ಜಿಎಸ್'ಟಿ ಪ್ರಾದೇಶಿಕ ಚಿತ್ರರಂಗಕ್ಕೆ ಮರಣಶಾಸನವಾಗಲಿದೆ ಎಂದು ಕಮಲ್ ಹಾಸನ್ ಆತಂಕ ವ್ಯಕ್ತಪಡಿಸಿದ್ದು, ಇದು ಜಾರಿಯಾಗಿದ್ದೇ ಆದಲ್ಲಿ ತಾವು ಚಿತ್ರರಂಗ ಬಿಡಬೇಕಾದೀತು. ಸರ್ಕಾರದ ವರ್ತನೆ ಈಸ್ಟ್‌ ಇಂಡಿಯಾ ಕಂಪನಿ ರೀತಿ ಇದೆ ಎಂದು ಎಚ್ಚರಿಸಿದ್ದಾರೆ.
ಚೆನ್ನೈ: ಜು.1ರಿಂದ ಜಾರಿಗೆ ಜಿಎಸ್ಟಿ ಕಾಯ್ದೆಯಲ್ಲಿ ಸಿನಿಮಾ ರಂಗದ ಮೇಲೆ ಹೇರಿರುವ ಶೇ.28 ತೆರಿಗೆಯನ್ನು ಖ್ಯಾತ ನಟ ಕಮಲ ಹಾಸನ್ ವಿರೋಧಿಸಿದ್ದಾರೆ.
ಇದು ಪ್ರಾದೇಶಿಕ ಚಿತ್ರರಂಗಕ್ಕೆ ಮರಣಶಾಸನವಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದು, ಇದು ಜಾರಿಯಾಗಿದ್ದೇ ಆದಲ್ಲಿ ತಾವು ಚಿತ್ರರಂಗ ಬಿಡಬೇಕಾದೀತು. ಸರ್ಕಾರದ ವರ್ತನೆ ಈಸ್ಟ್ ಇಂಡಿಯಾ ಕಂಪನಿ ರೀತಿ ಇದೆ ಎಂದು ಎಚ್ಚರಿಸಿದ್ದಾರೆ.
ಹೀಗಾಗಿ ಚಿತ್ರರಂಗದ ಮೇಲಿನ ತೆರಿಗೆಯನ್ನು ಶೇ.5ರಿಂದ 18ರವರೆಗೆ ಮಾತ್ರ ನಿಗದಿಗೊಳಿಸಬೇಕು. ‘ಪ್ರಾದೇಶಿಕ ಚಲನಚಿತ್ರಗಳು ದೇಶದ ಚಲನಚಿತ್ರಗಳ ಆಧಾರ ಸ್ತಂಭ. ಹೀಗಿರುವಾಗ ಚಿತ್ರರಂಗಕ್ಕೆ ಇಷ್ಟು ತೆರಿಗೆ ಸರಿಯಲ್ಲ ಎಂದರು.
ಈವರೆಗೆ ರಾಜ್ಯಗಳ ವ್ಯಾಪ್ತಿಗೆ ಮನರಂಜನಾ ತೆರಿಗೆ ಬರುತ್ತಿತ್ತು. ಹೀಗಾಗಿ ಕರ್ನಾಟಕ ಸೇರಿ ಅನೇಕ ರಾಜ್ಯಗಳು ತಮ್ಮತಮ್ಮ ವ್ಯಾಪ್ತಿಯ ಪ್ರಾದೇ ಶಿಕ ಭಾಷಾ ಚಿತ್ರಗಳಿಗೆ ತೆರಿಗೆ ವಿನಾಯಿತಿ ನೀಡುತ್ತಿದ್ದವು. ಈಗ ಜಿಎಸ್ಟಿ ಕೇಂದ್ರೀಯ ತೆರಿಗೆ ಆಗಿರುವ ಕಾರಣ ವಿನಾಯಿತಿ ನಿಂತು ಹೋಗುವ ಭೀತಿ ಎದುರಾಗಿದೆ.
