿಸಿ ಕಚೇರಿಗೆ ಆಗಮಿಸಿ ಅರ್ಜಿ ಪಡೆದುಕೊಂಡಿದ್ದಾರೆ.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ, ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್, ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ಮತ್ತು ಜಯಚಂದ್ರ ಪುತ್ರ ಸಂತೋಷ್ ಜಯಚಂದ್ರ. ಹೀಗೆ ಕಾಂಗ್ರೆಸ್‌ನ ಘಟಾನುಘಟಿಗಳ ಪುತ್ರರು ಚುನಾವಣೆಗೆ ಸ್ಪರ್ಧಿಸಲು ಕೆಪಿಸಿಸಿ ಕಚೇರಿಗೆ ಆಗಮಿಸಿ ಅರ್ಜಿ ಪಡೆದುಕೊಂಡಿದ್ದಾರೆ.

ಕಾಂಗ್ರೆಸ್ ಟಿಕೆಟ್‌ಗೆ ಅರ್ಜಿ ವಿತರಣೆಗೆ ಮಾ.5 ಅಂತಿಮ ದಿನವಾಗಿತ್ತು. ಆದರೆ, ಘಟಾನುಘಟಿಗಳ ಪುತ್ರರು ಹಾಗೂ ಯುವಕರನ್ನು ಹೊರತುಪಡಿಸಿದರೆ ಸಚಿವರು ಹಾಗೂ ಪ್ರಮುಖ ನಾಯಕರು ಅರ್ಜಿಯನ್ನು ಪಡೆದುಕೊಂಡಿಲ್ಲ.

ಹೀಗಾಗಿ ಕೆಪಿಸಿಸಿಯು ಅರ್ಜಿ ನೀಡುವ ದಿನಾಂಕವನ್ನು ಮುಂದೂಡಿದ್ದು, ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಇದುವರೆಗೂ 1800 ಮಂದಿ ಅರ್ಜಿಗಳನ್ನು ಪಡೆದುಕೊಂಡಿದ್ದು, ಈ ಪೈಕಿ ಯುವಕರೇ ಹೆಚ್ಚು. ಡಾ. ಯತೀಂದ್ರ ವರುಣಾ ಕ್ಷೇತ್ರಕ್ಕಾಗಿ, ಸುನೀಲ್ ಬೋಸ್ ಟಿ. ನರಸೀಪುರ, ಸೌಮ್ಯ ರೆಡ್ಡಿ ಜಯನಗರ ಹಾಗೂ ಸಂತೋಷ್ ಜಯಚಂದ್ರ ಅವರು ಚಿಕ್ಕನಾಯಕನಹಳ್ಳಿ ಕ್ಷೇತ್ರದ ಟಿಕೆಟ್‌ಗಾಗಿ ಅರ್ಜಿ ಪಡೆದುಕೊಂಡಿದ್ದಾರೆ.

ಯುವ ಕಾಂಗ್ರೆಸ್ ಅಧ್ಯಕ್ಷ ಬಸವನಗೌಡ ಬಾದರ್ಲಿ ಅವರು ಸಿಂಧನೂರು ಕ್ಷೇತ್ರಕ್ಕೆ, ವಿದ್ಯಾರ್ಥಿ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್‌ಗೌಡ ರಾಜಾಜಿನಗರ ಕ್ಷೇತ್ರಕ್ಕೆ ಮತ್ತು ಯುವ ಕಾಂಗ್ರೆಸ್ ಪದಾಧಿಕಾರಿಗಳಾದ ಉಮೇಶ್ ಬೈರೇಗೌಡ, ಅಮೃತ್‌ಗೌಡ ದಾಸರಹಳ್ಳಿ ಕ್ಷೇತ್ರಕ್ಕಾಗಿ ಅರ್ಜಿಯನ್ನು ಪಡೆದುಕೊಂಡಿದ್ದಾರೆ.

loader