ಕೇರಳದಲ್ಲಿ ಮಹಾಮಳೆ ಪ್ರವಾಹಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ತಮಿಳು ಸ್ಟಾರ್ ಗಳಾದ ಕಾರ್ತಿ, ಸೂರ್ಯ ಸಂತ್ರಸ್ತರಿಗೆ ನೆರವು ನೀಡಿದ್ದಾರೆ. ಇದರ ಬೆನ್ನಲ್ಲೇ ಸೂಪರ್ ಸ್ಟಾರ್ ಕಮಲ್ ಹಾಸನ್ 25 ಲಕ್ಷ ರೂ ದೇಣಿಗೆ ನೀಡಿದ್ದಾರೆ.  

ಚೆನ್ನೈ (ಆ. 11): ಕೇರಳದಲ್ಲಿ ಮಹಾಮಳೆ ಪ್ರವಾಹಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ತಮಿಳು ಸ್ಟಾರ್ ಗಳಾದ ಕಾರ್ತಿ, ಸೂರ್ಯ ಸಂತ್ರಸ್ತರಿಗೆ ನೆರವು ನೀಡಿದ್ದಾರೆ. ಇದರ ಬೆನ್ನಲ್ಲೇ ಸೂಪರ್ ಸ್ಟಾರ್ ಕಮಲ್ ಹಾಸನ್ 25 ಲಕ್ಷ ರೂ ದೇಣಿಗೆ ನೀಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕಮಲ್ ಹಾಸನ್ 25 ಲಕ್ಷ ರೂ ನೀಡಿದ್ದಾರೆ. ಜೊತೆಗೆ ಅಭಿಮಾನಿಗಳಿಗೆ, ಪಕ್ಷದ ಕಾರ್ಯಕರ್ತರಿಗೆ ನೆರವು ನೀಡುವಂತೆ ಸಹಾಯ ಯಾಚಿಸಿದ್ದಾರೆ.

ವರುಣನ ಆರ್ಭಟಕ್ಕೆ ಇದುವರೆಗೂ ಕೇರಳದಲ್ಲಿ 29 ಮಂದಿ ಬಲಿಯಾಗಿದ್ದಾರೆ. ಹೀಗಾಗಿ ಕೇರಳದ ವಿವಿಧ ಪ್ರದೇಶಗಳಲ್ಲಿ ನಿರಾಶ್ರಿತರ ಕೇಂದ್ರ ತೆರೆಯಲಾಗಿದ್ದು ಜನರಿಗೆ ಊಟ ಮತ್ತು ವಸತಿ ಒದಗಿಸಲಾಗುತ್ತಿದೆ. ಮಹಾಮಳೆಗೆ 29 ಮಂದಿ ನೀರಲ್ಲಿ ಸಮಾಧಿಯಾದರೆ 54 ಸಾವಿರ ಜನ ಮನೆಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂತ್ರಸ್ತರ ರಕ್ಷಣಾ ಕಾರ್ಯ ಮುಂದುವರೆದಿದೆ. 

ಮಹಾಮಳೆ ಸಂತ್ರಸ್ತರ ಸಂಕಷ್ಟಕ್ಕೆ ಮಿಡಿದ ’ಸಿಂಗಂ’ ಸಹೋದರರ ಹೃದಯ

ಕೇರಳ ಪ್ರವಾಹದಿಂದ ಸಮಸ್ತವನ್ನೂ ಕಳೆದುಕೊಂಡ ಸಂತ್ರಸ್ತರಿಗೆ ಏಷ್ಯಾನೆಟ್ ನ್ಯೂಸ್ ಚಾರಿಟೇಬಲ್ ಸಂಸ್ಥೆಯೊಂದನ್ನು ಆರಂಭಿಸಿದ್ದು, ಜನರು ಉದಾರವಾಗಿ ದನ ಸಹಾಯ ಮಾಡಬಹುದು. ತಿರುವನಂತಪುರಮ್‌ನ ಕಾರ್ಪೋರೇಷನ್ ಬ್ಯಾಂಕ್‌ಗೆ ಹಣ ವರ್ಗಾವಣೆ ಮಾಡಬಹುದಾಗಿದ್ದು, ಇಲ್ಲಿದೆ ಡೀಟೈಲ್ಸ್...

Asianet News Charitable Trust
 510331001274314
Corporation Bank Thiruvananthapuram Main Branch
IFSC CORP0000070