ಬೆಂಗಳೂರು, (ಸೆ.16): ಸುಮಾರು 13 ದಿನಗಳ ಯುರೋಪ್ ಪ್ರವಾಸ ಮುಗಿಸಿಕೊಂಡು ಬಂದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್  ಹಾಸ್ಯ ಚಟಾಕೆ ಮೂಲಕ ಕಾಲೆಳೆದಿದ್ದಾರೆ.

 ವಿದೇಶ ಪ್ರವಾಸದಿಂದ ಬಂದ ಸಿದ್ದರಾಮಯ್ಯ ಅವರನ್ನ ಇಂದು ಕೆ.ಸಿ. ವೇಣುಗೋಪಾಲ್ ಸೇರಿದಂತೆ ಹಲವು ಕಾಂಗ್ರೆಸ್ ಹಿರಿಯ ನಾಯಕರು ಭೇಟಿ ಮಾಡಿ, ಪ್ರಸಕ್ತ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ ನಡೆಸಿದರು. ಅದಕ್ಕೂ ಮೊದಲು ಸಿದ್ದರಾಮಯ್ಯ ಹಾಗೂ ವೇಣುಗೋಪಾಲ್ ನಡುವೆ ಕೊಂಚ ಸ್ವಾರಸ್ಯಕ ಚರ್ಚೆ ನಡೆಯಿತು. ಇದಕ್ಕೆ ಅಲ್ಲಿ ಇದ್ದ ನಾಯಕರು ಗುಸು ಗುಸು ನಕ್ಕಿದ್ದಾರೆ.

ಹಾಗಾದ್ರೆ ಸಿದ್ದು-ವೇಣುಗೋಪಾಲ್ ನಡುವೆ ನಡೆದ ಸ್ವಾರಸ್ಯಕ ಚರ್ಚೆ ಏನು?, ಸಿದ್ದು ಮಾತಿಗೆ ನಾಯಕರು ನಕ್ಕಿದ್ದೇಕೆ? ಅಂತಹದ್ದೇನು ನಡೆಯಿತು ಅಂತೀರಾ. ಮುಂದೆ ಓದಿ.

"

ತೂಕ ಕಡಿಮೆ ಮಾಡಿಕೊಂಡಿದ್ದೀರಿ. ಪ್ರವಾಸದ ಬಳಿಕ ತುಂಬಾ ಲವಲವಿಕೆಯಿಂದ ಇದ್ದೀರಿ ಎಂದು ವೇಣುಗೋಪಾಲ್ ಸಿದ್ದರಾಮಯ್ಯ ಅವರಿಗೆ ವಿಚಾರಿಸಿದರು.

ಬಳಿಕ ಪ್ರತಿಕ್ರಿಯಿಸಿದ ಸಿದ್ದು,  ಹಾಗೇನಿಲ್ಲ ಇನ್ನೂ 1ಕೆ.ಜಿ ತೂಕ ಹೆಚ್ಚಾಗಿದೆ ಅನ್ಸುತ್ತೆ ಎಂದು ನಗು-ನಗುತ್ತಲೇ ವೇಣುಗೋಪಾಲ್ ಗ್ ಟಾಂಗ್ ಕೊಟ್ಟರು. ಈ ಮಾತಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಈಶ್ವರ್ ಖಂಡ್ರೆ, ವೇಣುಗೋಪಾಲ್ ನಕ್ಕರು.