ಕರ್ನಾಟಕ ಚುನಾವಣೆ : ಬಾಡಿಗೆ ವಿಮಾನಗಳಿಗೆ ಸುರಕ್ಷತಾ ನಿಯಮ

First Published 20, Apr 2018, 9:23 AM IST
Karnataka Assembly Election 2018 News
Highlights

ಕರ್ನಾಟಕ ಚುನಾವಣೆಯ ವೇಳೆ ವಿವಿಐಪಿಗಳ ಓಡಾಟದ ಹಿನ್ನೆಲೆಯಲ್ಲಿ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಬಾಡಿಗೆ ವಿಮಾನ ನಿರ್ವಹಣೆ ಕಂಪನಿಗಳಿಗೆ ಸುರಕ್ಷತಾ ನಿಯಮಾಳಿ ರೂಪಿಸಿದೆ.

ಮುಂಬೈ: ಕರ್ನಾಟಕ ಚುನಾವಣೆಯ ವೇಳೆ ವಿವಿಐಪಿಗಳ ಓಡಾಟದ ಹಿನ್ನೆಲೆಯಲ್ಲಿ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಬಾಡಿಗೆ ವಿಮಾನ ನಿರ್ವಹಣೆ ಕಂಪನಿಗಳಿಗೆ ಸುರಕ್ಷತಾ ನಿಯಮಾಳಿ ರೂಪಿಸಿದೆ. ವಿಮಾನದಲ್ಲಿ ಯಾವುದೇ ಅನಿಧಿಕೃತ ಹಣ, ಮಾದಕದ್ರವ್ಯ, ಶಸ್ತ್ರಾಸ್ತ್ರಗಳನ್ನು ಸಾಗಿಸುವುದನ್ನು ನಿಷೇಧಿಸಲಾಗಿದೆ.

ಪ್ರಯಾಣಿಕರ ಮಾಹಿತಿಯನ್ನು ವಿಮಾನಯಾನ ನಿಯಂತ್ರಣ ಸಂಸ್ಥೆಗೆ ತಿಳಿಸುವಂತೆಯೂ ಸೂಚಿಸಲಾಗಿದೆ. ಒಂದು ವೇಳೆ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸದೇ ಇದ್ದರೆ ಪೈಲಟ್‌ಗಳು

ಮತ್ತು ನಿರ್ವಹಣಾ ಕಂಪನಿಯ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.

loader