ಸುಮ್ಮನೆ ‌ಮಾತನಾಡೋದಲ್ಲ, ಮೊದಲು ಸುಳ್ಳು ಹೇಳುವವರು ರಾಜೀನಾಮೆ ಕೊಟ್ಟು ಹೋಗಲಿ ಎಂದು ಡಿವಿಎಸ್ ವಿರುದ್ಧ ಕಾಗೋಡು ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು(ಜ.23): ಕೇಂದ್ರ ಸಚಿವ ಸದಾನಂದಗೌಡ ಹೇಳಿಕೆಗೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಗರಂ ಆಗಿದ್ದಾರೆ. 

ಹಣ ಬಿಡುಗಡೆ ಆಗಿದೆ ಅನ್ನೋದಕ್ಕಿಂತ ದೊಡ್ಡ ಸುಳ್ಳು ಮತ್ತೊಂದಿಲ್ಲ. ಹಣ ಬಿಡುಗಡೆ ಮಾಡಿಸಲಾಗದ ಇವರು ರಾಜೀನಾಮೆ ಕೊಟ್ಟು ಹೋಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸುಮ್ಮನೆ ‌ಮಾತನಾಡೋದಲ್ಲ, ಮೊದಲು ಸುಳ್ಳು ಹೇಳುವವರು ರಾಜೀನಾಮೆ ಕೊಟ್ಟು ಹೋಗಲಿ ಎಂದು ಡಿವಿಎಸ್ ವಿರುದ್ಧ ಕಾಗೋಡು ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರ ಸಚಿವ ಸದಾನಂದ ಗೌಡರಿಗೆ ನಾಚಿಕೆ ಆಗಲ್ವಾ? ಎಂದು ಕಾಗೋಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.