ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್, ರವಿಶಂಕರ್ ಪ್ರಸಾದ್ ಜೊತೆ ಮಾತನಾಡುತ್ತೇನೆ. ಕಂಬಳದ ಕೋಣಗಳನ್ನು ಮಕ್ಕಳಂತೆ ಸಾಕುತ್ತಾರೆ. ಜಲ್ಲಿಕಟ್ಟುವಿನ ಜೊತೆ ಕಂಬಳದ ಹೋಲಿಕೆ ಬೇಡ ಎಂದು ಬಿಎಸ್’ವೈ ಹೇಳಿದ್ದಾರೆ.
ಉಡುಪಿ (ಜ.24): ಕಂಬಳ ಕುರಿತು ಮಾಜಿ ಸಿಎಂ ಯಡಿಯೂರಪ್ಪ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ನೂರಕ್ಕೆ ನೂರು ಕಂಬಳ ನಡೆಯುತ್ತದೆ, ಎಂದಿದ್ದಾರೆ.
ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್, ರವಿಶಂಕರ್ ಪ್ರಸಾದ್ ಜೊತೆ ಮಾತನಾಡುತ್ತೇನೆ. ಕಂಬಳದ ಕೋಣಗಳನ್ನು ಮಕ್ಕಳಂತೆ ಸಾಕುತ್ತಾರೆ. ಜಲ್ಲಿಕಟ್ಟುವಿನ ಜೊತೆ ಕಂಬಳದ ಹೋಲಿಕೆ ಬೇಡ ಎಂದು ಬಿಎಸ್’ವೈ ಹೇಳಿದ್ದಾರೆ.
ಹಾಗೇಯೇ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು ಕೇಂದ್ರ ಸರ್ಕಾರ ಬರ ಪರಿಹಾರ ನೀಡುವಲ್ಲಿ ವಿಳಂಬ ಮಾಡುತ್ತಿದೆ ಎಂದು ಕೇಂದ್ರದ ಕಡೆ ಬೊಟ್ಟು ಮಾಡುವುದು ಸರಿಯಲ್ಲ. ಒಂದೆರಡು ದಿನ ವಿಳಂಬವಾಗಬಹುದು. ರಾಜ್ಯ ಸರ್ಕಾರ ಇರುವ ಹಣ ಖರ್ಚು ಮಾಡಲಿ. ಸಿಎಂ’ಗೆ ಅಷ್ಟೂ ಕಾಮನ್ ಸೆನ್ಸ್ ಇಲ್ವಾ ಎಂದು ಕಿಡಿಕಾರಿದ್ದಾರೆ.