ಬೆಂಗಳೂರು :  ಕುತೂ​ಹ​ಲ​ಕಾರಿ ಸಂಗ​ತಿ​ಯೆಂದರೆ, ಪ್ರಭಾವಿ ಸಚಿ​ವರು ತಮ್ಮ ಖಾತೆ​ಗ​ಳನ್ನು ಉಳಿ​ಸಿ​ಕೊ​ಳ್ಳಲು ಹರ​ಸಾಹಸ ನಡೆ​ಸು​ತ್ತಿ​ದ್ದರೆ ಸಚಿವ ಸಂಪು​ಟದ ಏಕೈಕ ಮಹಿಳಾ ಸದಸ್ಯೆ ಜಯ​ಮಾಲಾ ಅವ​ರು ತಮ್ಮ ಬಳಿ ಹೊಂದಿ​ರುವ ಮಹಿಳಾ ಮತ್ತು ಮಕ್ಕಳ ಅಭಿ​ವೃದ್ಧಿ ಖಾತೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಖಾತೆ ಎರ​ಡನ್ನೂ ಉಳಿ​ಸಿ​ಕೊ​ಳ್ಳುವ ಸಾಧ್ಯ​ತೆ​ಯಿದೆ.

ಕನ್ನ​ಡ​ಪ್ರಭದೊಂದಿಗೆ ಮಾತ​ನಾ​ಡಿದ ಪಕ್ಷದ ಉನ್ನತ ನಾಯ​ಕ​ರೊ​ಬ್ಬರು, ಜಯ​ಮಾಲಾ ಅವರ ಬಳಿ ಇರುವ ಎರಡು ಖಾತೆ​ಗಳು ಅವರ ಬಳಿಯೇ ಮುಂದು​ವ​ರೆಯುವ ಸಾಧ್ಯ​ತೆ ಹೆಚ್ಚಿದೆ. 

ಉಳಿ​ದಂತೆ ಗೃಹ, ಗ್ರಾಮೀ​ಣಾ​ಭಿ​ವೃದ್ಧಿ, ಐಟಿ-ಬಿಟಿ, ವೈದ್ಯ ಶಿಕ್ಷ​ಣ​ದಂತಹ ಪ್ರಮುಖ ಖಾತೆ​ಗಳನ್ನು ಹಿಂಪ​ಡೆ​ಯುವ ವಿಚಾ​ರದ ಬಗ್ಗೆ ರಾಹುಲ್‌ ಗಾಂಧಿ ಮಟ್ಟ​ದಲ್ಲೇ ತೀರ್ಮಾ​ನ​ವಾ​ಗ​ಬೇ​ಕಿದೆ ಎಂದು ತಿಳಿ​ಸಿ​ದರು.