ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರೈ ಕೊಡಗು ಸಂತ್ರಸ್ತರಿಗೆ 5 ಲಕ್ಷ ರೂ. ನೆರವು ನೀಡಿದ್ದಾರೆ. ಮೈಸೂರಿನ ಸಂಘಟನೆಗಳ ಮೂಲಕ ಪರಿಹಾರ ಹಣ ತಲುಪಿಸಿದ್ದಾರೆ.
ಬೆಂಗಳೂರು[ಆ.19]: ನೆರೆಗೆ ತತ್ತರಿಸಿರುವ ಕಾಫಿ ನಾಡು ಕೊಡಗಿಗೆ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಜನ ಸಾಮಾನ್ಯರಿಂದ ಒಳಗೊಂಡು ಸಮಾಜದ ವಿವಿಧ ಸ್ತರದ ಪ್ರಮುಖರು ಕೂಡ ತಮ್ಮ ತನು ಮನ ಧನ ಸಹಾಯ ಮಾಡುತ್ತಿದ್ದಾರೆ.
ಇಂದು ದಕ್ಷಿಣ ಭಾರತದ ಖ್ಯಾತ ಚಿತ್ರನಟ ಪ್ರಕಾಶ್ ರೈ ಕೊಡಗು ಸಂತ್ರಸ್ತರಿಗೆ 5 ಲಕ್ಷ ರೂ. ನೆರವು ನೀಡಿದ್ದಾರೆ. ಮೈಸೂರಿನ ಸಂಘಟನೆಗಳ ಮೂಲಕ ಪರಿಹಾರ ಹಣ ತಲುಪಿಸಿದ್ದಾರೆ. ಮುಂದಿನ ದಿನಗಳಲ್ಲಿ ನಿರಾಶ್ರಿತರಿಗೆ ನೆರವಾಗುವುದರ ಜೊತೆ ನೆರೆ ಪೀಡಿತ ಪ್ರದೇಶಗಳ ಪುನರ್ವಸತಿಗೆ ನೆರವಿನ ಭರವಸೆ ನೀಡಿದ್ದಾರೆ. ಸಾರ್ವಜನಿಕರಿಗೂ ಕೊಡಗು ಹಾಗೂ ಕೇರಳದ ಪ್ರವಾಹ ಸಂತ್ರಸ್ತರಿಗೆ ನೆರವು ನೀಡುವಂತೆ ಮನವಿ ಮಾಡಿಕೊಂಡಿದ್ದು ಈ ಬಗ್ಗೆ ತಮ್ಮ ಟ್ವಿಟರ್ ಅಕೌಂಟ್'ನಲ್ಲಿ ಬರೆದುಕೊಂಡಿದ್ದಾರೆ.
ನಟ ಯಶ್ ಕೂಡ ತಮ್ಮ ಯಶಮಾರ್ಗ ಸಂಘಟನೆಯ ಮೂಲಕ ಕೊಡಗಿನ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಯನ್ನು ತಲುಪಿಸಿದ್ದಾರೆ. ಕಳೆದ ಮೂರು ದಿನಗಳಿಂದ ಸಂಘಟನೆಯ ಸದಸ್ಯರು ನೆರೆಪೀಡಿತ ಪ್ರದೇಶದಲ್ಲಿ ಬೀಡುಬಿಟ್ಟಿದ್ದು ಪರಿಹಾರ ಕೇಂದ್ರದಲ್ಲಿರುವ ಸಾರ್ವಜನಿಕರಿಗೆ ನೆರವು ನೀಡುತ್ತಿದ್ದಾರೆ.
