ಚೆನ್ನೈನಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಮನೆಯಿಂದ ಹೊರಗೆ ಬರಲಾಗದೆ ಮನೆಯಲ್ಲಿ ಇರಲಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಚೆನ್ನೈನಾದ್ಯಂತ ನೂರಾರು ಮರಗಳು ಉರುಳಿರುವುದರಿಂದ ಚೆನ್ನೈನಿಂದ ಇತರೆ ಪ್ರದೇಶಗಳಿಂದ ರೈಲು, ಬಸ್, ವಿಮಾನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ

ಬೆಂಗಳೂರು(ಡಿ.13): ಚೆನ್ನೈನಲ್ಲಿ ವಾರ್ದ ಚಂಡ ಮಾರುತದ ಆರ್ಭಟ ತೀವ್ರವಾಗಿದೆ. ಹೀಗಾಗಿ ಅಲ್ಲಿ, ನಾಗರಿಕರು ಮನೆಗಳಿಂದ ಹೊರ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಕರನ್ನು ಕಾಣಲೆಂದು ಬೆಂಗಳೂರಿನಿಂದ ಚೆನ್ನೈಗೆ ತೆರಳಿದ್ದ ನಾಗರಿಕರು ವಾಪಸ್ ಬರಲಾಗದೆ ತೊಂದರೆ ಅನುಭವಿಸುತ್ತಿದ್ದಾರೆ.

ಚೆನ್ನೈನಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಮನೆಯಿಂದ ಹೊರಗೆ ಬರಲಾಗದೆ ಮನೆಯಲ್ಲಿ ಇರಲಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಚೆನ್ನೈನಾದ್ಯಂತ ನೂರಾರು ಮರಗಳು ಉರುಳಿರುವುದರಿಂದ ಚೆನ್ನೈನಿಂದ ಇತರೆ ಪ್ರದೇಶಗಳಿಂದ ರೈಲು, ಬಸ್, ವಿಮಾನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಇದರಿಂದ ಬೆಂಗಳೂರಿಗೆ ವಾಪಸ್ ಬರಲಾಗದೆ ಬೆಂಗಳೂರಿಗರು ಗಂಜಿಕೇಂದ್ರಗಳಲ್ಲಿ ದಿನ ಕಳೆಯುವಂತಾಗಿದೆ.

‘‘ಮೂರು ದಿನಗಳ ಹಿಂದೆ ಸಂಬಂಕರನ್ನು ಕಾಣಲು ಇಲ್ಲಿಗೆ ಬಂದಿದ್ದೆ. ಮಳೆಯಿಂದಾಗಿ ಮನೆಯಲ್ಲಿ ಸಂಪೂರ್ಣ ನೀರು ತುಂಬಿದ್ದು, ಎಲ್ಲ ದಿನಸಿ ವಸ್ತುಗಳು ನೀರು ಪಾಲಾಗಿವೆ. ಜತೆಗೆ ಪೊಲೀಸರು ಮನೆಗಳಿಂದ ಹೊರಗೆ ಬರದಂತೆ ಎಚ್ಚರಿಕೆ ನೀಡಿದ್ದಾರೆ. ಮನೆ ಸಂಪೂರ್ಣವಾಗಿ ನೀರಿನಲ್ಲಿ ತುಂಬಿದರಿಂದಾಗಿ ರಕ್ಷಣ ಸಿಬ್ಬಂದಿ ನಮ್ಮ ಗಂಜಿಕೇಂದ್ರಗಳಿಗೆ ತಲುಪಿಸಿದ್ದಾರೆ. ಮಳೆ ನಿಂತು ಸಂಚಾರ ಆರಂಭವಾದ ಕೂಡಲೇ ಊರಿಗೆ ಮರಳುತ್ತೇನೆ’’ ಎಂದು ಬೆಂಗಳೂರಿನ ನಿವಾಸಿ ಮನೋಹರ್ ಅವರು ತಿಳಿಸಿದ್ದಾರೆ.

ಮನೆಯ ಮೇಲೆ ಮರ ಉರುಳಿ ಸಂಪೂರ್ಣವಾಗಿ ಜಖಂಗೊಂಡಿದೆ. ಜಯಲಲಿತಾ ಅವರ ನಿಧಾನದ ಸುದ್ದಿ ತಿಳಿದು ಇಲ್ಲಿಗೆ ಬಂದಿದ್ದೆ. ಮಳೆಯಿಂದಾಗ ಸಂಚಾರ ತೀವ್ರ ಅಸ್ತವ್ಯಸ್ಥವಾಗಿದ್ದು, ಹೊರಗೆ ಓಡಾಡುವುದು ಕಷ್ಟಕರವಾಗಿದೆ. ಮನೆಯಲ್ಲಿ ವಿದ್ಯುತ್ ಇಲ್ಲ, ದಿನಸಿ ಪದಾರ್ಥಗಳು ನೀರು ಪಾಲಾಗಿವೆ. ಹೊರಗೆ ಯಾವುದೇ ಅಂಗಡಿಗಳು ತೆಗೆದಿಲ್ಲ. ಇದರಿಂದ ಮಕ್ಕಳಿಗೆ ಹಾಲು ಸಿಗುತ್ತಿಲ್ಲ. ಮನೆಯಲ್ಲಿ ಸಂಪೂರ್ಣವಾಗಿ ನೀರು ತುಂಬಿರುವುದರಿಂದ ಮಲಗಲು ಜಾಗವಿಲ್ಲದಂತಾಗಿದೆ.

- ಶಂಕರ್, ಚೆನ್ನೈಗೆ ತೆರಳಿರುವ ನಗರದ ನಿವಾಸಿ

--