ಕಮಲ್ ಹಾಸನ್ ಪುತ್ರಿ ಅಕ್ಷರ ಹಾಸನ್ ಈ ದಿನಗಳಲ್ಲಿ ತನ್ನ ಮುಂದಿನ ಸಿನಿಮಾ 'ವಿವೇಗನ್' ಸಿನಿಮಾದ ಶೂಟಿಂಗ್'ನಲ್ಲಿ ಬ್ಯೂಸಿಯಾಗಿದ್ದಾರೆ. ಆದರೆ ಇದರ ನಡುವೆಯೇ ಅವರು ಅಚಾನಕ್ಕಾಗಿ ಮತ್ತೊಂದು ವಿಚಾರವಾಗಿ ಸುದ್ದಿಯಾಗಿದ್ದಾರೆ. ವಾಸ್ತವವಾಗಿ ಕೆಲ ದಿನಗಳಿಂದ ಅಕ್ಷರ ಮತಾಂತರಗೊಂಡಿದ್ದಾರೆ ಎಂಬ ಮಾತು ಬಹಳಷ್ಟು ಸದ್ದು ಮಾಡುತ್ತಿದೆ. ಈ ವಿಚಾರವಾಗಿ ಯಾರು ಏನು ಮಾತನಾಡಿದ್ದಾರೋ ತಿಳಿಯದು ಆದರೆ ಅಕ್ಷರ ಅವರ ತಂದೆ ಹಾಗೂ ದಕ್ಷಿಣ ಭಾರತದ ಕಮಲ್ ಹಾಸನ್ ಚಿಂತೆಯಲ್ಲಿದ್ದಾರೆ. ಹೀಗಾಗಿ ಮನೆಯಲ್ಲಿ ಕುಳ್ಳಿರಿಸಿ ಕೇಳಬೇಕಾದ ಪ್ರಶ್ನೆಯನ್ನು ಸಾರ್ವಜನಿಕವಾಗಿಯೇ ಟ್ವಿಟರ್'ನಲ್ಲಿ ಇದಕ್ಕೆ ಸಂಬಂಧಿಸಿದ ವಿಚಾರವನ್ನು ಕೇಳಿದ್ದಾರೆ.

ಚೆನ್ನೈ(ಜು.29): ಕಮಲ್ ಹಾಸನ್ ಪುತ್ರಿ ಅಕ್ಷರ ಹಾಸನ್ ಈ ದಿನಗಳಲ್ಲಿ ತನ್ನ ಮುಂದಿನ ಸಿನಿಮಾ 'ವಿವೇಗನ್' ಸಿನಿಮಾದ ಶೂಟಿಂಗ್'ನಲ್ಲಿ ಬ್ಯೂಸಿಯಾಗಿದ್ದಾರೆ. ಆದರೆ ಇದರ ನಡುವೆಯೇ ಅವರು ಅಚಾನಕ್ಕಾಗಿ ಮತ್ತೊಂದು ವಿಚಾರವಾಗಿ ಸುದ್ದಿಯಾಗಿದ್ದಾರೆ. ವಾಸ್ತವವಾಗಿ ಕೆಲ ದಿನಗಳಿಂದ ಅಕ್ಷರ ಮತಾಂತರಗೊಂಡಿದ್ದಾರೆ ಎಂಬ ಮಾತು ಬಹಳಷ್ಟು ಸದ್ದು ಮಾಡುತ್ತಿದೆ. ಈ ವಿಚಾರವಾಗಿ ಯಾರು ಏನು ಮಾತನಾಡಿದ್ದಾರೋ ತಿಳಿಯದು ಆದರೆ ಅಕ್ಷರ ಅವರ ತಂದೆ ಹಾಗೂ ದಕ್ಷಿಣ ಭಾರತದ ಕಮಲ್ ಹಾಸನ್ ಚಿಂತೆಯಲ್ಲಿದ್ದಾರೆ. ಹೀಗಾಗಿ ಮನೆಯಲ್ಲಿ ಕುಳ್ಳಿರಿಸಿ ಕೇಳಬೇಕಾದ ಪ್ರಶ್ನೆಯನ್ನು ಸಾರ್ವಜನಿಕವಾಗಿಯೇ ಟ್ವಿಟರ್'ನಲ್ಲಿ ಇದಕ್ಕೆ ಸಂಬಂಧಿಸಿದ ವಿಚಾರವನ್ನು ಕೇಳಿದ್ದಾರೆ.

ಚಿಂತೆ ಇದ್ದರೂ ತಂದೆ ತನ್ನ ಮಗಳಿಗೆ ಸಾಥ್ ನೀಡಿದ್ದಾರೆ. ಟ್ವಿಟರ್'ನಲ್ಲಿ ಈ ಕುರಿತಾಗಿ ಪ್ರಶ್ನಿಸಿರುವ ಕಮಲ್ ಹಾಸನ್ 'ಅಕ್ಷೂ ನೀನು ನಿನ್ನ ಧರ್ಮವನ್ನು ಬದಲಾಯಿಸಿಕೊಂಡಿದ್ದೀಯಾ? ನೀನು ಹೀಗೆ ಮಾಡಿದ್ದರೂ ನನ್ನ ಪ್ರೀತಿ ನಿನ್ನ ಮೇಲಿದೆ. ಧರ್ಮವನ್ನು ಪ್ರೀತಿಸಲು ಯಾವುದೇ ಷರತ್ತುಗಳಿಲ್ಲ. ಜೀವನವನ್ನು ಆನಂದಿಸು. ನಿನ್ನು ಯಾವತ್ತೂ ಪ್ರೀತಿಸುವ ನಿನ್ನ ತಂದೆ' ಎಂದಿದ್ದಾರೆ.

Scroll to load tweet…

ತಂದೆಯ ಈ ಪ್ರಶ್ನೆಗೆ ಪುತ್ರಿ ಅಕ್ಷರಾ ಕೂಡಾ ಸ್ಪಷ್ಟನೆ ನೀಡಿದ್ದು, ಉತ್ತರವಾಗಿ 'ಹಾಯ್ ಅಪ್ಪಾ... ಇಲ್ಲ ನಾನು ಈಗಲೂ ನಾಸ್ತಿಕಳು. ಆದರೆ ನಾನು ಬೌದ್ಧ ಧರ್ಮದ ಅನುಸಾರ ಜೀವನ ಸಾಗಿಸುವುದರಲ್ಲಿ ಮತ್ತು ಸತ್ಯದ ಹಾದಿಯಲ್ಲಿ ಸಾಗುವುದರ ಮೇಲೆ ನಂಬಿಕೆ ಇಟ್ಟಿದ್ದೇನೆ' ಎಂದಿದ್ದಾರೆ

Scroll to load tweet…