ಬಾಲಿವುಡ್ ನಟಿ ಜೂಹಿ ಚಾವ್ಲಾ ಸಚಿವ ಯು.ಟಿ ಖಾದರ್ ಅವರಿಗೆ ಕರೆ ಮಾಡಿ ಶ್ಲಾಘಿಸಿದ್ದಾರೆ. ದೇಶದಲ್ಲೇ ಮೊದಲ ಬಾರಿಗೆ ರೂಪಿಸಿರುವ ಟವರ್‌ ನೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಮಂಗಳೂರು: ರಾಜ್ಯದಲ್ಲಿ ಮೊಬೈಲ್‌ ಮತ್ತು ಇತರ ಟವರ್‌ ಅನುಷ್ಠಾನಕ್ಕೆ ದೇಶದಲ್ಲೇ ಮೊದಲ ಬಾರಿಗೆ ರೂಪಿಸಿರುವ ಟವರ್‌ ನೀತಿಗೆ ಹೆಸರಾಂತ ಬಾಲಿವುಡ್‌ ನಟಿ ಜೂಹಿ ಚಾವ್ಲಾ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜೂಹಿ ಅವರ ಆಪ್ತ ಸಹಾಯಕ ಮುನ್ಷಿ ಅವರು ಸಚಿವ ಖಾದರ್‌ ಅವರಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ದೇವಾಲಯ, ಶಾಲೆ, ಆಸ್ಪತ್ರೆಗಳೊಂದಿಗೆ ವಸತಿ ಪ್ರದೇಶಗಳನ್ನೂ ಈ ನೀತಿಯ ಅಡಿಯಲ್ಲಿ ಸೇರಿಸಿಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ. ಇದನ್ನು ಪರಿಶೀಲಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್‌ ಸುದ್ದಿಗಾರರಿಗೆ ತಿಳಿಸಿದರು.

ಟವರ್‌ ನೀತಿ ಅಧಿಸೂಚನೆ ಪ್ರಕಟವಾದ ಮೂರು ತಿಂಗಳೊಳಗೆ ಎಲ್ಲ ಟವರ್‌ಗಳು ಈ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಇಲ್ಲದಿದ್ದರೆ ಟವರ್‌ಗಳನ್ನೇ ರದ್ದುಗೊಳಿಸಲಾಗುವುದು ಎಂದು ಹೇಳಿದರು.