ತಮಿಳು ಬಿಗ್’ಬಾಸ್ ರಿಯಾಲಿಟಿ ಶೋನಲ್ಲಿ ಅವಹೇಳನಕಾರಿಯಾಗಿ ಕಾಮೆಂಟ್ ಮಾಡಿದ್ದಕ್ಕಾಗಿ ನಟ ಕಮಲ್ ಹಾಸನ್, ಕೋರಿಯೋಗ್ರಾಫರ್ ಗಾಯತ್ರಿ ರಘುರಾಮ್ ಮತ್ತು ಮೂವರಿಗೆ ಸಂಘಟನೆಯೊಂದು ಮಾನನಷ್ಟ ಮೊಕದ್ದಮೆ ಹಾಕಿ, ರೂ.100 ಕೋಟಿ ನೀಡಬೇಕೆಂದು ನೋಟಿಸ್ ನೀಡಿದೆ.

ಚೆನ್ನೈ (ಜು.31): ತಮಿಳು ಬಿಗ್’ಬಾಸ್ ರಿಯಾಲಿಟಿ ಶೋನಲ್ಲಿ ಅವಹೇಳನಕಾರಿಯಾಗಿ ಕಾಮೆಂಟ್ ಮಾಡಿದ್ದಕ್ಕಾಗಿ ನಟ ಕಮಲ್ ಹಾಸನ್, ಕೋರಿಯೋಗ್ರಾಫರ್ ಗಾಯತ್ರಿ ರಘುರಾಮ್ ಮತ್ತು ಮೂವರಿಗೆ ಸಂಘಟನೆಯೊಂದು ಮಾನನಷ್ಟ ಮೊಕದ್ದಮೆ ಹಾಕಿ, ರೂ.100 ಕೋಟಿ ನೀಡಬೇಕೆಂದು ನೋಟಿಸ್ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಘುರಾಮ್ ತನ್ನ ಸಹ ಸ್ಪರ್ಧಿಗೆ ಕೊಳಗೇರಿ ನಿವಾಸಿ ಎನ್ನುವ ಪದವನ್ನು ಬಳಸುತ್ತಾರೆ. ಇದು ಹಿಂದುಳಿದ ವರ್ಗದವರ ಭಾವನೆಗಳಿಗೆ ನೋವುಂಟು ಮಾಡಿದೆ. ಕಮಲ್ ಹಾಸನ್ ಶೋ ಹೋಸ್ಟ್ ಮಾಡಿದವರು. ರಘುರಾಮ್ ಈ ರೀತಿ ಪದ ಬಳಕೆ ಮಾಡಿದಾಗ ಅದನ್ನು ಖಂಡಿಸಬೇಕಿತ್ತು. ಆದರೆ ಅವರು ಇದರ ಬಗ್ಗೆ ವಿಷಾದವನ್ನಾಗಲಿ, ಪ್ರತಿಕ್ರಿಯೆಯನ್ನಾಗಲಿ ನೀಡದೇ ಸುಮ್ಮನಿದ್ದರು ಎಂದು ಸಂಘಟನೆ ಆರೋಪಿಸಿದೆ. 7 ದಿನಗಳೊಳಗಾಗಿ ಇವರು ಬೇಷರತ್ ಕ್ಷಮೆಯಾಚಿಸಬೇಕು ಇಲ್ಲದಿದ್ದರೆ ರೂ.100 ಕೋಟಿ ಪರಿಹಾರ ನೀಡಬೇಕು ಎಂದು ಸಂಘಟನೆ ಆಗ್ರಹಿಸಿದೆ.

ಕಮಲ್ ಹಾಸನ್ ಹಾಗೂ ಎಐಡಿಎಂಕೆ ನಡುವೆ ಮಾತುನ ಸಮರ ನಡೆದು ಅವರು ರಾಜಕೀಯ ಸೇರುವ ವಿಚಾರವನ್ನು ಕೈ ಬಿಟ್ಟಾಗ ಈ ನೋಟಿಸ್ ಬಂದಿದೆ.