ಪ್ರಧಾನಿಯವರ ಜಾತ್ಯಾತೀತ ಮೌಲ್ಯಗಳ ಬಗ್ಗೆ ತಮಗೆ ಸಂಪೂರ್ಣ ಮನವರಿಕೆಯಾಗಿದೆ ಎಂದು ಜಂಗ್ ಹೇಳಿದ್ದಾರೆ.

ನವದೆಹಲಿ(ಡಿ.24): ಪ್ರಧಾನಿ ನರೇಂದ್ರ ಮೋದಿಯವರು ಅಲ್ಪಸಂಖ್ಯಾತರನ್ನು ಜೊತೆಗೆ ಕರೆದೊಯ್ಯುವ ಬಯಕೆ ಹೊಂದಿರುವ ದಾರ್ಶನಿಕ ಮತ್ತು ಅಸಾಧಾರಣ ವ್ಯಕ್ತಿ ಎಂದು ದೆಹಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಇದೇವೇಳೆ ಅವರು ಆಪ್ ಸರ್ಕಾರದ ವಿರುದ್ಧ ಅಸಮಾಧಾನ ತೋರ್ಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆಪ್ ಸರ್ಕಾರ ದಿನ ನಿತ್ಯ ತಮ್ಮ ವಿರುದ್ಧ ಮಾಡುತ್ತಿದ್ದ ವಾಗ್ದಾಳಿಯಿಂದ ತಮಗೆ ಸಾಕಾಗಿ ಹೋಗಿತ್ತು ಮತ್ತು ಬೇಸರವಾಗಿತ್ತು. ಹೀಗಾಗಿ ಇದೂ ರಾಜಿನಾಮೆಗೆ ಒಂದು ಕಾರಣ ಎಂದು ಅವರ ಆಪ್ತ ಮೂಲಗಳು ತಿಳಿಸಿರುವುದಾಗಿ ‘ದ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ಪ್ರಧಾನಿಯವರ ಜಾತ್ಯಾತೀತ ಮೌಲ್ಯಗಳ ಬಗ್ಗೆ ತಮಗೆ ಸಂಪೂರ್ಣ ಮನವರಿಕೆಯಾಗಿದೆ ಎಂದು ಜಂಗ್ ಹೇಳಿದ್ದಾರೆ.