ಕ್ಷುಲ್ಲಕ ಕಾರಣಕ್ಕೆ ಸಿನಿಮಾ ನಟ ಮತ್ತು ಆತನ ಸ್ನೇಹಿತರನ್ನು ಡಾಬಾ ಸರ್ವರ್‌ಗಳು ಗೃಹಬಂಧನದಲ್ಲಿರಿಸಿ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬೆಳ್ಳೂರು ಕ್ರಾಸ್‌ನಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ನಾಗಮಂಗಲ: ಕ್ಷುಲ್ಲಕ ಕಾರಣಕ್ಕೆ ಸಿನಿಮಾ ನಟ ಮತ್ತು ಆತನ ಸ್ನೇಹಿತರನ್ನು ಡಾಬಾ ಸರ್ವರ್‌ಗಳು ಗೃಹಬಂಧನದಲ್ಲಿರಿಸಿ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬೆಳ್ಳೂರು ಕ್ರಾಸ್‌ನಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ಸ್ಯಾಂಡಲ್‌ವುಡ್ ನಟ ಹರ್ಷ ಮತ್ತು ಆತನ ಸ್ನೇಹಿತರು ಹಲ್ಲೆಗೊಳಗಾಗಿದ್ದಾರೆ ಎನ್ನಲಾಗಿದೆ. ಮೈಸೂರಿನಲ್ಲಿ ಸ್ನೇಹಿತನ ಮದುವೆ ಮುಗಿಸಿ ನಾಗಮಂಗಲ ಮಾರ್ಗವಾಗಿ ಬೆಂಗಳೂರಿಗೆ ವಾಪಸ್ ತೆರಳುವ ಮಾರ್ಗಮಧ್ಯೆ ಸ್ನೇಹಿತರೊಂದಿಗೆ ಚಿತ್ರನಟ ಹರ್ಷ ಬೆಳ್ಳೂರು ಕ್ರಾಸ್‌ನ ಡಾಬಾವೊಂದಕ್ಕೆ ಊಟಕ್ಕೆ ಹೋಗಿದ್ದರು.
ಈ ವೇಳೆ ನಟ ಹರ್ಷ ಸ್ನೇಹಿತರು ಮತ್ತು ಡಾಬಾ ಸರ್ವರ್‌ಗಳÜ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ನಡೆದಿದೆ. ಪರಿಸ್ಥಿತಿ ಕೈಕೈ ಮಿಲಾಯಿಸುವ ಹಂತ ತಲುಪಿದಾಗ ಜೊತೆಗೂಡಿದ ಡಾಬಾ ಸರ್ವರ್‌ಗಳು ಹರ್ಷ ಮತ್ತು ಸ್ನೇಹಿತರಿಗೆ ಗೃಹಬಂಧನದಲ್ಲಿರಿಸಿ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ನಟ ಹರ್ಷ ರಾಜಾಹುಲಿ, ವರ್ಧನ, ಗಜಪಡೆ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.
