ಮಧ್ಯಪ್ರದೇಶದ ವಿದಿಶಾದಲ್ಲಿ ಯುವಕನೊಬ್ಬ ಮದುವೆಯಾಗಲು ನೋಡಲು ಹೋದ ಹುಡುಗಿಯೊಂದಿಗೇ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ. ಆದರೆ ಹುಡುಗಿಯ ವಯಸ್ಸಿನ್ನೂ 14 ವರ್ಷ ಎಂದು ತಿಳಿದು ಬಂದಿದೆ. ಈ ಪ್ರಕರಣದಿಂದ ಅಪ್ರಾಪ್ತ ಬಾಲಕಿಗೆ ಮದುವೆ ಮಾಡ ಹೊರಟ ಕುಟುಂಬಸ್ಥರೂ ಸಂಕಷ್ಟಕ್ಕೀಡಾಗಿದ್ದಾರೆ. ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಯನ್ವಯ ಹುಡುಗಿಯನ್ನು ನೋಡಲು ಬಂದ ವೇಳೆ ಇಬ್ಬರೂ ಒಬ್ಬನ್ನೊಬ್ಬರು ಇಷ್ಟಪಟ್ಟಿದ್ದರು. ಆದರೆ ಕುಟುಂಬಸ್ಥರಿಗೆ ಈ ಸಂಬಂಧದ ಕುರಿತಾಗಿ ಅಸಮಾಧಾನವಿತ್ತು, ಹೀಗಾಗಿ ಮದುವೆಗೆ ಹಿರಿಯರು ಒಪ್ಪಿಗೆ ಸೂಚಿಸಿರಲಿಲ್ಲ ಎಂದು ತಿಳಿದು ಬಂದಿದೆ.

ಮಧ್ಯಪ್ರದೇಶ(ಜೂ.02): ಮಧ್ಯಪ್ರದೇಶದ ವಿದಿಶಾದಲ್ಲಿ ಯುವಕನೊಬ್ಬ ಮದುವೆಯಾಗಲು ನೋಡಲು ಹೋದ ಹುಡುಗಿಯೊಂದಿಗೇ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ. ಆದರೆ ಹುಡುಗಿಯ ವಯಸ್ಸಿನ್ನೂ 14 ವರ್ಷ ಎಂದು ತಿಳಿದು ಬಂದಿದೆ. ಈ ಪ್ರಕರಣದಿಂದ ಅಪ್ರಾಪ್ತ ಬಾಲಕಿಗೆ ಮದುವೆ ಮಾಡ ಹೊರಟ ಕುಟುಂಬಸ್ಥರೂ ಸಂಕಷ್ಟಕ್ಕೀಡಾಗಿದ್ದಾರೆ. ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಯನ್ವಯ ಹುಡುಗಿಯನ್ನು ನೋಡಲು ಬಂದ ವೇಳೆ ಇಬ್ಬರೂ ಒಬ್ಬನ್ನೊಬ್ಬರು ಇಷ್ಟಪಟ್ಟಿದ್ದರು. ಆದರೆ ಕುಟುಂಬಸ್ಥರಿಗೆ ಈ ಸಂಬಂಧದ ಕುರಿತಾಗಿ ಅಸಮಾಧಾನವಿತ್ತು, ಹೀಗಾಗಿ ಮದುವೆಗೆ ಹಿರಿಯರು ಒಪ್ಪಿಗೆ ಸೂಚಿಸಿರಲಿಲ್ಲ ಎಂದು ತಿಳಿದು ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಬ್ಬರಿಗೂ ಮೊದಲ ನೋಟದಲ್ಲೇ ಪರಸ್ಪರ ಪ್ರೀತಿ ಹುಟ್ಟಿಕೊಂಡಿತ್ತು. ಹೀಗಿರುವಾಗ ತನ್ನ ಅತ್ತಿಗೆಯೊಂದಿಗೆ ಹುಡುಗಿ ಒಂದು ದಿನ ಮಾರುಕಟ್ಟೆಗೆ ಹೋಗಿದ್ದ ವೇಳೆ ಮತ್ತೆ ಯುವಕನೊಂದಿಗೆ ಭೇಟಿಯಾಗಿದೆ. ಈ ವೇಳೆ ಸಂದರ್ಭ ನೋಡಿ ಇಬ್ಬರೂ ಪರಾರಿಯಾಗಿದ್ದಾರೆ. ವಿಚಾರ ತಿಳಿದ ಮನೆಯವರು ಬೆಚ್ಚಿ ಬಿದ್ದಿದ್ದಲ್ಲದೇ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸಾಕಷ್ಟು ಹುಡುಕಾಟ ನಡೆಸಿದರೂ ಪರಾರಿಯಾದ ಪ್ರೇಮಿಗಳು ಮಾತ್ರ ಸಿಗಲೇ ಇಲ್ಲ. ಅಷ್ಟರಲ್ಲೇ ಹುಡುಗಿಯ ಅಣ್ಣನ ಸ್ನೇಹಿತನೊಬ್ಬ 'ನಿನ್ನ ತಂಗಿಯನ್ನು ಓರ್ವ ಯುವಕನೊಂದಿಗೆ ನೋಡಿರಿರುವುದಾಗಿ ತಿಳಿಸಿದ್ದಲ್ಲದೇ ತಾನವರನ್ನು ನೋಡಿದ ಸ್ಥಳದ ವಿವರಣೆಯನ್ನೂ ನೀಡಿದ್ದಾನೆ. ಆತ ನೀಡಿದ ವಿವರಣೆಯೊಂದಿಗೆ ಸ್ಥಳಕ್ಕೆ ತಲುಪಿದಾಗ ಇಬ್ಬರು ಆ ಸ್ಥಳದಲ್ಲಿ ಪತ್ತೆಯಾಗಿದ್ದಾರೆ. ಅಪ್ರಾಪ್ತ ಬಾಲಕಿಯನ್ನು ಅಪಹರಿಸಿರುವ ಪ್ರಕರಣದಡಿ ಪೊಲೀಸರು ಯುವಕನನ್ನುಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ವಿಚಾರಣೆ ಬಳಿಕ ಆತನನ್ನು ಜೈಲಿಗಟ್ಟಿದ್ದಾರೆ. ಆದರೆ ಬಾಲಕಿ ಮಾತ್ರ ತಾವಿಬ್ಬರೂ ಪರಸ್ಪರ ಪ್ರೀತಿಸುತ್ತಿರುವುದಾಗಿ ವಾದಿಸುತ್ತಿದ್ದಾಳೆ.

ಕೃಪೆ: NDTv