ಭಾರತದ ಮೊಟ್ಟಮೊದಲ ವೃತ್ತಪತ್ರಿಕೆಗಳ ವಿನ್ಯಾಸ ವೆಬ್‌ ತಾಣ ನ್ಯೂಸ್‌ಪೇಪರ್‌ ಡಿಸೈನ್‌ ಇನ್‌ ತನ್ನ 10ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಎಸ್‌ಎನ್‌ಡಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಿಯೊ ಒಲಿಂಪಿಕ್ಸ್‌ ಸುದ್ದಿ-ಚಿತ್ರಣಗಳ ವಿನ್ಯಾಸ ಸ್ಪರ್ಧಾವಳಿಯಲ್ಲಿ ಭಾಗವಹಿಸಿದ್ದ ಜಾಗತಿಕ ಪತ್ರಿಕೆಗಳಲ್ಲಿ ಆಯ್ಕೆಯಾದ ಕನ್ನಡದ ಏಕೈಕ ಹಾಗೂ ದೇಶದ ಎರಡನೇ ಪ್ರಾಂತೀಯ ಪತ್ರಿಕೆ ಎಂಬ ಹಿರಿಮೆ ‘ಕನ್ನಡಪ್ರಭ'ದ್ದು.

ಬೆಂಗಳೂರು: ಬ್ರೆಜಿ​ಲ್‌​ನಲ್ಲಿ ಜರು​ಗಿ​ದ ಪ್ರತಿಷ್ಠಿತ ರಿಯೊ ಒಲಿಂಪಿಕ್ಸ್‌ ಕ್ರೀಡಾಕೂಟ ಹಾಗೂ ಒಲಿಂಪಿಕ್ಸ್‌ ಕ್ರೀಡಾ­ಕೂಟದ ಇತಿ­ಹಾಸದ ಸುದ್ದಿ-­ಚಿತ್ರ­ಣ­­ಗಳನ್ನು ಮನ­ಮೋ­ಹಕ­ವಾಗಿ ಕಟ್ಟಿಕೊಟ್ಟ ವಿಶ್ವ ದಿನಪತ್ರಿಕೆಗಳ ಪೈಕಿ ರಾಜ್ಯದ ನಿಮ್ಮ ಹೆಮ್ಮೆಯ ಪತ್ರಿಕೆ ‘ಕನ್ನಡಪ್ರಭ'ಕ್ಕೆ ಗೌರವಾನ್ವಿತ ಉಲ್ಲೇಖ (ಹಾನರೇಬಲ್‌ ಮೆನ್ಷನ್‌) ಗರಿ ಪ್ರಾಪ್ತಿಯಾಗಿದೆ. 

ಒಲಿಂಪಿಕ್ಸ್‌ ಕೂಟದ ಹಾಗು-­ಹೋಗುಗಳನ್ನು ನಯನ ಮನೋಹರ­ವಾಗಿ ಚಿತ್ರಿಸಿದ್ದ ಜಗತ್ತಿನ ಪತ್ರಿಕೆಗಳ ಸ್ಪರ್ಧೆಯಲ್ಲಿ ‘ಕನ್ನಡಪ್ರಭ'ದ ಪ್ರಧಾನ ವಿನ್ಯಾಸಕಾರ ಬಿ.ಜಿ. ಜನಾರ್ದನ್‌ ವಿನ್ಯಾಸ­­ಗೊಳಿಸಿದ್ದ ಜೂನ್‌ 26ರ ‘ಭಾವ ಬೆಸುಗೆಯ 27 ಕೊಂಡಿಗಳು' ಮತ್ತು ಆಗಸ್ಟ್‌ 4ರ ‘16 ದಿನಗಳ ಕ್ರೀಡಾ ವೈಭವ' ಪುಟಗಳು ಅಂತಾರಾಷ್ಟ್ರೀಯ ಮಟ್ಟದ ಏಕೈಕ ಸಂಘಟನೆ ಸೊಸೈಟಿ ಫಾರ್‌ ನ್ಯೂಸ್‌ ಡಿಸೈನ್‌ (ಎಸ್‌ಎನ್‌ಡಿ)ನ ಮೆಚ್ಚುಗೆಯ ಪಟ್ಟಿಗೆ ಸೇರ್ಪಡೆಯಾಗಿದೆ. 

ಸೊಸೈಟಿ ಫಾರ್‌ ನ್ಯೂಸ್‌ ಡಿಸೈನ್‌ನ ಕಾರ್ಯಕಾರಿ ನಿರ್ದೇಶಕ ಸ್ಟೀಫನ್‌ ಕೊಮಿವೆಸ್‌ ನೇತೃತ್ವದ ಮೂವರು ತೀರ್ಪುಗಾರರ ಸಮಿತಿ, ಕ್ರಿಸ್‌ ಕಟ್ರ್ನಿ (ಷಿಕಾಗೋದ ‘ಬ್ಲಾಕ್‌'ನ ಪ್ರಧಾನ ಸಲಹೆಗಾರ) ಹಾಗೂ ಸಟೋಷಿ ಟೊಯೊ­ಶಿಮಾ (ಟೋಕಿಯೊದ ದ ಸ್ಯಾಂಕೀ ಶಿಂಬುನ್‌ನ ಸಹಾಯಕ ಗ್ರಾಫಿಕ್ಸ್‌ ಸಂಪಾದಕ) ಅತ್ಯಂತ ಸುಂದರ ಹಾಗೂ ಮಾಹಿತಿಯುಕ್ತ ಪುಟಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಅದರಂತೆ ಭಾರತದ ‘ಮಲಯಾಳ ಮನೋ­ರಮಾ'ಗೆ ಸ್ವರ್ಣ, ‘ಇಂಡಿಯನ್‌ ಎಕ್ಸ್‌­ ಪ್ರೆಸ್‌'ಗೆ ರಜತ ಪದಕ ಸಂದರೆ, ‘ಹಿಂದೂಸ್ತಾನ್‌ ಟೈಮ್ಸ್‌' ಕನ್ನಡಪ್ರಭ­ದಂತೆ ಗೌರವಾನ್ವಿತ ಉಲ್ಲೇಖಕ್ಕೆ ಪಾತ್ರವಾಗಿದೆ. 

ಇನ್ನು ಪ್ರಶಸ್ತಿಗೆ ಹಾಗೂ ಮೆಚ್ಚುಗೆಗೆ ಆಯ್ಕೆಯಾದ ಬ್ರೆಜಿ​ಲ್‌ನ ಎಝಡ್‌ ಸೆಂಟ್ರಲ್‌, ಕೊಲಂಬಿ​ಯಾದ ದಿ ಮಿಸ್ಸೋ​ರಿ​ಯಾ ಸೇರಿ​ದಂತೆ ವಿಶ್ವದ ಬೇರೆ ಪತ್ರಿಕೆಯ ಪುಟಗಳನ್ನು ಈ ಎಸ್‌'ಎನ್‌'ಡಿ ವೆಬ್‌'ನಲ್ಲಿ ಕಾಣಬಹುದಾಗಿದೆ. 

ಮನೋರಮಾಗೆ ಸ್ವರ್ಣ: ಮುಖಪುಟ, ಕ್ರೀಡಾ ಪುಟ ಹಾಗೂ ಮಾಹಿತಿಯುಕ್ತ ಗ್ರಾಫಿಕ್ಸ್‌ ಎಂಬ ಮೂರು ವಿಭಾಗಗಳಲ್ಲಿ ಪತ್ರಿಕೆ ಕಟ್ಟಿಕೊಟ್ಟ ಒಲಿಂಪಿಕ್ಸ್‌ ಚೆಲುವನ್ನು ತೀರ್ಪುಗಾರರ ಸಮಿತಿ ಪ್ರಶಸ್ತಿಗೆ ಪರಿಗಣಿಸಿದೆ. ಒಲಿಂಪಿಕ್ಸ್‌ನಲ್ಲಿ ಪದಕದ ಭರವಸೆ ಮೂಡಿಸಿದ್ದ ಭಾರತದ ಕ್ರೀಡಾಪಟುಗಳನ್ನು ಬಿಂಬಿಸಿದ್ದ ‘ಮಲಯಾಳ ಮನೋರಮಾ'ಗೆ ಸ್ವರ್ಣ ಗರಿ ಸಂದರೆ, ‘ಇಂಡಿಯನ್‌ ಎಕ್ಸ್‌ಪ್ರೆಸ್‌' ಆ.19ರಂದು ಪ್ರಕಟಿಸಿದ್ದ ‘ಟೂ ಗುಡ್‌, ಗರ್ಲ್ಸ್' ಮುಖಪುಟಕ್ಕೆ ಬೆಳ್ಳಿ ಪದಕ ಪ್ರಾಪ್ತಿಯಾಗಿದೆ. ಇನ್ನು ಜುಲೈ 16ರಂದು ಹಿಂದೂಸ್ತಾನ್‌ ಟೈಮ್ಸ್‌ ಹೊತ್ತು ತಂದಿದ್ದ ‘ನಾಟ್‌ ಜಸ್ಟ್‌ ಸ್ಪೋಟ್ಸ್‌ರ್‍, ಬಟ್‌ ಎ ವೇ ಆಫ್‌ ಲೈಫ್‌' ಪುಟವೂ ಗೌರವಾನ್ವಿತ ಉಲ್ಲೇಖಕ್ಕೆ ಭಾಜನವಾಗಿದೆ.

ಕನ್ನಡದ ಏಕೈಕ ಪತ್ರಿಕೆ:
ಭಾರತದ ಮೊಟ್ಟಮೊದಲ ವೃತ್ತಪತ್ರಿಕೆಗಳ ವಿನ್ಯಾಸ ವೆಬ್‌ ತಾಣ ನ್ಯೂಸ್‌ಪೇಪರ್‌ ಡಿಸೈನ್‌ ಇನ್‌ ತನ್ನ 10ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಎಸ್‌ಎನ್‌ಡಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಿಯೊ ಒಲಿಂಪಿಕ್ಸ್‌ ಸುದ್ದಿ-ಚಿತ್ರಣಗಳ ವಿನ್ಯಾಸ ಸ್ಪರ್ಧಾವಳಿಯಲ್ಲಿ ಭಾಗವಹಿಸಿದ್ದ ಜಾಗತಿಕ ಪತ್ರಿಕೆಗಳಲ್ಲಿ ಆಯ್ಕೆಯಾದ ಕನ್ನಡದ ಏಕೈಕ ಹಾಗೂ ದೇಶದ ಎರಡನೇ ಪ್ರಾಂತೀಯ ಪತ್ರಿಕೆ ಎಂಬ ಹಿರಿಮೆ ‘ಕನ್ನಡಪ್ರಭ'ದ್ದು.

ಏನೀ ಎಸ್‌ಎನ್‌ಡಿ?: ಮಾಧ್ಯಮ ಕ್ಷೇತ್ರದಲ್ಲಿ ವೆಬ್‌ ಡಿಸೈನ್‌, ಮುದ್ರಣ, ಇಲಸ್ಪ್ರೇಷನ್‌, ಮೊಬೈಲ್‌ ಪಬ್ಲಿಕೇಷನ್ಸ್‌ ಮತ್ತು ಇಸ್ಫೋಗ್ರಾಫಿಕ್ಸ್‌'ನಲ್ಲಿ ವೃತ್ತಿಪರವಾಗಿ ಅಂತಾರಾಷ್ಟ್ರೀಯ ಮಟ್ಟದ ಏಕೈಕ ವ್ಯವಸ್ಥಿತ ಸಂಘಟನೆ ಈ ಸೊಸೈಟಿ ಫಾರ್‌ ನ್ಯೂಸ್‌ ಡಿಸೈನ್‌ (ಎಸ್‌ಎನ್‌ಡಿ). 1979ರಲ್ಲಿ ಲಾಭರಹಿತ ಸಂಸ್ಥೆಯಾಗಿ ಅಮೆರಿಕದಲ್ಲಿ ಅಸ್ತಿತ್ವಕ್ಕೆ ಬಂದ ಎಸ್‌ಎನ್‌ಡಿಯಲ್ಲಿ ವಿಶ್ವಾದ್ಯಂತ 1 ಸಹಸ್ರಕ್ಕೂ ಹೆಚ್ಚು ಸದಸ್ಯರು ಸಕ್ರಿಯರಾಗಿದ್ದಾರೆ. ವಿಶ್ವ ಜನತೆಯನ್ನು ನೆಟ್‌ವರ್ಕ್ನಲ್ಲಿ ಹೆಚ್ಚು ಶಿಕ್ಷಿತರನ್ನಾಗಿಸುವ ಸಲುವಾಗಿ ಪ್ರಾಂತೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಎಸ್‌ಎನ್‌'ಡಿ ಆಯೋಜಿಸುತ್ತದೆ. ಪ್ರತೀ ವರ್ಷ ಫೆಬ್ರವರಿಯಲ್ಲಿ ‘ಅತ್ಯುತ್ತಮ ಸುದ್ದಿ ವಿನ್ಯಾಸ' ಸ್ಪರ್ಧಾವಳಿಯನ್ನು ‘ಸಿರಾಕುಸ್‌ ವಿವಿ'ಯಲ್ಲಿ ಹಮ್ಮಿಕೊಳ್ಳುವುದರ ಜತೆಗೆ ಸುಧಾರಿತ ಅತ್ಯುತ್ತಮ ಡಿಜಿಟಲ್‌ ವಿನ್ಯಾಸ ಅಂತಾರಾಷ್ಟ್ರೀಯ ಸ್ಪರ್ಧಾವಳಿಯನ್ನು ‘ಬಾಲ್‌ ಸ್ಟೇಟ್‌ ವಿವಿ'ಯಲ್ಲಿ ಆಯೋಜಿಸುವ ಮೂಲಕ ವಿಶ್ವಾದ್ಯಂತ ಇರುವ ದೃಶ್ಯಮಾಧ್ಯಮದ ಕ್ರಿಯಾಶೀಲ ಪತ್ರಕರ್ತರನ್ನು ಬೆಳಕಿಗೆ ತರುವುದು ಮೂಲ ಆಶಯ. 

ಕ್ರೀಡಾ ವಿಭಾಗ: ಪ್ರಕಾಶ್‌ ಕೊಳ್ಳೇಗಾಲ, ಚೇತನ್‌ ಓ ಆರ್‌, ಧನಂಜಯ ಎಸ್‌.ಹಕಾರಿ

ಸಾಧನೆ ಹಿಂದಿನ ಶ್ರಮಿಕರು: ಬಿ.ಜಿ. ಜನಾರ್ದನ್‌ (ಪ್ರಧಾನ ವಿನ್ಯಾಸಕಾರ), ಎಸ್‌.ಟಿ .ಮಹಾಂತೇಶ್‌, ಕೆ. ಪುರುಷೋತ್ತಮ್‌, ಆರ್‌. ಧನಂಜಯ್‌, ಜ್ಞಾನಮೂರ್ತಿ, ಸದ್ದಾಂ ಹುಸೇನ್‌, ವಿಜಯ್‌ಕುಮಾರ್‌, ವಿನಯ್‌ರಾಜ್‌, ಕವಿತಾ, ಪ್ರಕಾಶ್‌ ಡಿ.ಟಿ.