ಬೆಂಗಳೂರು, [ಸೆ.24]: ಸ್ಯಾಂಡಲ್‌ವುಂಡ್ ನಟ ದುನಿಯಾ ವಿಜಿಗೆ ಪ್ರಾಬ್ಲಂ ಮೇಲೆ ಪ್ರಾಬ್ಲಂ ಎದುರಾಗುತ್ತಿವೆ. ಪಾನಿಪುರಿ ಕಿಟ್ಟಿ ಅಣ್ಣನ ಮಗ ಮಾರುತಿಗೌಡ ಮೇಲಿನ ಹಲ್ಲೆ ಪ್ರಕರಣದಲ್ಲಿ ದುನಿಯಾ ವಿಜಿ ಜೈಲು ಸೇರಿದ್ದು, ಇದೀಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ.

ದುನಿಯಾ ವಿಜಿಯ ರಂಪಾಟ ಇದೇ ಮೊದಲಲ್ಲ. ಈ ಹಿಂದೆ ಕೂಡ ವಿಜಿ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಅವುಗಳೆಲ್ಲವುಗಳನ್ನ ಗಣನೆಗೆ ತೆಗೆದುಕೊಂಡು ವಿಜಿ ಮೇಲೆ ರೌಡಿಶೀಟರ್ ಕೇಸ್ ದಾಖಲಿಸುವ ಸಾಧ್ಯತೆಗಳಿವೆ.

 

ದುನಿಯಾ ವಿಜಿ ಮತ್ತು ಸಹಚರ ಜಿಮ್ ಟ್ರೈನರ್ ಪ್ರಸಾದ್ ವಿರುದ್ದ ರೌಡಿಶೀಟರ್ ತೆರೆಯಲು ಸಿಸಿಬಿ ಪೊಲೀಸರು ಚಿಂತನೆ ನಡೆಸಿದ್ದು, ಹಿಂದಿನ ಎಲ್ಲಾ ಪ್ರಕರಣದ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಇನ್ನೇರಡು ದಿನಗಳಲ್ಲಿ ಇಬ್ಬರ ವಿರುದ್ದ ಸಿಸಿಬಿ ಪೊಲೀಸರಿಂದ ರೌಡಿಪಟ್ಟಿ ತೆಗೆಯಲು ಸಿದ್ದತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.