ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಬಳಿ ಹುಂಚದಕಟ್ಟೆಯವರಾದ ನ್ಯಾಯಮೂರ್ತಿ ಎಚ್.ಜಿ. ರಮೇಶ್ 1957ರ ಜನವರಿ 16ರಂದು ಜನಿಸಿದ್ದಾರೆ. 1982ರ ಜುಲೈ 16ರಂದು ವಕೀಲರಾಗಿ ನೋಂದಣಿಯಾದ ಅವರು, 1982ರಿಂದ ಹೈಕೋರ್ಟ್‌ನಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದ್ದರು.
ಬೆಂಗಳೂರು(ಅ.08): ಹೈಕೋರ್ಟ್ನ ಹಿರಿಯ ನ್ಯಾಯಮೂರ್ತಿ ಹುಂಚದಕಟ್ಟೆ ಗೋಪಾಲಯ್ಯ ರಮೇಶ್(ಎಚ್.ಜಿ.ರಮೇಶ್) ಅವರನ್ನು ಕರ್ನಾಟಕ ಹೈಕೋರ್ಟ್ನ ಹಂಗಾಮಿ ಮುಖ್ಯನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಿ ರಾಷ್ಟ್ರಪತಿ ರಾಮನಾಥ ಕೋವಿಂದ ಆದೇಶಿಸಿದ್ದಾರೆ.
ಪ್ರಸ್ತುತ ಮುಖ್ಯನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸುತ್ತಿರುವ ಎಸ್.ಕೆ. ಮುಖರ್ಜಿ ಅಕ್ಟೋಬರ್ ೯ ರಂದು ನಿವೃತ್ತರಾಗುತ್ತಿದ್ದು, ಅಕ್ಟೋಬರ್ ೧೦ರಿಂದ ಅನ್ವಯವಾಗುವಂತೆ ನ್ಯಾ.ರಮೇಶ್ ಅವರನ್ನು ನೇಮಕ ಮಾಡಿ ಆದೇಶ ಮಾಡಲಾಗಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಬಳಿ ಹುಂಚದಕಟ್ಟೆಯವರಾದ ನ್ಯಾಯಮೂರ್ತಿ ಎಚ್.ಜಿ. ರಮೇಶ್ 1957ರ ಜನವರಿ 16ರಂದು ಜನಿಸಿದ್ದಾರೆ. 1982ರ ಜುಲೈ 16ರಂದು ವಕೀಲರಾಗಿ ನೋಂದಣಿಯಾದ ಅವರು, 1982ರಿಂದ ಹೈಕೋರ್ಟ್ನಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದ್ದರು. 2003ರ ಮೇ 12ರಂದು ಹೈಕೋರ್ಟ್ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕವಾಗಿ 2004ರ ಸೆಪ್ಟಂಬರ್ 24ರಂದು ಖಾಯಂ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದರು. ಇದೀಗ ಹೈಕೋರ್ಟ್ನ ಹಂಗಾಮಿ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದಾರೆ. ಈ ಹಿಂದೆ ನ್ಯಾಯಮೂರ್ತಿ ಎಚ್.ಜಿ. ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದರು. ಆದರೆ, ಅಲ್ಲಿಗೆ ಹೋಗಲು ಅವರು ನಿರಾಕರಿಸಿದ್ದರು.
