ತಮಿಳುನಾಡಿನ ಆಡಳಿತ ಪಕ್ಷ ವಿರುದ್ಧ ಗುಡುಗಿರುವ ಹಿರಿಯ ನಟ ಕಮಲ್ ಹಾಸನ್ ಇಂದು ಮುಖ್ಯಮಂತ್ರಿ ಪಳನಿಸ್ವಾಮಿ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಭ್ರಷ್ಟಾಚಾರದಿಂದ ಸ್ವಾತಂತ್ರ್ಯ ಪಡೆಯಲು ಹೋರಾಟದ ಅಗತ್ಯವಿದೆಯೆಂದಿರುವ ಕಮಲ್ ಹಾಸನ್, ನಿರ್ಭೀತರಾಗಿ ಹೋರಾಡಲು ಜನರಿಗೆ ಕರೆ ನೀಡಿದ್ದಾರೆ.

ಚೆನ್ನೈ: ತಮಿಳುನಾಡಿನ ಆಡಳಿತ ಪಕ್ಷ ವಿರುದ್ಧ ಗುಡುಗಿರುವ ಹಿರಿಯ ನಟ ಕಮಲ್ ಹಾಸನ್ ಇಂದು ಮುಖ್ಯಮಂತ್ರಿ ಪಳನಿಸ್ವಾಮಿ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಭ್ರಷ್ಟಾಚಾರದಿಂದ ಸ್ವಾತಂತ್ರ್ಯ ಪಡೆಯಲು ಹೋರಾಟದ ಻ಗತ್ಯವಿದೆಯೆಂದಿರುವ ಕಮಲ್ ಹಾಸನ್, ನಿರ್ಭೀತರಾಗಿ ಹೋರಾಡಲು ಜನರಿಗೆ ಕರೆ ನೀಡಿದ್ದಾರೆ.

ಒಂದು ರಾಜ್ಯದಲ್ಲಿ ನಡೆಯುವ ದುರಂತ ಹಾಗೂ ಭ್ರಷ್ಟಾಚಾರಕ್ಕೆ ಮುಖ್ಯಮಂತ್ರಿಯ ರಾಜೀನಾಮೆಗೆ ಆಗ್ರಹ ಕೇಳಿ ಬರುತ್ತದೆ, ಆದರೆ ತಮಿಳುನಾಡಿನಮಲ್ಲಿ ಯಾವ ರಾಜಕೀಯ ಪಕ್ಷವು ಯಾಕೆ ಧ್ವನಿ ಎತ್ತಲ್ಲವೆಂದು ಯಾರ ಹೆಸರನ್ನು ಉಲ್ಲೇಖಿಸದೇ ಸರಣಿ ಟ್ವೀಟ್’ಗಳ ಮೂಲಕ ಪ್ರಶ್ನಿಸಿದ್ದಾರೆ.

ಭ್ರಷ್ಟಾಚಾರದಿಂದ ಸ್ವಾತಂತ್ರ್ಯ ಸಿಗುವವರೆಗೂ ನಾವು ಗುಲಾಮರಾಗಿರುತ್ತೇವೆ ಎಂದು ಕಮಲ್ ಹೇಳಿದ್ದಾರೆ.

ಆಡಳಿತ ಪಕ್ಷದ ವಿರುದ್ಧ ಭ್ರಷ್ಟಾಚಾರದ ಟೀಕೆ ಮಾಡಿರುವುದಕ್ಕೆ ಪ್ರತಿಕ್ರಿಯಿಸಿರುವ ಪಳಸನಿಸ್ವಾಮಿ ಹಾಗೂ ಸಚಿವರು, ಸೋಶಿಯಲ್ ಮೀಡಿಯಾದಲ್ಲಿ ಮಾಡಿರುವ ಆರೋಪಗಳಿಗೆ ಆಧಾರ ಒದಗಿಸುವಂತೆ ಕಮಲ್ ಹಾಸನ್’ಗೆ ಸವಾಲೆಸೆದಿದ್ದಾರೆ.

ಸರ್ಕಾರದಿಂದ ಉತ್ತರ ಬೇಕಾದರೆ ಕಮಲ್ ಹಾಸನ್ ರಾಜಕೀಯ ಸೇರಲಿ ಎಂದು ಪಳನಿಸ್ವಾಮಿ ಹೇಳಿದರೆ, ಕಮಲ್ ಹಾಸನ್ ಸಮಾಜಕ್ಕೆ ಕೊಟ್ಟ ಕೊಡುಗೆ ಏನು ಎಂದು ಸಚಿವರು ಪ್ರಶ್ನಿಸಿದ್ದಾರೆ.