ಗೋವಿಂದ,ಗೋವಿಂದ,ಗೋವಿಂದ ಎಂದು ಘೋಷಣೆ ಹಾಕಿದರು. ಇದರಿಂದಾಗಿ ಸ್ಪೀಕರ್ ಭೋಜನ ವಿರಾಮಕ್ಕೆ ಮುಂದೂಡಿದರು. ಭೋಜನ ವಿರಾಮದ ನಂತರ ಸದನ ಸೇರಿದಾಗಲೂ ಅದೇ ಧರಣಿ ಮುಂದುವರಿಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹಾರಾ ಪ್ರಕರಣವನ್ನೇ ಪ್ರಸ್ತಾಪಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಗದ್ದಲ ಮುಂದುವರೆದಿದ್ದರಿಂದ ಸ್ಪೀಕರ್ ಅವರು ಶುಕ್ರವಾರಕ್ಕೆ ಕಲಾಪ ಮುಂದೂಡಿದರು.
ಬೆಂಗಳೂರು(ಮಾ.17): ಹೈಕಮಾಂಡ್'ಗೆ ರಾಜ್ಯ ಸರ್ಕಾರದಿಂದ ಕಪ್ಪ ಸಂದಾಯವಾದ ಕುರಿತ ವಿವರವಿದೆ ಎನ್ನಲಾದ ಡೈರಿ ಬಗ್ಗೆ ಗುರುವಾರ ಕೋಲಾಹಲ ನಡೆದು ವಿಧಾನಮಂಡಲದ ಉಭಯ ಸದನದ ಕಲಾಪ ಬಲಿಯಾಯಿತು.
ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರ ನಾಯಕತ್ವದಲ್ಲಿ ಬಿಜೆಪಿ ನಾಯಕರು ಕನ್ನಡಪ್ರಭ ವರದಿಯನ್ನೇ ಭಿತ್ತಿಪತ್ರದ ರೂಪದಲ್ಲಿ ಪ್ರದರ್ಶಿಸಿದರು. ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದ ವರದಿಯ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಘೋಷಣೆ ಕೂಗಿದರು.
ಗೋವಿಂದ,ಗೋವಿಂದ,ಗೋವಿಂದ ಎಂದು ಘೋಷಣೆ ಹಾಕಿದರು. ಇದರಿಂದಾಗಿ ಸ್ಪೀಕರ್ ಭೋಜನ ವಿರಾಮಕ್ಕೆ ಮುಂದೂಡಿದರು. ಭೋಜನ ವಿರಾಮದ ನಂತರ ಸದನ ಸೇರಿದಾಗಲೂ ಅದೇ ಧರಣಿ ಮುಂದುವರಿಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹಾರಾ ಪ್ರಕರಣವನ್ನೇ ಪ್ರಸ್ತಾಪಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಗದ್ದಲ ಮುಂದುವರೆದಿದ್ದರಿಂದ ಸ್ಪೀಕರ್ ಅವರು ಶುಕ್ರವಾರಕ್ಕೆ ಕಲಾಪ ಮುಂದೂಡಿದರು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶೆಟ್ಟರ್, ನಿಯಮ 60 ಅಡಿ ನಿಲುವಳಿ ಸೂಚನೆ ಮಂಡಿಸಿದ್ದೆವು. ಗೋವಿಂದ ರಾಜ್ ಮನೆಯಲ್ಲಿ ಡೈರಿ ಸಿಕ್ಕ ವಿಚಾರ ದೇಶದಾದ್ಯಂತ ಸಾಕಷ್ಟು ಚರ್ಚೆ ಆಗುತ್ತಿದೆ. ಆದರೆ ಸದನದಲ್ಲಿ ಸ್ಪೀಕರ್ ಪ್ರಶ್ನೋತ್ತರ ಅವಧಿ ಮುಗಿದ ಮೇಲೆ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದರೂ ಸ್ಪೀಕರ್ ಮನವಿಯನ್ನು ತಿರಸ್ಕರಿಸಿದರು. ಸ್ಪೀಕರ್ ಅವಕಾಶ ನೀಡದ್ದನ್ನೆ ಪ್ರಶ್ನಿಸಿ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದರು.