ಬೆಂಗಳೂರು (ಆ.27): ರಾಜ್ಯ ಬಿಜೆಪಿ ರಾಜಕಾರಣ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸೌಂಡ್ ಮಾಡುತ್ತಿದೆ.  ಡಿಸಿಎಂ ಹಾಗೂ ನೂತನ ಸಚಿವರಿಗೆ ಖಾತೆ ಹಂಚಿಕೆಯಲ್ಲಿ ಹೈಕಮಾಂಡ್ ತೆಗೆದುಕೊಂಡ ಕೆಲ ನಿರ್ಧಾರಗಳು ರಾಜ್ಯ ಬಿಜೆಪಿ ನಾಯಕರಿಗೆ ಅಚ್ಚರಿಗೆ ಕಾರಣವಾಗಿದೆ.

ಒಂದೆಡೆ ಸಚಿವ ಸ್ಥಾನ ಸಿಗದಿದ್ದಕ್ಕೆ ಕೆಲ ಶಾಸಕರು ಅಸಮಾಧಾನಗೊಂಡಿದ್ದರೆ, ಮತ್ತೊಂದೆಡೆ ಖುದ್ದು ಸಚಿವರು ಸಹ ಖಾತೆ ಹಂಚಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇದ್ರಿಂದ ಬಿಜೆಪಿ ನಾಯಕರ ವಿರುದ್ಧ ಕರಾವಳಿ ಹಿಂದೂ ‌ಕಾರ್ಯಕರ್ತರ ಕಿಡಿಕಾರಿದ್ದಾರೆ.

ಜಾರಕಿಹೊಳಿ, ಕತ್ತಿ ಕುಟುಂಬ ಹಣಿಯಲು BJP ಮಾಸ್ಟರ್ ಪ್ಲಾನ್

ಅಧಿಕಾರಕ್ಕಾಗಿ ರಾಜ್ಯ ಬಿಜೆಪಿ ನಾಯಕರ ಹೈಡ್ರಾಮವನ್ನು ಖಂಡಿಸಿರುವ ಹಿಂದೂಪರ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಮನೆಮನೆಗೆ ಹೋಗಿ ಮತ ಕೇಳುವ ಕಾರ್ಯಕರ್ತರನ್ನ ಅನ್ಯಪಕ್ಷ, ದೇಶದ್ರೋಹಿಗಳ ಎದುರು ತಲೆ ತಗ್ಗಿಸುವಂತೆ ಮಾಡಬೇಡಿ ಅಂತೆಲ್ಲ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

17 ಸಚಿವರಿಗೆ ಕೊನೆಗೂ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ? ಇಲ್ಲಿದೆ ಅಧಿಕೃತ ಪಟ್ಟಿ

ನಿಮ್ಮ ಅತಂತ್ರ ರಾಜಕೀಯದ ಬದಲು ಸಮ್ಮಿಶ್ರ ಸರ್ಕಾರವೇ ಇರುತ್ತಿತ್ತಲ್ಲವೇ? ಅಧಿಕಾರದ ಮದ ಏರಿದ ನಾಮರ್ದ ಸ್ವಾರ್ಥ ಬಿಜೆಪಿ ನಾಯಕರು ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಕಾರ್ಯಕರ್ತರನ್ನ ಅವಮಾನಿಸೋ ನೀವುಗಳು ತಾಯಿ ಚಾಮುಂಡಿಯ ಆಣೆ ಸರ್ವನಾಶ ಆಗುತ್ತೀರಾ ಎಂದು ಇಡೀ ಶಾಪ ಹಾಕಿದ್ದಾರೆ.