ರಾಜ್ಯದಲ್ಲಿ ನೆಲೆಸಿರುವ ನಾಲ್ಕು ಲಕ್ಷಕ್ಕೂ ಅಧಿಕ ಬಾಂಗ್ಲಾದೇಶೀಯರ ಕುರಿತು ‘ಕನ್ನಡಪ್ರಭ- ಸುವರ್ಣ ನ್ಯೂಸ್’ ಪ್ರಕಟಿಸಿದ್ದ ವರದಿ ಮಂಗಳವಾರ ಪ್ರತಿಧ್ವನಿಸಿತು. ಮಂಗಳವಾರ ಪ್ರಶ್ನೋತ್ತರ ವೇಳೆ ಬಿಜೆಪಿಯ ವೈ.ಎ.ನಾರಾಯಣ ಸ್ವಾಮಿ ಅವರು ಬಾಂಗ್ಲಾ ಅಕ್ರಮ ವಲಸೆ ಕುರಿತು ಗೃಹ ಸಚಿವರನ್ನು ಪ್ರಶ್ನಿಸುತ್ತಾ, ಈ ಬಗ್ಗೆ ‘ಕನ್ನಡಪ್ರಭ’ ಪ್ರಕಟಿಸಿದ ವರದಿಯ ಪ್ರತಿಯನ್ನು ಪ್ರದರ್ಶಿಸಿದರು.

ವಿಧಾನಸಭೆ: ರಾಜ್ಯದಲ್ಲಿ ನೆಲೆಸಿರುವ ನಾಲ್ಕು ಲಕ್ಷಕ್ಕೂ ಅಧಿಕ ಬಾಂಗ್ಲಾದೇಶೀಯರ ಕುರಿತು ‘ಕನ್ನಡಪ್ರಭ- ಸುವರ್ಣ ನ್ಯೂಸ್’ ಪ್ರಕಟಿಸಿದ್ದ ವರದಿ ಮಂಗಳವಾರ ಪ್ರತಿಧ್ವನಿಸಿತು. ಮಂಗಳವಾರ ಪ್ರಶ್ನೋತ್ತರ ವೇಳೆ ಬಿಜೆಪಿಯ ವೈ.ಎ.ನಾರಾಯಣ ಸ್ವಾಮಿ ಅವರು ಬಾಂಗ್ಲಾ ಅಕ್ರಮ ವಲಸೆ ಕುರಿತು ಗೃಹ ಸಚಿವರನ್ನು ಪ್ರಶ್ನಿಸುತ್ತಾ, ಈ ಬಗ್ಗೆ ‘ಕನ್ನಡಪ್ರಭ’ ಪ್ರಕಟಿಸಿದ ವರದಿಯ ಪ್ರತಿಯನ್ನು ಪ್ರದರ್ಶಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದಕ್ಕೆ ಉತ್ತರ ನೀಡಿದ ಗೃಹ ಸಚಿವ ಆರ್. ರಾಮಲಿಂಗಾರೆಡ್ಡಿ, ರಾಜ್ಯದಲ್ಲಿ ಅಕ್ರಮವಾಗಿ ವಾಸವಾಗಿರುವ ಬಾಂಗ್ಲಾ ದೇಶೀಯರ ಪತ್ತೆಗೆ ಪೊಲೀಸ್ ಇಲಾಖೆ ವಿಶೇಷ ಕಾರ್ಯಾಚರಣೆ ನಡೆಸಲಿದೆ ಎಂದು ಹೇಳಿದರು.

ಇದಕ್ಕೆ ತೃಪ್ತಗೊಳ್ಳದ ಶಾಸಕ ನಾರಾಯಣ ಸ್ವಾಮಿ, ಅಕ್ರಮ ವಲಸಿಗರಿಗೆ ಆಧಾರ್‌ಕಾರ್ಡ್, ರೇಷನ್ ಕಾರ್ಡ್‌ಗಳನ್ನು ಕೂಡ ಕೊಡಲಾಗಿದೆ ಎಂದು ಆರೋಪಿಸಿದರೆ, ಶಾಸಕ ಸತೀಶ್ ರೆಡ್ಡಿ, ಬೆಂಗಳೂರಿನಲ್ಲಿ ಸರ ಗಳ್ಳತನದಲ್ಲಿ ಅವರದ್ದೇ ದೊಡ್ಡ ಕೈವಾಡ ಎಂದು ಆರೋಪಿಸಿದರು.

ಆಗ ಪ್ರತಿಕ್ರಿಯಿಸಿದ ಸಚಿವ ರಾಮಲಿಂಗಾ ರೆಡ್ಡಿ, ರಾಜ್ಯದಲ್ಲಿ ಈವರೆಗೆ ಅಕ್ರಮ ಬಾಂಗ್ಲಾದೇಶೀಯರ ವಿರುದ್ಧ ಒಟ್ಟು 79 ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಪೈಕಿ 50 ಜನರನ್ನು ವಾಪಸ್ ಕಳಿಸಲಾಗಿದೆ ಎಂದರು.