ಬೆಳಗಾವಿ [ಆ.27]:  ವಿಧಾನಸಭಾ ಚುನಾವಣೆಯಲ್ಲಿ ಸೋತ ಬಿಜೆಪಿ ನಾಯಕ ಲಕ್ಷ್ಮಣ್ ಸವದಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿದ್ದು, ಈ ಮೂಲಕ ಜಾರಕಿಹೊಳಿ ಸಹೋದರರ ಪಾರುಪತ್ತೆಗೆ ಬ್ರೇಕ್ ಹಾಕಲು ಬಿಜೆಪಿ ಹೈ ಕಮಾಂಡ್ ಮಾಸ್ಟರ್ ಪ್ಲಾನ್ ಮಾಡಿದೆ ಎನ್ನಲಾಗುತ್ತಿದೆ. 

ರಾಜ್ಯದಲ್ಲಿ ಸದ್ಯ ಯಾವುದೇ ಸ್ಥಾನವೂ ಇಲ್ಲದೇ ಜಾರಕಿಹೊಳಿ ಸಹೋದರರ ಭವಿಷ್ಯ ಅತಂತ್ರವಾಗಿದೆ. ಯಾವುದೇ ಸರ್ಕಾರವಿರಲಿ ಪಾರುಪತ್ಯ ಪಡೆದುಕೊಳ್ಳುತ್ತಿದ್ದ ಸಹೋದದರಿಗೆ ದಶಕಗಳ ಬಳಿಕ ಮೊದಲ ಬಾರಿಗೆ ಸಚಿವ ಸ್ಥಾನ ತಪ್ಪಿದಂತಾಗಿದೆ. 

ಇದೀಗ ರಾಜ್ಯದಲ್ಲಿ ಜಾರಕಿಹೊಳಿ ಮತ್ತು ಕತ್ತಿ ಕುಟುಂಬ ಬಿಟ್ಟು ಸರ್ಕಾರ ನಡೆಸಬಹುದು ಎಂದು ಈ ಮೂಲಕ ಸಂದೇಶ  ರವಾನೆ ಮಾಡಲಾಗಿದೆ. ರಾಜಕೀಯದಲ್ಲಿ ಈ ಎರಡು ಕುಟುಂಬಗಳನ್ನು ವ್ಯವಸ್ಥಿತವಾಗಿ ಹಣಿಯಲು ಪ್ಲಾನ್ ಮಾಡಲಾಗಿದೆ. 

ರಾಜ್ಯ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇತ್ತ ಸೋತ ಲಕ್ಷ್ಮಣ್ ಸವದಿಗೆ ಡಿಸಿಎಂ ಸ್ಥಾನ ಸಿಗುತ್ತಿದ್ದಂತೆ ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಆಕ್ರೋಶಗೊಂಡಿದ್ದಾರೆ. ತಮ್ಮ ಸಹೋದರ ರಮೇಶ್ ಜಾರಕಿಹೊಳಿಗೆ ಡಿಸಿಎಂ ಹುದ್ದೆ ನೀಡಬೇಕೆಂದು ಕೇಳಿದ್ದ ಅವರು ಅಸಮಾಧಾನ ಹೊರಹಾಕುತ್ತೊದ್ದಾರೆ. ಆದರೆ ಇನ್ನೊಂದು ಅವಧಿಯ ಸಂಪುಟ ವಿಸ್ತರಣೆ ಬಾಕಿ ಇರುವ ಕಾರಣ ಸೈಲೆಂಟ್ ಆಗಿ ಕಾದು ನೋಡುವ ತಂತ್ರದ ಮೊರೆ ಹೋಗಿದ್ದಾರೆ. ಇದರೊಂದಿಗೆ ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಸಹ ಇದೇ ಹಾದಿ ಹಿಡಿದಿದ್ದಾರೆ.