ಕನ್ನಡಿಗ ನ್ಯಾ.ಲೋಕುರ್‌ ಫಿಜಿ ಸುಪ್ರೀಂ ನ್ಯಾಯಪೀಠಕ್ಕೆ ಆಯ್ಕೆ| ಮೇಲ್ಮನವಿ ಪೀಠಕ್ಕೆ ನೇಮಕ

ನವದೆಹಲಿ[ಮೇ.17]: ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಾಧೀಶ, ಕನ್ನಡಿಗ ಮದನ್‌ ಬಿ. ಲೋಕುರ್‌ ಫಿಜಿ ದೇಶದ ಸುಪ್ರೀಂಕೋರ್ಟ್‌ನ ಮೇಲ್ಮನವಿ ಪೀಠದ ನ್ಯಾಯಾಧೀಶರಾಗಿ ನೇಮಕವಾಗಿದ್ದಾರೆ. ಭಾರತೀಯ ನ್ಯಾಯಾಧೀಶರಿಗೆ ಇಂಥ ಗೌರವ ಸಿಕ್ಕಿದ್ದು ಬಹುಶಃ ಇದೇ ಮೊದಲು ಎನ್ನಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನ್ಯಾ.ಲೋಕುರ್‌ ಅವರು ಹೊಸ ಹುದ್ದೆಯಲ್ಲಿ 3 ವರ್ಷ ಕಾರ್ಯನಿರ್ವಹಿಸಲಿದ್ದಾರೆ. ಸಿವಿಲ್‌ ಮತ್ತು ವಾಣಿಜ್ಯ ವಿವಾದ ಸಂಬಂಧ ಫಿಜಿ ಸುಪ್ರೀಂಕೋರ್ಟ್‌ ನೀಡುವ ಆದೇಶಗಳನ್ನು ಮೇಲ್ಮನವಿ ಪೀಠದಲ್ಲಿ ಪ್ರಶ್ನಿಸಬಹುದು. ಈ ಪೀಠದಲ್ಲಿ ಫಿಜಿ ಸುಪ್ರೀಂಕೋರ್ಟ್‌ನ ಜಡ್ಜ್‌ಗಳ ಜೊತೆಗೆ ಇತರೆ ಕೆಲವು ದೇಶಗಳ ಜಡ್ಜ್‌ಗಳಿಗೂ ಭಾಗಿಯಾಗಲು ಅವಕಾಶ ನೀಡಲಾಗುತ್ತದೆ. ಅದರಂತೆ ಇದೀಗ ನ್ಯಾ.ಲೋಕುರ್‌ಗೆ ಅವಕಾಶ ಕಲ್ಪಿಸಲಾಗಿದೆ. ಈ ಪೀಠ ವರ್ಷದಲ್ಲಿ ಮೂರು ಬಾರಿ ಮಾತ್ರ ತಲಾ 15 ದಿನಗಳಂತೆ ಕಾರ್ಯನಿರ್ವಹಿಸುತ್ತದೆ. ನ್ಯಾ.ಲೋಕುರ್‌ ಅವರು 2019ರ ಆ.15ರಿಂದ ಆ.30ರವರೆಗೆ ನಡೆಯಲಿರುವ ಕಲಾಪದಲ್ಲಿ ಭಾಗಿಯಾಗಲಿದ್ದಾರೆ.

ನ್ಯಾ.ಲೋಕುರ್‌ ಅವರು 2018ರ ಡಿ.31ರಂದು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತರಾಗಿದ್ದರು.