ಹುಬ್ಬಳ್ಳಿ [ಜೂ.21] : ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಮೈತ್ರಿ ಸರ್ಕಾರ ಅತ್ಯಂತ ಸುಭದ್ರವಾಗಿದೆ.  ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಐದು ವರ್ಷ ಪೂರೈಸಲಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. 

ಹುಬ್ಬಳ್ಳಿಯಲ್ಲಿ ಮಾತನಾಡಿದ ಶಿವಕುಮಾರ್  ಕುಮಾರಸ್ವಾಮಿಯವರಿಗೆ ನಾವೇ ಹೋಗಿ ಐದು ವರ್ಷ ಇರಬೇಕು ಎಂದು ಹೇಳಿದ್ದೇವೆ.  ಆದರೆ ಬಿಜೆಪಿಯಿಂದ ನಮ್ಮ ಸರ್ಕಾರ ಉರುಳಿಸುವ ಯತ್ನ ನಡೆಸುತ್ತಿದ್ದರು. ಆದರೀಗ ಯಾರ ಸಹವಾಸಕ್ಕೂ ಹೋಗುವುದಿಲ್ಲ ಎನ್ನುತ್ತಿದ್ದಾರೆ. ಅವರ ಉರುಳಿಸುವ ಯತ್ನ ತಣ್ಣಗಾಗಿದೆ ಎಂದರು.

ಇನ್ಮುಂದೆ ಎಲ್ಲಾ ಜಯಂತಿಗಳು ಒಂದೇ ದಿನ ?

ಇನ್ನು ಪಕ್ಷದ ಬಗ್ಗೆ ಯಾವುದೇ ಹೇಳಿಕೆ ನೀಡಬಾರದು ಎಂದು ಈಗಾಗಲೇ ಹಿರಿಯರಿಂದ ಆದೇಶವಾಗಿದೆ. ದಿನೇಶ್ ಗುಂಡೂರಾವ್, ಸಿಎಲ್ ಪಿ ನಾಯಕರು ಈ ಬಗ್ಗೆ ಹೇಳಿದ್ದಾರೆ. ಆದ್ದರಿಂದ ಪಕ್ಷ ಬಗ್ಗೆ ತಾವು ಯಾವುದೇ ರೀತಿಯ ಹೇಳಿಕೆ ನೀಡಲ್ಲ ಎಂದು ಶಿವಕುಮಾರ್ ಹೇಳಿದರು. 

ಇನ್ನು ಮಧ್ಯಂತರ ಚುನಾವಣೆ ನಡೆದರೂ ನಡೆಯಬಹುದು ಎಂಬ ದೇವೇಗೌಡರ ಹೇಳಿಕೆ ಬಗ್ಗೆಯೂ ಪ್ರತಿಕ್ರಿಯಿಸಿದ್ದು, ಅವರಿಗೆ ಯಾವುದೇ ರೀತಿ ಅಸಮಾಧಾನವಿಲ್ಲ. ಅವರ ಅಭಿಪ್ರಾಯ ಹೇಳಿದ್ದಾರೆ.  ನಮ್ಮ ಸರ್ಕಾರ ಅತ್ಯಂತ ಸುಭದ್ರವಾಗಿ ಮುಂದುವರಿಯುತ್ತದೆ ಎಂದರು.