ಬಾಲಿವುಡ್ ನಟಿ ಸನ್ನಿ ಲಿಯೋನ್ ವಿರುದ್ಧ ಮತ್ತೆ ಆಕ್ರೋಶ ಭುಗಿಲೆದ್ದಿದೆ.

ಬೆಂಗಳೂರು (ಡಿ.15): ಬಾಲಿವುಡ್ ನಟಿ ಸನ್ನಿ ಲಿಯೋನ್ ವಿರುದ್ಧ ಮತ್ತೆ ಆಕ್ರೋಶ ಭುಗಿಲೆದ್ದಿದೆ.

ಸನ್ನಿ ಲಿಯೋನ್ ಕಾರ್ಯಕ್ರಮ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ಆಕ್ರೋಶ ವ್ಯಕ್ತಪಡಿಸಿ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಬಳಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ಕನ್ನಡದ ಸಂಸ್ಕೃತಿಯಲ್ಲ. ಪರಭಾಷಿಕರು ಕನ್ನಡದ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಕಾರ್ಯಕ್ರಮ ನಡೆಸಬಾರದು ಎಂದು ಆಗ್ರಹಿಸಿದ್ದಾರೆ. ಈಗಾಗಲೇ ಟೈಮ್ಸ್‌ ಕ್ರಿಯೆಷನ್ ಗೆ ಎಚ್ಚರಿಕೆ ಕೊಟ್ಟಿದ್ದರೂ ಆಯೋಜಕರು ಕಾರ್ಯಕ್ರಮ ಕೈ ಬಿಟ್ಟಿಲ್ಲ. ವಿರೋಧದ‌ ನಡುವೆಯೂ ಆಯೋಜನೆಗೆ ಮುಂದಾಗಿರೋದಕ್ಕೆ ಆಕ್ರೋಶ ಹೊರಹಾಕಿದ್ದಾರೆ.

ಯಾವುದೇ ಕಾರಣಕ್ಕೂ ಕಾರ್ಯಕ್ರಮ ನಡೆಸಬಾರದು ಎಂದು ಕರವೇ ಯುವ ಸೇನೆ ಆಗ್ರಹಿಸಿದೆ. ಈಗಾಗಲೇ ಎಚ್ಚರಿಕೆ ಕೊಟ್ಟಿದ್ದರೂ ಆಯೋಜಕರು ಕಾರ್ಯಕ್ರಮ ಕೈಬಿಡಲು ಒಪ್ಪದೇ ಭಾರೀ ವಿರೋಧದ‌ ನಡುವೆಯೂ ಆಯೋಜನೆಗೆ ಮುಂದಾಗಿರೋದಕ್ಕೆಕರವೇ ಯುವ ಸೇನೆ ಪ್ರತಿಭಟಿಸುತ್ತಿದೆ. ಸನ್ನಿಲಿಯೋನ್ಅರೆಬೆತ್ತಲೆಪೋಟೋದಹಿಸಿಪ್ರತಿಭಟನಾಕಾರರು ಆಕ್ರೋಶವ್ಯಕ್ತಪಡಿಸಿದ್ದಾರೆ.