ಕಳೆದ ಹಲವು ವರ್ಷಗಳಿಂದ ಸುವರ್ಣನ್ಯೂಸ್ ಮತ್ತು ಕನ್ನಡಪ್ರಭ ಸಾಮಾಜಿಕ ಕಳಕಳಿವುಳ್ಳ ಕಾರ್ಯಾಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಈಗ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರಲು ಉತ್ತಮ ವೇದಿಕೆಯೊಂದನ್ನು ಸಜ್ಜುಮಾಡಿದು, "ಕನ್ನಡಪ್ರಭ ಕಿರಿಯ ಸಂಪಾದಕ" ಎಂಬ ಸ್ಪರ್ಧೆಯನ್ನು ಏರ್ಪಡಿಸಿದೆ.

ಬೆಂಗಳೂರು(ಡಿ. 04): ಸುವರ್ಣನ್ಯೂಸ್ ಮತ್ತು ಕನ್ನಡಪ್ರಭ ಸಹಯೋಗದಲ್ಲಿ ಮೊದಲ ಬಾರಿಗೆ 2016-17ನೇ ಸಾಲಿನ ಕನ್ನಡಪ್ರಭ ಕಿರಿಯ ಸಂಪಾದಕ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. 7ರಿಂದ 14 ವರ್ಷದೊಳಗಿನ ಮಕ್ಕಳೇ ಪತ್ರಿಕೆ ರಚಿಸಬೇಕು. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವುದೇ ಈ ಸ್ಪರ್ಧೆಯ ಮುಖ್ಯ ಉದ್ದೇಶ.

ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಹೇಗೆ..?
ಆಸಕ್ತಿವುಳ್ಳ ವಿದ್ಯಾರ್ಥಿಗಳು ಅಥವಾ ಶಾಲೆಗಳು ಸುವರ್ಣನ್ಯೂಸ್​/ಕನ್ನಡಪ್ರಭ ಕೇಂದ್ರ ಕಚೇರಿಗೆ ಕರೆಮಾಡಿ ಮಾಹಿತಿ ಪಡೆಯಬಹುದಾಗಿದೆ. ಸಂಪರ್ಕಿಸಬೇಕಾದ ನಂಬರ್ 080-40984100, 8050069447. ಇಮೇಲ್: kiriyasampadaka@kannadaprabha.in . ಈಗಾಗಲೇ ರಾಜ್ಯಾದ್ಯಂತ 50 ಸಾವಿರಕ್ಕೂ ಹೆಚ್ಚು ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ.

ಸ್ಪರ್ಧೆಯಲ್ಲಿ ಭಾಗಿಯಾದ ಮಕ್ಕಳಿಗೆ ಕನ್ನಡಪ್ರಭ ಮುಖಪುಟವಿರುವ ಖಾಲಿ ಪತ್ರಿಕೆ'​ಗಳನ್ನುನೀಡಲಾಗುತ್ತದೆ. ಅದರ ಜೊತೆಗೆ ಪ್ರಚಲಿತ ಘಟನೆ, ಕ್ರೀಡೆ, ಸಂಸ್ಕೃತಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ನೀಡಲಾಗುತ್ತದೆ. ಮಕ್ಕಳು ಆ ಪ್ರಶ್ನೆಗಳಿಗೆ 20 ದಿನಗಳೊಳಗೆ ಉತ್ತರಿಸಬೇಕು.

ಸ್ಪರ್ಧೆಯಲ್ಲಿ ರಾಜ್ಯದ ಯಾವುದೇ ಶಾಲೆಯ ಮಕ್ಕಳು ಭಾಗಿಯಾಗಬಹುದು. ಮೊದಲ ಸುತ್ತಿನಲ್ಲಿ 60 ಮಕ್ಕಳನ್ನು ಆಯ್ಕೆ ಮಾಡಿ ಅದರಲ್ಲಿ ವಿಜೇತ ಮೂವರಿಗೆ ಕಾರ್ಯಕ್ರಮ ನಡೆಸಿ ಬಹುಮಾನ ವಿತರಿಸಲಾಗುವುದು. ಮಕ್ಕಳ ಪ್ರತಿಭೆ ಗುರುತಿಸಲು ಈ ಅಪೂರ್ವ ಅವಕಾಶ ಮಿಸ್ ಮಾಡಿಕೊಳ್ಳಬೇಡಿ. ಆಸಕ್ತರು ಬೇಗನೆ ಹೆಸರು ನೋಂದಯಿಸಿಕೊಳ್ಳಿ.

- ಮುತ್ತಪ್ಪ ಲಮಾಣಿ, ಸುವರ್ಣನ್ಯೂಸ್