ಕನ್ನಡಿಗರು ಡಬ್ಬಿಂಗ್ ಬೇಡವೆಂದು ಹೇಳುತ್ತಾರೆ. ಆದರೆ, ತೆಲುಗು ಭಾಷೆಯ ಸಿನಿಮಾ ಇಲ್ಲಿ ಯಶಸ್ಸು ಕಾಣುತ್ತದೆ. ಕನ್ನಡಿಗರಿಗೆ ಒಳ್ಳೆಯ ಸಿನಿಮಾವಷ್ಟೇ ಮುಖ್ಯವೆನಿಸುತ್ತದೆ, ಎಂದು ಆರ್'ಜಿವಿ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು(ಮೇ 19): ಟ್ವಿಟ್ಟರ್'ನಲ್ಲಿ ಆಗಾಗ ವಿವಾದಾಸ್ಪದ ಹೇಳಿಕೆಗಳನ್ನು ನೀಡುವ ಟಾಲಿವುಡ್/ಹಾಲಿವುಡ್ ನಿರ್ದೇಶಕ ರಾಮಗೋಪಾಲ್ ವರ್ಮಾ ಈಗ ಕನ್ನಡಿಗರ ಅಭಿಮಾನವನ್ನು ಕೆಳಕುವ ಮಾತುಗಳನ್ನಾಡಿದ್ದಾರೆ. ಕನ್ನಡಿಗರು ಕನ್ನಡ ಸಿನಿಮಾಗಿಂತ ಹೆಚ್ಚಾಗಿ ಬೇರೆ ಭಾಷೆಯ ಸಿನಿಮಾವನ್ನೇ ನೋಡುತ್ತಾರೆ ಎಂದು ಆರ್'ಜಿವಿ ಹೇಳಿದ್ದಾರೆ. ಕರ್ನಾಟಕದಲ್ಲಿ ತೆಲುಗಿನ ಬಾಹುಬಲಿ-2 ಸಿನಿಮಾ ಹೊಸ ದಾಖಲೆಯನ್ನೇ ಬರೆದ ಹಿನ್ನೆಲೆಯಲ್ಲಿ ರಾಮ್'ಗೋಪಾಲ್ ವರ್ಮಾ ಈ ಮಾತನ್ನಾಡಿದ್ದಾರೆ.
ಕನ್ನಡಿಗರು ಡಬ್ಬಿಂಗ್ ಬೇಡವೆಂದು ಹೇಳುತ್ತಾರೆ. ಆದರೆ, ತೆಲುಗು ಭಾಷೆಯ ಸಿನಿಮಾ ಇಲ್ಲಿ ಯಶಸ್ಸು ಕಾಣುತ್ತದೆ. ಕನ್ನಡಿಗರಿಗೆ ಒಳ್ಳೆಯ ಸಿನಿಮಾವಷ್ಟೇ ಮುಖ್ಯವೆನಿಸುತ್ತದೆ, ಎಂದು ಆರ್'ಜಿವಿ ಅಭಿಪ್ರಾಯಪಟ್ಟಿದ್ದಾರೆ.
ಬಾಹುಬಲಿ ಕರ್ನಾಟಕದಲ್ಲಿ ಹೊಸ ದಾಖಲೆ ಬರೆಯುತ್ತದೆ. ಕನ್ನಡಿಗರು ಕನ್ನಡ ಸಿನಿಮಾಗಿಂತ ಹೆಚ್ಚು ಬಾರಿ ಬಾಹುಬಲಿಯನ್ನು ನೋಡುತ್ತಾರೆ. ಕರ್ನಾಟಕದ ಇತಿಹಾಸದಲ್ಲಿ ಯಾವ ಸಿನಿಮಾ ಮಾಡದ ದಾಖಲೆಯನ್ನು ಬಾಹುಬಾಲಿ ಬಹಳ ಸುಲಭವಾಗಿ ಹಿಂದಿಕ್ಕಿದೆ. ಇದು ಕನ್ನಡಿಗರ ಕನ್ನಡಾಭಿಮಾನವನ್ನು ತೋರಿಸುತ್ತದೆ. ತೆಲುಗು ಸಿನಿಮಾವನ್ನು ನೋಡುವ ಕನ್ನಡಿಗರ ವಿರುದ್ಧ ಹೆಮ್ಮೆಯ ಕನ್ನಡಿಗರು ಪ್ರತಿಭಟಿಸಬೇಕು ಎಂದಿದ್ದಾರೆ ರಾಮಗೋಪಾಲ್ ವರ್ಮಾ.
"ರಕ್ತ ಚರಿತ್ರ", "ಫೂಂಕ್", "ರಂಗೀಲಾ" ಇತ್ಯಾದಿ ಸೂಪರ್'ಹಿಟ್ ಸಿನಿಮಾಗಳನ್ನು ತಯಾರಿಸಿರುವ ರಾಮಗೋಪಾಲ್ ವರ್ಮಾ ಅವರು ಶಿವರಾಜಕುಮಾರ್ ನಟನೆಯ "ಕಿಲ್ಲಿಂಗ್ ವೀರಪ್ಪನ್" ಸಿನಿಮಾ ಮೂಲಕ ಸ್ಯಾಂಡಲ್ವುಡ್'ಗೂ ಕಾಲಿಟ್ಟಿದ್ದರು. ಆದರೆ, ಆ ಸಿನಿಮಾ ಹೇಳಿಕೊಳ್ಳುವಂತಹ ಯಶಸ್ಸು ಕಾಣಲಿಲ್ಲ.
