ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಜೆ.ಎಸ್.ಖೇಹರ್ ಅವರಿಗೆ ಪ್ರತಿಜ್ಞಾ ವಿಧಿ ಭೋದಿಸಿದರು.

ನವದೆಹಲಿ(ಜ.04): ಸುಪ್ರೀಂ ಕೋರ್ಟ್'ನ 44ನೇ ಮುಖ್ಯ ನ್ಯಾಯಾಧೀಶರಾಗಿ ಜೆ.ಎಸ್.ಖೇಹರ್ ಇಂದು ಪ್ರಮಾಣವಚನ ಸ್ವೀಕರಿಸಿದರು. ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಜೆ.ಎಸ್.ಖೇಹರ್ ಅವರಿಗೆ ಪ್ರತಿಜ್ಞಾ ವಿಧಿ ಭೋದಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜೆ.ಎಸ್.ಖೇಹರ್ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ಸಿಖ್ ಸಮುದಾಯದ ಮೊದಲಿಗರಾಗಿದ್ದಾರೆ. ಆದರೆ ಇವರ ಅವಧಿ ಕೇವಲ 7 ತಿಂಗಳು ಮಾತ್ರ ಇರುತ್ತದೆ. ಸುಪ್ರೀ ಕೋರ್ಟ್ ನ್ಯಾಯಾಧೀಶರಾಗುವ ಮೊದಲು ಕರ್ನಾಟಕ ಹೈಕೋರ್ಟ್'ನ ನ್ಯಾಯಾಧೀಶರಾಗಿದ್ದರು.