Asianet Suvarna News Asianet Suvarna News

'ಕನ್ನಡಪ್ರಭ' ಅಂಕಣಕಾರ, ಹಿರಿಯ ಪತ್ರಕರ್ತ ಟಿಜೆಎಸ್‌ ಜಾರ್ಜ್‌ಗೆ ಪ್ರತಿಷ್ಠಿತ ಮಾಧ್ಯಮ ಪ್ರಶಸ್ತಿ

ಕನ್ನಡಪ್ರಭ ಅಂಕಣಕಾರ ಟಿಜೆಎಸ್‌ ಜಾರ್ಜ್‌ಗೆ ಪ್ರತಿಷ್ಠಿತ ಮಾಧ್ಯಮ ಪ್ರಶಸ್ತಿ| ಸ್ವದೇಶಾಭಿಮಾನಿ- ಕೇಸರಿ ಮೀಡಿಯಾ’ ಪ್ರಶಸ್ತಿ ಪ್ರಕರಣ| ಕೇರಳ ಸರ್ಕಾರದಿಂದ ಪತ್ರಕರ್ತರಿಗೆ ನೀಡುವ ಅತ್ಯುನ್ನತ ಗೌರವ

Kannadaprabha Columnist Veteran journalist TJS George wins Swadeshabhimani-Kesari award
Author
Bangalore, First Published Jun 25, 2019, 9:32 AM IST
  • Facebook
  • Twitter
  • Whatsapp

ತಿರುವನಂತಪುರಂ[ಜೂ.25]: ಖ್ಯಾತ ಪತ್ರಕರ್ತ ಹಾಗೂ ‘ಕನ್ನಡಪ್ರಭ’ ಪತ್ರಿಕೆಯ ಅಂಕಣಕಾರ ಪದ್ಮಶ್ರೀ ಪುರಸ್ಕೃತ ಟಿಜೆಎಸ್‌ ಜಾಜ್‌ರ್‍, ಕೇರಳ ಸರ್ಕಾರದಿಂದ ಪತ್ರಕರ್ತರಿಗೆ ನೀಡುವ ಅತ್ಯುನ್ನತ ಗೌರವ ‘ಸ್ವದೇಶಾಭಿಮಾನಿ- ಕೇಸರಿ ಮೀಡಿಯಾ’ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.

ಸ್ವದೇಶಾಭಿಮಾನಿ ಪತ್ರಿಕೆ ಆರಂಭಿಸಿ ಬ್ರಿಟೀಷ್‌ ಸರ್ಕಾರದ ವಿರುದ್ಧ ಲೇಖನಗಳನ್ನು ಬರೆಯುತ್ತಿದ್ದ ರಾಮಕೃಷ್ಣ ಪಿಳ್ಳೈ ಮತ್ತು ಕೇಸರಿ ಪತ್ರಿಕೆಯ ಸ್ಥಾಪಕರಾದ ಕೇಸರಿ ಬಾಲಕೃಷ್ಣ ಪಿಳ್ಳೈ ಅವರಿಂದ ಜಂಟಿಯಾಗಿ ಸ್ವದೇಶಾಭಿಮಾನಿ- ಕೇಸರಿ ಪ್ರಶಸ್ತಿ ಸ್ಥಾಪಿಸಲ್ಪಟ್ಟಿದೆ. ಈ ಪ್ರಶಸ್ತಿ ಒಂದು ಲಕ್ಷ ರು. ನಗದು ಬಹುಮಾನವನ್ನು ಹೊಂದಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಜು.1ರಂದು ತಿರುವನಂತಪುರಂನಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.

ಟಿಜೆಎಸ್‌ ಜಾಜ್‌ರ್‍ ಅವರು 1950ರಲ್ಲಿ ಫ್ರೀ ಪ್ರೆಸ್‌ ಜರ್ನಲ್‌ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿಟ್ಟರು. ಇಂಟರ್‌ ನ್ಯಾಷನಲ್‌ ಪ್ರೆಸ್‌ ಇನ್ಸಿ$್ಟಟ್ಯೂಟ್‌ ಸೇರಿದಂತೆ ಹಲವಾರು ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಅವರು ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ನ ಸಂಪಾದಕೀಯ ಸಲಹೆಗಾರರಾಗಿದ್ದಾರೆ. ಈ ಪತ್ರಿಕೆಯಲ್ಲಿ ಪ್ರತಿ ಭಾನುವಾರ ‘ಪಾಯಿಂಟ್‌ ಆಫ್‌ ವ್ಯೂ’ ಎಂಬ ಅಂಕಣವನ್ನು ಬರೆಯುತ್ತಿದ್ದಾರೆ. ಮೊಹಮ್ಮದ್‌ ಕೋಯಾ ಪತ್ರಿಕೋದ್ಯಮ ಪ್ರಶಸ್ತಿ, ಬಶೀರ್‌ ಪುರಸ್ಕಾರ, ಕಮಲಾ ಸೂರ್ಯ ಪ್ರಶಸ್ತಿ, ಕೇಸರಿ ಮೀಡಿಯಾ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ.

Follow Us:
Download App:
  • android
  • ios