ಮಹಿಳೆ ದುರಂತ ಸಾವಿಗೆ ಟ್ವಿಸ್ಟ್ ಕೊಟ್ಟ ಡೆತ್ ನೋಟ್, ಪ್ರಮುಖ ಕಾಂಗ್ರೆಸ್ ನಾಯಕ ಪೊಲೀಸ್ ವಶಕ್ಕೆ
ಮಹಿಳೆ ದುರಂತ ಸಾವಿಗೆ ಟ್ವಿಸ್ಟ್ ಕೊಟ್ಟ ಡೆತ್ ನೋಟ್, ಗಂಡನ ಮನೆಯಲ್ಲಿ ಬದುಕು ಅಂತ್ಯಗೊಳಿಸಿದ್ದ 35ರ ಮಹಿಳೆ ಬರೆದ ಡೆತ್ ನೋಟ್ ಪತ್ತೆಯಾಗಿದೆ. ಈ ನೋಟ್ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದು ಮಾತ್ರವಲ್ಲ ಕಾಂಗ್ರೆಸ್ ನಾಯಕ ಪೊಲೀಸರ ವಶವಾಗಿದ್ದಾನೆ.

ಮಹಿಳೆ ಸಾವು ಹಾಗೂ ಡೆತ್ ನೋಟ್
ಪ್ರೇಮಿಗಳ ದಿನಾಚರಣೆ ದಿನ (ಫೆ.14) 35ರ ಹರೆಯದ ಮಹಿಳೆಯೊಬ್ಬರು ಬದುಕು ಅಂತ್ಯಗೊಳಿಸಿದ್ದರು. ಗಂಡನ ಮನೆಯಲ್ಲಿ ಮಹಿಳೆ ಶವವಾಗಿ ಪತ್ತೆಯಾಗಿದ್ದರು. ಎಲ್ಲರೂ ಗಂಡನ ಅನುಮಾನದಿಂದ ನೋಡಿದ್ದರು. ಆದರೆ ಮಹಿಳೆಯ ಡೆತ್ ನೋಟ್ ಪತ್ತೆಯಾಗುತ್ತಿದ್ದಂತೆ ಪ್ರಕರಣಕ್ಕೆ ಪ್ರಮುಖ ತಿರುವು ಸಿಕ್ಕಿದೆ. ಕಳೆದ ನಾಲ್ಕು ದಿನಗಳಿಂದ ವಿಚಾರಣೆ ನಡೆಸುತ್ತಿದ್ದ ಪೊಲೀಸರು ಇದೀಗ ಡೆತ್ ನೋಟ್ ಹಾಗೂ ಪ್ರಾಥಮಿಕ ಮಾಹಿತಿ, ಸಾಕ್ಷ್ಯಗಳ ಆಧಾರದಲ್ಲಿ ಪೊಲೀಸ್ ಕಾಂಗ್ರೆಸ್ ನಾಯಕನ ವಶಕ್ಕೆ ಪಡೆದಿದ್ದಾರೆ.
ಸ್ಫೋಟಕ ಮಾಹಿತಿ ಬಹಿರಂಗ
ಕೇರಳದ ಕಾಂಗ್ರೆಸ್ ನಾಯಕ, ಯೂತ್ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಸುಹೈಲ್ ಅನ್ಸಾರಿ ಪೊಲೀಸರ ವಶವಾಗಿದ್ದಾರೆ. ಕೆಲ ಮೂಲಗಳ ಪ್ರಕಾರ ಅನ್ಸಾರಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಅಧೀಕೃತ ಮಾಹಿತಿ ಹೊರಬಂದಿಲ್ಲ. ಸದ್ಯ ಅನ್ಸಾರಿ ಪೊಲೀಸ್ ವಶದಲ್ಲಿದ್ದು ವಿಚಾರಣೆ ಎದುರಿಸುತ್ತಿದ್ದಾರೆ.
ಏನಿದು ಘಟನೆ
ಕೇರಳದ ಪಟ್ಟಣಂತಿಟ್ಟ ಜಿಲ್ಲೆಯಲ್ಲಿ ಈ ದುರಂತ ನಡೆದಿತ್ತು. 35ರ ಹರೆಯದ ಮಹಿಳೆ ತನ್ನ ಗಂಡನ ಮನೆಯಲ್ಲಿ ಬದುಕು ಅಂತ್ಯಗೊಳಿಸಿದ್ದರು. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಇತ್ತ ಪ್ರಕರಣ ದಾಖಲಾಗಿತ್ತು. ಇದೇ ವೇಳೆ ಮಹಿಳೆ ಬರೆದ ಡೆತ್ ನೋಟ್ ಕೂಡ ಪತ್ತೆಯಾಗಿತ್ತು. ಇತ್ತ ಅನುಮಾನದ ಮೇಲೆ ಮಹಿಳೆಯ ಗಂಡನನ್ನು ವಿಚಾರಣೆ ನಡೆಸಿದ್ದರು. ಇತ್ತ ಡೆತ್ ನೋಟ್ ಪರಿಶೀಲಿಸಿದ ಪೊಲೀಸರಿಗೆ ಒಂದು ಹೆಸರು ಅಚ್ಚರಿಯಾಗಿತ್ತು.
ಡೆತ್ ನೋಟ್‌ನಲ್ಲಿ ಸುಹೈಲ್ ಅನ್ಸಾರಿ ಹೆಸರು
ಮಹಿಳೆ ಬರೆದ ಡೆತ್ ನೋಟ್‌ನಲ್ಲಿ ಸುಹೈಲ್ ಅನ್ಸಾರಿ ಹೆಸರು ಉಲ್ಲೇಖಿಸಲಾಗಿತ್ತು. ತನ್ನ ಈ ನಿರ್ಧಾರಕ್ಕೆ ಸುಹೈಲ್ ಅನ್ಸಾರಿ ಕಾರಣ ಎಂದು ಡೆತ್ ನೋಟ್‌ನಲ್ಲಿ ಬರೆಯಲಾಗಿತ್ತು. ಹೀಗಾಗಿ ತನಿಖೆ ಹೊಸ ದಿಕ್ಕಿನಲ್ಲಿ ಸಾಗಿತ್ತು. ಪ್ರಾಥಮಿಕ ಮಾಹಿತಿ, ಸಿಕ್ಕ ಸಾಕ್ಷ್ಯಗಳ ಆಧಾರದಲ್ಲಿ ಪೊಲೀಸರು ನೇರವಾಗಿ ಕೇರಳ ಕಾಂಗ್ರೆಸ್ ಯೂತ್ ಸೆಕ್ರೆಟರಿ ಸುಹೈಲ್ ಅನ್ಸಾರಿಯನ್ನು ವಶಕ್ಕೆ ಪಡೆದಿದ್ದಾರೆ.
ಕೇರಳ ಕಾಂಗ್ರೆಸ್‌ಗೆ ತೀವ್ರ ಮುಖಭಂಗ
ಕೇರಳ ಕಾಂಗ್ರೆಸ್ ಯೂತ್ ನಾಯಕರು ಮಹಿಳೆ ವಿಚಾರದಲ್ಲಿ ಜೈಲಿಗೆ ಹೋಗುತ್ತಿದ್ದಾರೆ. ಇದು ಪಕ್ಷಕ್ಕೆ ತೀವ್ರ ಮುಜುಗರ ನೀಡಿದೆ. ಇತ್ತೀಚೆಗೆ ಕಾಂಗ್ರೆಸ್ ಶಾಸಕ, ಮಾಜಿ ಯೂತ್ ನಾಯಕ ರಾಹುಲ್ ಮಾಂಕೂಟತ್ಥಿಲ್ ಇತ್ತೀಚೆಗೆ ಜೈಲು ಸೇರಿದ್ದರು. ಮದುವೆ ಭರವಸೆ ನೀಡಿ ದೈಹಿಕ ಸಂಪರ್ಕ, ಅಧಿಕಾರ ಬಳಸಿ ಯುವತಿರ ಜೊತೆ ದೈಹಿಕ ಸಂಪರ್ಕ, ನಟಿಯರ ಜೊತೆ ಸಂಪರ್ಕ ಸೇರಿದಂತೆ ಹಲವು ಆರೋಪಗಳಡಿ ಪ್ರಕರಣ ದಾಖಲಾಗಿತ್ತು. ತಲೆಮರೆಸಿಕೊಂಡಿದ್ದ ರಾಹುಲ್ ಮಾಂಕುಟತ್ತಿಲ್ ಅರೆಸ್ಟ್ ಮಾಡಲಾಗಿತ್ತು.
ಕೇರಳ ಕಾಂಗ್ರೆಸ್‌ಗೆ ತೀವ್ರ ಮುಖಭಂಗ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

