ಇತ್ತೀಚಿಗೆ ಕೆಲಸವಿಲ್ಲದೆ ಅಲೆಯುತ್ತಿದ್ದ ಇಮ್ರಾನ್‌, ಹೊಸ ಕ್ಯಾಬ್‌ ಖರೀದಿಸಲು ಯೋಜಿಸಿದ್ದ. ಇದಕ್ಕಾಗಿ ಹಣ ತವರು ಮನೆಯಿಂದ ಹಣ ತರುವಂತೆ ಪತ್ನಿ ಮೇಲೆ ಅವನು ಒತ್ತಡ ಹೇರುತ್ತಿದ್ದ. ಆದರೆ, ಪತಿ ಬೇಡಿಕೆಗೆ ಸಲ್ಮಾ ಆಕ್ಷೇಪಿಸಿದ್ದಳು.
ಬೆಂಗಳೂರು: ಕ್ಯಾಬ್ ಖರೀದಿಗೆ ತವರು ಮನೆಯಿಂದ ಹಣ ತರಲು ನಿರಾಕರಿಸಿದ್ದಕ್ಕೆ ಆರು ತಿಂಗಳ ಗರ್ಭಿಣಿ ಪತ್ನಿಯನ್ನು ಪತಿ ಕೊಂದಿರುವ ಘಟನೆ ಕೆಂಗೇರಿ ಬಳಿ ನಡೆದಿದೆ. ಬೀಡಿ ಕಾಲೋನಿ ನಿವಾಸಿ ಸಲ್ಮಾ ಭಾನು (22) ಹತ್ಯೆಯಾದ ದುರ್ದೈವಿ. ಈ ಪ್ರಕರಣ ಸಂಬಂಧ ಸೈಯದ್ ಇಮ್ರಾನ್ ಪಾಷಾನನ್ನು ಪೊಲೀಸರು ಬಂಧಿಸಿದ್ದಾರೆ. ವರದಕ್ಷಿಣೆ ವಿಚಾರವಾಗಿ ಮಂಗಳವಾರ ಸಂಜೆ ಇಮ್ರಾನ್ ದಂಪತಿ ಮಧ್ಯೆ ಜಗಳವಾಗಿದೆ. ಈ ಹಂತದಲ್ಲಿ ಕೋಪಗೊಂಡ ಇಮ್ರಾನ್, ಪತ್ನಿಗೆ ಕಪಾಳಕ್ಕೆ ಹೊಡೆದಿದ್ದಾನೆ. ಆಗ ಕುಸಿದು ಬಿದ್ದಾಗ ಪತ್ನಿ ಕತ್ತು ಹಿಸುಕಿ ಕೊಂದು ಆರೋಪಿ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಸಲ್ಮಾ ಹಾಗೂ ಇಮ್ರಾನ್ ವಿವಾಹವಾಗಿದ್ದು, ಈ ದಂಪತಿಗೆ ಎರಡು ವರ್ಷದ ಮಗುವಿದೆ. ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ದಂಪತಿ, ಕೌಟುಂಬಿಕ ವಿಷಯವಾಗಿ ಮನಸ್ತಾಪ ಮಾಡಿಕೊಂಡಿದ್ದರು. ಇತ್ತೀಚಿಗೆ ಕೆಲಸವಿಲ್ಲದೆ ಅಲೆಯುತ್ತಿದ್ದ ಇಮ್ರಾನ್, ಹೊಸ ಕ್ಯಾಬ್ ಖರೀದಿಸಲು ಯೋಜಿಸಿದ್ದ. ಇದಕ್ಕಾಗಿ ಹಣ ತವರು ಮನೆಯಿಂದ ಹಣ ತರುವಂತೆ ಪತ್ನಿ ಮೇಲೆ ಅವನು ಒತ್ತಡ ಹೇರುತ್ತಿದ್ದ. ಆದರೆ, ಪತಿ ಬೇಡಿಕೆಗೆ ಸಲ್ಮಾ ಆಕ್ಷೇಪಿಸಿದ್ದಳು.
ಕನ್ನಡಪ್ರಭ ವಾರ್ತೆ
(epaper.kannadaprabha.in)
