ತಾವು ‘ಠೇಕೇದಾರ’ (ಕಾವಲುಗಾರ) ಎಂದು ಹೇಳಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು, ಕಳ್ಳರು ದೇಶವನ್ನು ದೋಚಿಕೊಂಡು ಹೋಗುತ್ತಿದ್ದಾಗ ಸುಮ್ಮನೆ ಮಲಗಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಕಪಿಲ್‌ ಸಿಬಲ್‌ ಆರೋಪಿಸಿದ್ದಾರೆ.

ವದೆಹಲಿ : ತಾವು ‘ಠೇಕೇದಾರ’ (ಕಾವಲುಗಾರ) ಎಂದು ಹೇಳಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು, ಕಳ್ಳರು ದೇಶವನ್ನು ದೋಚಿಕೊಂಡು ಹೋಗುತ್ತಿದ್ದಾಗ ಸುಮ್ಮನೆ ಮಲಗಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಕಪಿಲ್‌ ಸಿಬಲ್‌ ಆರೋಪಿಸಿದ್ದಾರೆ.

ಎಐಸಿಸಿ ಕಚೇರಿಯಲ್ಲಿ ಶನಿವಾರ ಸುದ್ದಿಗಾರರ ಜತೆ ಅವರು ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ಮತ್ತು ಸರ್ಕಾರವು ‘ಅಕ್ರಮ ಬಂಡವಾಳೀಕರಣ’ದ ಮೊರೆ ಹೋಗಿದೆ. ಮೋದಿ ಅವರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಘನತೆಗೆ ಧಕ್ಕೆ ಉಂಟಾಗಿದೆ. ಕಳ್ಳರು ದೇಶದ ಸಂಪತ್ತನ್ನು ಲೂಟಿ ಮಾಡಿ ಪರಾರಿಯಾಗುತ್ತಿರುವಾಗ ದೇಶದ ಕಾವಲುಗಾರನಾಗಿ ಮೋದಿ ಅವರು ನಿದ್ರಿಸುತ್ತಿದ್ದಾರೆ’ ಎಂದು ಟೀಕಿಸಿದರು.

ಕಾಂಗ್ರೆಸ್‌ ಅವಧಿಯಲ್ಲಿ ಹಗರಣ ನಡೆಯಿತು ಎಂಬ ಬಿಜೆಪಿ ಆರೋಪ ತಳ್ಳಿಹಾಕಿದ ಅವರು, ‘2017ರಲ್ಲಿ ‘ಲೆಟರ್‌ ಆಫ್‌ ಅಂಡರ್‌ಟೇಕಿಂಗ್‌’ (ಅನುಮತಿ ಪತ್ರ)ಗಳಿಗೆ ಸಹಿ ಹಾಕಲಾಗಿದೆ ಎಂದು ಸಿಬಿಐ ಎಫ್‌ಐಆರ್‌ ಹೇಳುತ್ತದೆ. ಇದು ಹಗರಣವು ಎನ್‌ಡಿಎ ಅವಧಿಯಲ್ಲಿ ಹಗರಣ ನಡೆದಿದೆ’ ಎಂಬುದರ ದ್ಯೋತಕ’ ಎಂದರು.