ಜಗದ್ವಿಖ್ಯಾತ ಕಂಪನಿಯಾದ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯ ಪೌಡರ್ ಬಳಕೆಯಿಂದ ತನಗೆ ಅಂಡಾಶಯ ಕ್ಯಾನ್ಸರ್ ಕಾಣಿಸಿಕೊಂಡಿದೆ ಎಂಬ ಮಹಿಳೆಯೊಬ್ಬರ ವಾದವನ್ನು ಒಪ್ಪಿಕೊಂಡಿರುವ ಅಮೆರಿಕದ ಲಾಸ್ ಏಂಜಲೀಸ್'ನ ನ್ಯಾಯಾಲಯ, ಮಹಿಳೆಗೆ ಭರ್ಜರಿ 2680 ಕೋಟಿ ರು. (47.1 ಕೋಟಿ ಡಾಲರ್) ಪರಿಹಾರ ನೀಡುವಂತೆ ಕಂಪನಿಗೆ ಸೂಚಿಸಿದೆ.
ಲಾಸ್ ಏಂಜಲೀಸ್(ಆ.23): ಜಗದ್ವಿಖ್ಯಾತ ಕಂಪನಿಯಾದ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯ ಪೌಡರ್ ಬಳಕೆಯಿಂದ ತನಗೆ ಅಂಡಾಶಯ ಕ್ಯಾನ್ಸರ್ ಕಾಣಿಸಿಕೊಂಡಿದೆ ಎಂಬ ಮಹಿಳೆಯೊಬ್ಬರ ವಾದವನ್ನು ಒಪ್ಪಿಕೊಂಡಿರುವ ಅಮೆರಿಕದ ಲಾಸ್ ಏಂಜಲೀಸ್'ನ ನ್ಯಾಯಾಲಯ, ಮಹಿಳೆಗೆ ಭರ್ಜರಿ 2680 ಕೋಟಿ ರು. (47.1 ಕೋಟಿ ಡಾಲರ್) ಪರಿಹಾರ ನೀಡುವಂತೆ ಕಂಪನಿಗೆ ಸೂಚಿಸಿದೆ.
ಅಲ್ಲದೆ, ಮುಂದಿನ ದಿನಗಳಲ್ಲಿ ಕ್ಯಾನ್ಸರ್ ಹರಡುವ ಕುರಿತು ಎಚ್ಚರಿಕೆ ಸಂದೇಶವನ್ನು ಪೌಡರ್ ಡಬ್ಬದ ಮೇಲೆ ಉಲ್ಲೇಖಿಸುವಂತೆ ಜಾನ್ಸನ್ ಸಂಸ್ಥೆಗೆ ಎಚ್ಚರಿಕೆ ನೀಡಲಾಗಿದೆ.
ಜಾನ್ಸನ್ ಪೌಡರ್ ಡಬ್ಬದ ಮೇಲೆ ಕ್ಯಾನ್ಸರ್ ಹರಡುವ ಕುರಿತು ಎಚ್ಚರಿಕೆ ಸಂದೇಶ ಉಲ್ಲೇಖಿಸದ ಕಾರಣ 1950ರಿಂದ 2016ರವರೆಗೂ ತಾನು ಪೌಡರ್ ಹಚ್ಚಿಕೊಳ್ಳುತ್ತಿದ್ದೆ. ಆದರೆ, ಇದರಿಂದಾಗಿಯೇ 2007ರಲ್ಲಿ ತಾನು ಅಂಡಾಶಯ ಕ್ಯಾನ್ಸರ್'ಗೆ ಒಳಗಾಗಿರುವುದು ತಿಳಿದುಬಂದಿದೆ ಎಂದು ಕ್ಯಾಲಿಫೋರ್ನಿಯಾದ ಎವಾ ಎಚೆವೆರ್ರಿಯಾ ತಮ್ಮ ದೂರಿನಲ್ಲಿ ಆರೋಪಿಸಿದ್ದರು. ತಾನು ಅಂಡಾಶಯ ಕ್ಯಾನ್ಸರ್ನಿಂದ ಬಳಲುತ್ತಿದ್ದೇನೆ. ಆದರೆ, ಮುಂದಿನ ದಿನಗಳಲ್ಲಿ ಇತರೆ ಮಹಿಳೆಯರು ಈ ಮಾರಕ ರೋಗಕ್ಕೆ ತುತ್ತಾಗದಿರಲಿ ಎಂಬುದು ತಮ್ಮ ಕಳಕಳಿ ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಕಳೆದ ೩೦ ವರ್ಷಗಳಿಂದ ಇಂಥ ಘಟನೆಗಳು ಮರುಕಳಿಸುತ್ತಿದ್ದರೂ ಜಾನ್ಸನ್ ಮಾತ್ರ ಈ ಬಗ್ಗೆ ಎಚ್ಚೆತ್ತುಕೊಂಡು ಕ್ರಮ ಕೈಗೊಂಡಿರಲಿಲ್ಲ ಎಂದು ಸಂತ್ರಸ್ತೆ ಪರ ವಕೀಲ ಮಾರ್ಕ್ ರಾಬಿನ್ಸನ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು.
