ಮಂಡ್ಯ ರಾಜಕಾರಣಕ್ಕೆ ಅಂಬಿಯೇ ಹೈಕಮಾಂಡ್
ಮಂಡ್ಯದ ಗಂಡು, ಕರ್ನಾಟಕದ ಕರ್ಣ ಅಂಬರೀಶ್ ನಮ್ಮನ್ನೆಲ್ಲ ಅಗಲಿದ್ದಾರೆ. ಅವರು ಕೇವಲ ನಾಯಕ ನಟನಾಗಿ ಮಾತ್ರ ಗುರುತಿಸಿಕೊಂಡವರಲ್ಲ. ಪ್ರಬಲ ರಾಜಕಾರಣಿಯಾಗಿಯೂ ಹೆಸರು ಮಾಡಿದ್ದರು. ಕಾವೇರಿ ನೀರಿನ ವಿಚಾರದಲ್ಲಿ ರಾಜೀನಾಮೆ ನೀಡಿ ಹೊರಬಂದಿದ್ದರು ರೆಬಲ್ ಸ್ಟಾರ್.
ಬೆಂಗಳೂರು[ನ.24] ಕರ್ನಾಟಕದ ಮಟ್ಟಿಗೆ ಕರಾಳ ಶನಿವಾರ. ಬಸ್ ದುರಂತದಲ್ಲಿ 30 ಜನರನ್ನು ಕಳೆದುಕೊಂಡ ರಾಜ್ಯ ಅದೇ ದಿನ ರಾತ್ರಿಯ ವೇಳೆಗೆ ಕನ್ನಡ ಚಿತ್ರರಂಗದ ಹಿರಿಯಣ್ಣನನ್ನು ಕಳೆದುಕೊಂಡಿದೆ. ರೆಬಲ್ ಸ್ಟಾರ್ ಇನ್ನಿಲ್ಲ ಎಂಬ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಟಿಕೆಟ್ ಪಡೆದುಕಿಂಡಿರಲಿಲ್ಲ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಅಷ್ಟೂ ಅಭ್ಯರ್ಥಿಗಳ ಪಟ್ಟಿ ಬಿಡಗುಡೆ ಮಾಡಿದ್ದರೂ ಅಂಬರೀಶ್ ಸ್ಥಾನಕ್ಕೆ ಅಂದರೆ ಮಂಡ್ಯಕ್ಕೆ ಯಾರನ್ನು ಘೋಷಣೆ ಮಾಡಿರಲಿಲ್ಲ. ಅಂದರೆ ಅಂಬರೀಶ್ ತಾಕತ್ತು ನಿಮಗೆ ಗೊತ್ತಾಗುತ್ತದೆ. ನಂತರ ಅಂಬರೀಶ್ ಸ್ಪರ್ಧಿಸುವ ಮನಸ್ಸು ಮಾಡಿರಲಿಲ್ಲ.
ಕಾಲಿಗೆ ಬಿದ್ದಿದ್ದ ಶಿವರಾಮೇಗೌಡ: ಮಂಡ್ಯ ಲೋಕಸಭೆಯ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಜಯಗಳಿಸಿದ್ದ ಜೆಡಿಎಸ್ ನ ಶಿವರಾಮೆಗೌಡ ಅಂಬರೀಶ್ ಕಾಳಿಗೆ ಬಿದ್ದಿದ್ದರು.
ವಸತಿ ಸಚಿವ ಸ್ಥಾನದಿಂದ ಗೇಟ್ ಪಾಸ್: ಸಿದ್ದರಾಮಯ್ಯ ಸರಕಾರದಲ್ಲಿ ವಸತಿ ಸಚಿವರಾಗಿದ್ದ ಅಂಬರೀಶ್ ಅವರನ್ನು ಕಾರಣವಿಲ್ಲದೇ ಕೈ ಬಿಡಲಾಗಿತ್ತು. ಇಲ್ಲಿಂದಲೇ ಅಂಬರೀಶ್ ರಾಜಕಾರಣದಿಂದ ದೂರವಾಗಿದ್ದರು.