ಕೊಪ್ಪಳ[ಮಾ. 28] ಐತಿಹಾಸಿಕ ಕನಕಾಚಲ ಲಕ್ಷ್ಮೀ ನರಸಿಂಹಸ್ವಾಮಿ ರಥೋತ್ಸವ ನಡೆಯುವಾಗ ರಥದ ಇರುಸು ಮುರಿದಿರುವ ಘಟನೆ ಬುಧವಾರ ನಡೆದಿದ್ದು ಯಾವುದೆ ಅಪಾಯ ಸಂಭವಿಸಿಲ್ಲ.

ಸರಿಯಾಗಿ 4 ಗಂಟೆಗೆ ಆರಂಭವಾದ ರಥೋತ್ಸವವು ಪಾದಗಟ್ಟಿ ತಲುಪುವ ಮುನ್ನವೇ ನಡು ಬೀದಿಯಲ್ಲಿರುವಾಗ ರಥದ ಎಡಭಾಗದ ಗಾಲಿ ತೋಡಿಸಲಾಗಿರುವ ಇರುಸು ಮುರಿದಿದೆ. ರಥದ ಇರುಸು ಮುರಿದಿರು ಸುದ್ದಿ ತಿಳಿದ ದೇವಸ್ಥಾನ ಅಧಿಕಾರಿಗಾಳು ಹಾಗೂ ಪೋಲೀಸ್ ಅಧಿಕಾರಿಗಾಳು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು.

ಇರುಸು ಮುರಿದ ಪರಿಣಾಮ ಯಾವುದೇ ಹಾನಿಯಾಗಿಲ್ಲ. ಘಟನೆಗೆ ಏನು ಕಾರಣ ಎಂಬ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.