70 ಕೋಟಿ ಆಸೆಗೆ ಸ್ಯಾಂಡಲ್ ವುಡ್ ನಿರ್ದೇಶಕ ಎಸ್. ನಾರಾಯಣ್  20 ಲಕ್ಷ ಹಣವನ್ನು ಕಳೆದುಕೊಂಡಿದ್ದಾರೆ. ಜ್ಯೋತಿಷಿಯೋರ್ವರಿಂದ ಅವರು ವಂಚನೆಗೆ ಒಳಗಾಗಿದ್ದಾರೆ. 

ಬೆಂಗಳೂರು : ಕಡಿಮೆ ಬಡ್ಡಿಯ ಸಾಲದ ಆಸೆಯಿಂದ ನಿರ್ದೇಶಕ ಎಸ್. ನಾರಾಯಣ್ ಮೋಸ ಹೋಗಿದ್ದಾರೆ. 70 ಕೋಟಿಯ ಆಸೆಗಾಗಿ 20 ಲಕ್ಷ ಹಣವನ್ನು ಕಳೆದುಕೊಂಡಿದ್ದಾರೆ.

ಕಡಿಮೆ ಬಡ್ಡಿಗೆ 70 ಕೋಟಿ ಸಾಲ ನೀಡುವುದಾಗಿ ಹೇಳಿದ್ದ ತಮಿಳುನಾಡು ಮೂಲದ ಜ್ಯೋತಿಷಿ ಮಂದಾರ ಮೂರ್ತಿಯಿಂದ ಎಸ್. ನಾರಾಯಣ್ ಮೋಸ ಹೋಗಿದ್ದಾರೆ. 

ಸಾಲಕ್ಕಾಗಿ 20 ಲಕ್ಷ ನಿರ್ವಹಣಾ ಶುಲ್ಕ ಪಡೆದಿದ್ದ ಜ್ಯೋತಿಷಿ ಮಂದಾರ ಮೂರ್ತಿಯು ಇದೀಗ ಸಾಲವನ್ನೂ ನೀಡದೇ ನಿರ್ವಹಣಾ ಶುಲ್ಕವೂ ಇಲ್ಲದೇ ನಾಪತ್ತೆಯಾಗಿದ್ದಾರೆ. 

ಸದ್ಯ ಮಂದಾರ ಮೂರ್ತಿ ವಿರುದ್ಧ ಯಶವಂತಪುರ ಪೊಲೀಸರಿಗೆ ಎಸ್​.ನಾರಾಯಣ್​ ದೂರು ನೀಡಿದ್ದಾರೆ. ಎಸ್​.ನಾರಾಯಣ್​ ದೂರಿನ ಹಿನ್ನೆಲೆ ಮಂದಾರ ಮೂರ್ತಿ ಸಹಚರರನ್ನು ಬಂಧಿಸಿದ್ದು, ಜ್ಯೋತಿಷಿಗಾಗಿ ಬಲೆ ಬೀಸಿದ್ದಾರೆ.