ಖಾದರ್ ಬಂದ ದೇವಸ್ಥಾನಕ್ಕೆ ಮತ್ತೊಂದು ಬ್ರಹ್ಮ ಕಲಶ ಆಗಲೇಬೇಕು: ಪ್ರಭಾಕರ್ ಭಟ್

Kalladka Prabhakar Bhat Slams Khadar
Highlights

ಖಾದರ್ ಎಂಬ ಕೊಳಕು ಮನುಷ್ಯನಿಗೆ ಇಲ್ಲಿದ್ದ ಭೂತದ ನೇಮದ ಬೂಳ್ಯ ಕೊಡ್ತಾರೆ.  ಮಂಡೆ ಶುದ್ದವಿಲ್ಲದ ದೈವಕ್ಕೆ ಕಟ್ಟುವ ವ್ಯಕ್ತಿ ಇಂಥಹ ಖಾದರ್ ಗೆ ಪ್ರಸಾದ ಕೊಡ್ತಾನೆ.  ಯಾವ ದೇವಸ್ಥಾನಕ್ಕೆ ಈ ಖಾದರ್ ಬಂದಿದ್ದಾನೋ ಅದಕ್ಕೆ ಮತ್ತೊಂದು ಬ್ರಹ್ಮಕಲಶ ಆಗಲೇಬೇಕು ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ. 

ಮಂಗಳೂರು (ಏ. 04):  ಖಾದರ್ ಎಂಬ ಕೊಳಕು ಮನುಷ್ಯನಿಗೆ ಇಲ್ಲಿದ್ದ ಭೂತದ ನೇಮದ ಬೂಳ್ಯ ಕೊಡ್ತಾರೆ.  ಮಂಡೆ ಶುದ್ದವಿಲ್ಲದ ದೈವಕ್ಕೆ ಕಟ್ಟುವ ವ್ಯಕ್ತಿ ಇಂಥಹ ಖಾದರ್ ಗೆ ಪ್ರಸಾದ ಕೊಡ್ತಾನೆ.  ಯಾವ ದೇವಸ್ಥಾನಕ್ಕೆ ಈ ಖಾದರ್ ಬಂದಿದ್ದಾನೋ ಅದಕ್ಕೆ ಮತ್ತೊಂದು ಬ್ರಹ್ಮಕಲಶ ಆಗಲೇಬೇಕು ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ. 

ಗೋ ಮಾಂಸ ಭಕ್ಷಕರನ್ನ ದೇವಸ್ಥಾನಕ್ಕೆ ಕರೆ ತರ್ತೀರಾ, ಅವನು ರಸ್ತೆ ಮಾಡಿದ ಅಂತೀರಾ? ಅವನೇನು ಅಪ್ಪನ ಹಣದಿಂದ ಮಾಡಿದ್ದಾ? ಸರ್ಕಾರಕ್ಕೆ ನಾವು ಕೊಟ್ಟ ತೆರಿಗೆಯಿಂದ ಅವರು ರಸ್ತೆ ಮಾಡಿದ್ದು.  ಆದರೆ ಅದೇ ಕಾರಣಕ್ಕೆ ಅವನನ್ನು ದೇವಸ್ಥಾನದ ಒಳಗೆ ಕರೆದುಕೊಂಡು ಹೋಗ್ತೀರಲ್ವಾ? ಅನೇಕ ಜನರಿಗೆ ದೇವಸ್ಥಾನಕ್ಕೆ ಪ್ರವೇಶವಿಲ್ಲ, ಆದರೆ ಖಾದರ್’ನಂಥವರಿಗೆ ಪ್ರವೇಶ ಕೊಡ್ತೀರಲ್ವಾ ನೀವು? ನನ್ನ ಪ್ರಕಾರ ಅಂಥವರಿಗೆ ನಿಷೇಧ ಮಾಡುವ ಅವಶ್ಯಕತೆ ಇದೆ ಅಂತ ಅನಿಸುತ್ತೆ ಎಂದು ಪ್ರಭಾಕರ್ ಭಟ್ ಹೇಳಿದ್ದಾರೆ. 
 

loader