ಹಿಂದೂ ಬಲಪಂಥೀಯ ಸಂಘಟನೆಗಳು ಹಿಂದೂ ಭಯೋತ್ಪಾದಕರು ಇಲ್ಲವೆಂದು ಹೇಳುವಂತಿಲ್ಲ, ಏಕೆಂದರೆ, ಅವರು ಕೂಡಾ ಹಿಂಸಾಚಾರದಲ್ಲಿ ತೊಡಗಿದ್ದಾರೆ, ಎಂದು ಖ್ಯಾತ ನಟ ಕಮಲ್ ಹಾಸನ್ ಅಭಿಪ್ರಾಯಪಟ್ಟಿದ್ದಾರೆ.

ಚೆನ್ನೈ: ಹಿಂದೂ ಬಲಪಂಥೀಯ ಸಂಘಟನೆಗಳು ಹಿಂದೂ ಭಯೋತ್ಪಾದಕರು ಇಲ್ಲವೆಂದು ಹೇಳುವಂತಿಲ್ಲ, ಏಕೆಂದರೆ, ಅವರು ಕೂಡಾ ಹಿಂಸಾಚಾರದಲ್ಲಿ ತೊಡಗಿದ್ದಾರೆ, ಎಂದು ಖ್ಯಾತ ನಟ ಕಮಲ್ ಹಾಸನ್ ಅಭಿಪ್ರಾಯಪಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆನಂದ ವಿಕಟನ್ ಎಂಬ ಪತ್ರಿಕೆಗೆ ಕಮಲ್ ಹಾಸನ್ ಅಂಕಣವೊಂದು ಬರೆದಿದ್ದು, ಸತ್ಯವೂ ಗೆದ್ದೇ ಗೆಲ್ಲುತ್ತದೆ ಎಂದು ಹೇಳಿದ್ದಾರೆ.

ಮುಂದುವರೆದು, ತನ್ನ ರಾಜಕೀಯ ವಿಚಾರಧಾರೆಯ ಬಗ್ಗೆ ಬರೆದುಕೊಂಡಿರುವ ಕಮಲ್ ಹಾಸನ್, ‘ಕಳೆದ 40 ವರ್ಷಗಳಲ್ಲಿ ನನ್ನ ‘ಬಣ್ಣ’ ಯಾವುದು ಎಂದು ನೋಡಬಹುದಾಗಿದೆ. ನಾನು ಸಿನೆಮಾ ಕ್ಷೇತ್ರದಲ್ಲಿ ಕೆಲಸ ಮಾಡುವವನು, ಖಂಡಿತವಾಗಿಯೂ ನನ್ನ ಬಣ್ಣ ಕೇಸರಿಯಂತೂ ಅಲ,’ ಎಂದು ಕಮಲ್ ಹಾಸನ್ ಹೇಳಿದ್ದಾರೆ.

ನಾನು ಯಾವುದೇ ಕಡೆಗೂ ವಾಲದೇ ಮಧ್ಯಮ ಮಾರ್ಗದಲ್ಲಿ ನಡೆಯುವೆ ಎಂದು ಹೇಳಿರುವ ಕಮಲ್ ಹಾಸನ್, ತಮಿಳುನಾಡು ಶೀಘ್ರದಲ್ಲಿ ಸಾಮಾಜಿಕ ನ್ಯಾಯದ ಮಾದರಿ ರಾಜ್ಯವಾಗಿ ಹೊರಹೊಮ್ಮುವುದು ಎಂದು ಹೇಳಿದ್ದಾರೆ.

ಹಿರಿಯ ನಟ ರಾಜಕೀಯ ರಂಗ ಪ್ರವೇಶಿಸುವ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿದ್ದು, ಈ ಬಗ್ಗೆ ನ.7ಕ್ಕೆ ಮಹತ್ವದ ಘೋಷಣೆ ಮಾಡುವ ಬಹುತೇಕ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.