ಮದ್ಯಪಾನ ನಿಷೇಧದಿಂದ ಒಳ್ಳೆಯದಾಗುವುದಕ್ಕಿಂತ ಹೆಚ್ಚಾಗಿ ಕೆಟ್ಟದ್ದೇ ನಡೆಯುತ್ತದೆ ಎಂದು ನಟ, ರಾಜಕಾರಣಿ ಕಮಲ್‌ ಹಾಸನ್‌ ಹೇಳಿದ್ದಾರೆ.

ಚೆನ್ನೈ: ಮದ್ಯಪಾನ ನಿಷೇಧದಿಂದ ಒಳ್ಳೆಯದಾಗುವುದಕ್ಕಿಂತ ಹೆಚ್ಚಾಗಿ ಕೆಟ್ಟದ್ದೇ ನಡೆಯುತ್ತದೆ ಎಂದು ನಟ, ರಾಜಕಾರಣಿ ಕಮಲ್‌ ಹಾಸನ್‌ ಹೇಳಿದ್ದಾರೆ.

‘ತಮಿಳುನಾಡಿನಲ್ಲಿ ಪೋಸ್ಟ್‌ ಆಫೀಸ್‌ಗಳಿಗಿಂತ ಸರ್ಕಾರಿ ಮದ್ಯದ ಅಂಗಡಿಗಳೇ ಹೆಚ್ಚಾಗಿವೆ. ಈ ವಾತಾವರಣವನ್ನು ನೀವು ಬದಲಿಸುವಿರಾ’ ಎಂಬ ಮಾಧ್ಯಮದವರ ಪ್ರಶ್ನೆಗೆ ಹಾಸನ್‌ ಹೀಗೆ ಉತ್ತರಿಸಿದ್ದಾರೆ.

ಮದ್ಯ ನಿಷೇಧದ ಬಗ್ಗೆ ತಮಿಳು ನಿಯತಕಾಲಿಕೆ ‘ಆನಂದ ವಿಕಟನ್‌’ನಲ್ಲಿ ಅಂಕಣ ಬರೆದಿರುವ ಕಮಲ್‌ ಹಾಸನ್‌ ‘ಮದ್ಯದ ನಿಷೇಧ ಮಾಫಿಯಾಗಳಿಗೆ ಕಾರಣವಾಗುತ್ತದೆ. ಅದು ಇತಿಹಾಸದಲ್ಲಿ ಸಾಬೀತಾಗಿದೆ. ಮದ್ಯ ಸೇವನೆ ಕ್ರಮೇಣ ನಿಯಂತ್ರಣಕ್ಕೆ ಬರಬೇಕು, ಹಠಾತ್‌ ಮದ್ಯಸೇವೆನೆಯನ್ನು ನಿಲ್ಲಿಸುವುದನ್ನು ಮನುಷ್ಯನ ದೇಹ ಒಗ್ಗಿಕೊಳ್ಳುವುದಿಲ್ಲ. ರಾಜಕೀಯ ಪಕ್ಷಗಳು ಮಹಿಳೆಯರ ಮತಕ್ಕಾಗಿ ಮದ್ಯನಿಷೇಧವನ್ನು ಕಾರ್ಡ್‌ ಆಗಿ ಉಪಯೋಗಿಸುತ್ತವೆಯಷ್ಟೆ’ ಎಂದಿದ್ದಾರೆ.

ಇದೇ ವೇಳೆ ಇತ್ತೀಚೆಗಷ್ಟೇ ಮಕ್ಕಳ್‌ ನೀದಿ ಮಯ್ಯಂ (ಎಂಎನ್‌ಎಂ) ಎಂಬ ಹೊಸ ಪಕ್ಷವನ್ನು ಸ್ಥಾಪಿಸಿರುವ ಹಾಸನ್‌ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವುದೇ ನಮ್ಮ ಮೊದಲ ಗುರಿ ಎಂದು ಹೇಳಿದ್ದಾರೆ.