ಮನೆಯಲ್ಲಿದ್ದುಕೊಂಡೇ ನೀವು ಲಕ್ಷಾಧಿಪತಿಗಳಾಗಲು ಬಯಸುತ್ತೀರಾ? ಹೌದು ಎಂದಾದರೆ ನಟ, ನಿರ್ಮಾಪಕ KRK ಅಂದರೆ ಕಮಲ್ ರಶೀದ್ ಖಾನ್ ಅದ್ಭುತ ಆಫರ್ ಒಂದನ್ನು ನೀಡಿದ್ದಾರೆ. ಟ್ವಿಟರ್'ನಲ್ಲಿ ನನ್ನನ್ನು ಫಾಲೋ ಮಾಡುವವರಿಗೆ 5 ಲಕ್ಷ ನೀಡುವುದಾಗಿ ಈ ಸ್ಟಾರ್ ನಟ ಖುದ್ದು ತಮ್ಮ ಟ್ವಿಟರ್ ಅಕೌಂಟ್'ನಲ್ಲಿ ಪೋಸ್ಟ್ ಮಾಡುವ ಮೂಲಕ ಹೇಳಿಕೊಂಡಿದ್ದಾರೆ.
ಮುಂಬೈ(ಮೇ.23):ಮನೆಯಲ್ಲಿದ್ದುಕೊಂಡೇ ನೀವು ಲಕ್ಷಾಧಿಪತಿಗಳಾಗಲು ಬಯಸುತ್ತೀರಾ? ಹೌದು ಎಂದಾದರೆ ನಟ, ನಿರ್ಮಾಪಕ KRK ಅಂದರೆ ಕಮಲ್ ರಶೀದ್ ಖಾನ್ ಅದ್ಭುತ ಆಫರ್ ಒಂದನ್ನು ನೀಡಿದ್ದಾರೆ. ಟ್ವಿಟರ್'ನಲ್ಲಿ ನನ್ನನ್ನು ಫಾಲೋ ಮಾಡುವವರಿಗೆ 5 ಲಕ್ಷ ನೀಡುವುದಾಗಿ ಈ ಸ್ಟಾರ್ ನಟ ಖುದ್ದು ತಮ್ಮ ಟ್ವಿಟರ್ ಅಕೌಂಟ್'ನಲ್ಲಿ ಪೋಸ್ಟ್ ಮಾಡುವ ಮೂಲಕ ಹೇಳಿಕೊಂಡಿದ್ದಾರೆ.
ವಾಸ್ತವವಾಗಿ ಸೋಮವಾರದಂದು ಕಮಲ್ ರಶೀದ್ ಖಾನ್ ತಮ್ಮ ಟ್ವಿಟರ್'ನಲ್ಲಿ ಜನರಿಗೆ ಅಚ್ಚರಿ ಮೂಡಿಸುವಂತಹ ಟ್ವೀಟ್ ಒಂದನ್ನು ಮಾಡಿದ್ದಾರೆ. ತಮ್ಮ ಟ್ವೀಟ್'ನಲ್ಲಿ ಇವರು 'ಐದು ಲಕ್ಷ ಗಳಿಸಲು ಇನ್ನು ಕೇವಲ 8 ದಿನಗಳಷ್ಟೇ ಉಳಿದಿವೆ. 2017ರ ಮೇ 31ರೊಳಗೆ ನನ್ನನ್ನು ಟ್ವಿಟರ್'ನಲ್ಲಿ ಫಾಲೋ ಮಾಡಿ, 1 ಜೂನ್ 2017ರಂದು ನಿಮ್ಮ ಅಕೌಂಟ್'ಗೆ 5 ಲಕ್ಷ ಟ್ರಾನ್ಸ್ಫರ್ ಆಗುತ್ತದೆ' ಎಂದು ಬರೆದುಕೊಂಡಿದ್ದಾರೆ. ಆದರೆ ಈವರೆಗೂ ಈ ಟ್ವೀಟ್ ಹಿಂದಿನ ಕಾರಣ ಇನ್ನೂ ತಿಳಿದು ಬಂದಿಲ್ಲ ಅಲ್ಲದೇ ಫಾಲೋ ಮಾಡಿದ ವ್ಯಕ್ತಿಗೆ ಹೇಗೆ ಹಣ ರವಾನಿಸುತ್ತಾರೆ ಎಂಬ ಕುರಿತಾಗಿ ಸ್ಪಷ್ಟನೆ ನೀಡಿಲ್ಲ.
ಇನ್ನು ಈ ನಟ ಇಂತಹ ಟ್ವೀಟ್ ಮಾಡಿದ್ದಾರೆಂದರೆ ಇವರ ಫಾಲೋವರ್ಸ್ ಸಂಕ್ಯೆ ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನವಿಲ್ಲ, ಈಗಾಗಲೇ ಇವರ ಫಾಲೋವರ್ಸ್ ಸಂಖ್ಯೆ 39 ಲಕ್ಷಕ್ಕೇರಿದೆ. ಆದರೂ ಈ ಪೋಸ್ಟ್'ಗೆ ಉತ್ತರಿಸಿರುವ ಬಹುತೇಕರು ಕಮಲ್'ರನ್ನು ಟೀಕಿಸಿದ್ದಲ್ಲದೇ ಇದು ನಕಲಿ ಭರವಸೆ ಎಂದು ದೂಷಿಸಿದ್ದಾರೆ. ಮತ್ತೆ ಕೆಲವರು ಫಾಲೋ ಮಾಡುತ್ತಿದ್ದೇನೆ, ಒಂದು ವೇಳೆ ಹಣ ನೀಡದಿದ್ದಲ್ಲ ನಿನ್ನ ಮನೆಗೆ ನುಗ್ಗಿ ದಾಂಧಲೆ ನಡೆಸುವುದಾಗಿಯೂ ಬರೆದುಕೊಂಡಿದ್ದಾರೆ.
ಈ ನಟ ತಮ್ಮ ಟ್ವೀಟ್'ಗಳಿಂದ ವಿವಾದಕ್ಕೀಡಾಗುವುದು ಸಾಮಾನ್ಯವಾಗಿದೆ. ಕೆಲ ದಿನಗಳ ಹಿಂದಷ್ಟೇ 'ಅಮ್ಮಂದಿರ ದಿನ'ದಂದು ಪ್ರತಿಯೊಬ್ಬರೂ ತಮ್ಮ ತಾಯಿಯೊಂದಿಗಿದ್ದ ಫೋಟೋ ಶೇರ್ ಮಾಡುತ್ತಿದ್ದರೆ. ಕಮಲ್ ಮಾತ್ರ ತನ್ನ ಫೋಟೋ ಶೇರ್ ಮಾಡುತ್ತಾ 'ಅಮ್ಮಾ ನಿನಗೆ 'ಅಮ್ಮಂದಿರ ದಿನ'ದ ಶುಭಾಷಯಗಳು. ಒಂದು ಕಾಲದಲ್ಲಿ ನೀವು ನನಗೆ ವಿಷ ನೀಡಿ ಸಾಯಿಸಬೇಕೆಂದಿದ್ದಿರಿ ಆದರೆ ಇಂದು ನಿಮಗೆ ನನ್ನ ಮೇಲೆ ಗೌರವವಿರಬಹುದು' ಎಂದು ಬರೆದುಕೊಂಡಿದ್ದರು. ಇವರ ಈ ಟ್ವೀಟ್'ನ್ನು ಹಲವರು ಟೀಕಿಸಿದ್ದರು.
ಸಿನಿಮಾ ಇಂಡಸ್ಟ್ರಿಗೆ ಸಂಬಂಧಿಸಿದ ವ್ಯಕ್ತಿಗಳೊಂದಿಗೆ ಟ್ವಿಟರ್'ನಲ್ಲಿ ಜಗಳವಾಡುವುದು ಕೂಡಾ ಈ ನಟನಿಗೆ ಸಾಮಾನ್ಯ. ಕೆಲ ಸಮಯದ ಹಿಂದಷ್ಟೇ ಕಪಿಲ್ ಶರ್ಮಾ ಶೋದಿಂದ ಹೊರಬಂದ ಸುನಿಲ್ ಗ್ರೋವರ್ ಕಾಲೆಳೆಯುವ ಮೂಲಕ ಕಮಲ್ ರಶೀದ್ ಖಾನ್ ವಿವಾದಕ್ಕೀಡಾಗಿದ್ದರು.
