ವಿವಿಧ ರಾಜ್ಯಗಳ ಹೈಕೋರ್ಟ್ ನ್ಯಾಯಾಧೀಶರ ನೇಮಕಾತಿ ವಿಳಂಬವಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಮುಖ್ಯ ನ್ಯಾ.ಟಿ.ಎಸ್. ಠಾಕೂರ್ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನವದೆಹಲಿ (ನ.26): ವಿವಿಧ ರಾಜ್ಯಗಳ ಹೈಕೋರ್ಟ್ ನ್ಯಾಯಾಧೀಶರ ನೇಮಕಾತಿ ವಿಳಂಬವಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಮುಖ್ಯ ನ್ಯಾ.ಟಿ.ಎಸ್. ಠಾಕೂರ್ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

“ಪ್ರಸ್ತುತ ಹೈಕೋರ್ಟ್’ಗಳಲ್ಲಿ 500 ನ್ಯಾಯಾಧೀಶ ಹುದ್ದೆಗಳು ಖಾಲಿಯಿವೆ. ಅವರೆಲ್ಲ ಇಂದು ಕಾರ್ಯ ನಿರ್ವಹಿಸಬೇಕಿತ್ತು. ಆದರೆ ಈಗ ಆ ಸ್ಥಾನಗಳು ಖಾಲಿ ಬಿದ್ದಿವೆ. ಜೊತೆಗೆ ನ್ಯಾಯಮಂಡಳಿಗಳಿಗೆ ಸರಿಯಾದ ಸೌಲಭ್ಯವನ್ನು ಇನ್ನೂ ಒದಗಿಸಿಲ್ಲ ಹಾಗಾಗಿ ಅವು ಕೂಡಾ ಖಾಲಿ ಬಿದ್ದಿದೆ ” ಎಂದು ನ್ಯಾ. ಠಾಕೂರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಸರ್ಕಾರ ಸರಿಯಾಗಿ ಸೌಲಭ್ಯವನ್ನು ಒದಗಿಸಲು ಸಿದ್ಧವಿಲ್ಲ. ನ್ಯಾಯಮಂಡಳಿಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಇದುವರೆಗೂ ಭರ್ತಿ ಮಾಡಿಲ್ಲ. ಸುಪ್ರೀಂಕೋರ್ಟ್ ನ ಯಾವ ನಿವೃತ್ತ ನ್ಯಾಯಾಧೀಶರೂ ನ್ಯಾಯಮಂಡಳಿಯ ಹುದ್ದೆಯನ್ನು

ಅಲಂಕರಿಸಲು ಸಿದ್ದವಿಲ್ಲದಿರುವ ಸ್ಥಿತಿ ನಿರ್ಮಾಣವಾಗಿದೆ. ನೇಮಕಾತಿಯನ್ನು ಒಪ್ಪಿಕೊಳ್ಳುವಂತೆ ನನ್ನ ಸಹೋದ್ಯೋಗಿಗಳ ಮನವೊಲಿಸುವುದೇ ನನ್ನ ಕೆಲಸವಾಗಿದೆ” ಎಂದು ನ್ಯಾ. ಠಾಕೂರ್ ಹೇಳಿದ್ದಾರೆ.