Asianet Suvarna News Asianet Suvarna News

ಇನ್ನೆರಡು ದಿನ ದುನಿಯಾ ವಿಜಯ್‌ಗೆ ಜೈಲೇ ಗತಿ

ಮಾರುತಿಗೌಡ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಜಾಮೀನು ಅರ್ಜಿ ವಿಚಾರಣೆ ಮುಗಿದಿದ್ದು, ಇನ್ನೆರಡು ದಿನ ದುನಿಯಾ ವಿಜಯ್‌ಗೆ ಜೈಲೇ ಗತಿ.

Kannada Actor Duniya Vijay Bail Plea Order Postponed to Sept 26th
Author
Bengaluru, First Published Sep 24, 2018, 4:21 PM IST
  • Facebook
  • Twitter
  • Whatsapp

ಬೆಂಗಳೂರು, [ಸೆ.24]: ಮಾರುತಿಗೌಡ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಜಾಮೀನು ಅರ್ಜಿ ವಿಚಾರಣೆ ಮುಗಿದಿದ್ದು, ಆದೇಶವನ್ನು ಸೆಪ್ಟೆಂಬರ್ 26ಕ್ಕೆ ಮುಂದೂಡಲಾಗಿದೆ.

 ಮ್ಯಾಜಿಸ್ಟ್ರೀಟ್ ಕೋರ್ಟ್ ಇಂದು ದುನಿಯಾ ಜಾಮೀನು ಅರ್ಜಿ ವಿಚಾರಣೆ ನಡೆಸಿತು. ಆದರೆ, ಜಾಮೀನು ನೀಡಬೇಕೋ ಬೇಡವೋ ಎನ್ನುವ ಆದೇಶವನ್ನು ಇದೇ ಸೆ.26ಕ್ಕೆ ಮುಂದೂಡಿ ಆದೇಶ ಹೊರಡಿಸಿದೆ. ಇದ್ರಿಂದ ಜಂಗ್ಲಿ ವಿಜಯ್‌ಗೆ ಇನ್ನೆರಡು ದಿನ ಜೈಲೆ ಗತಿಯಾಗಿದೆ. 

ರೌಡಿಶೀಟರ್‌ಗಳ ಪಟ್ಟಿಗೆ ಕರಿಚಿರತೆ ದುನಿಯಾ ವಿಜಿ..?

ಮಾರುತಿಗೆ 15 ಸ್ಟಿಚ್ ಹಾಕಲಾಗಿದ್ದು, ಇನ್ನು ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಸರ್ಕಾರಿ ಪರ ವಕೀಲ ವಾದ ಮಂಡನೆ ಮಾಡಿದರು. ಇದನ್ನು ಪರಿಗಣಿಸಿದ ಕೋರ್ಟ್ ವಿಜಿ ಜಾಮೀನು ಆದೇಶವನ್ನು ಬುಧವಾರಕ್ಕೆ ಮುಂದೂಡಿ ಆದೇಶ ಹೊರಡಿಸಿದೆ.

ದುನಿಯಾ ವಿಜಯ್ ಪ್ರಕರಣದ ಸುದ್ದಿಗಳು

Follow Us:
Download App:
  • android
  • ios