Asianet Suvarna News Asianet Suvarna News

ಪೋಸ್ಟರ್ ಹಚ್ಚುವುದರಿಂದ ಉಪರಾಷ್ಟ್ರಪತಿ ಭವನವರೆಗೆ: ಉನ್ನತ ಹುದ್ದೆಗೇರಿದ ವೆಂಕಯ್ಯ ನಾಯ್ಡು

ಪೋಸ್ಟರ್ ಹಚ್ಚುವುದರಿಂದ ಹಿಡಿದು ರಾಜಕೀಯ ವ್ಯಕ್ತಿಯಾಗಿ ಮತ್ತು ಸೈದ್ಧಾಂತಿಕ ಬದ್ಧತೆಯ ಮೂಲಕ ಬಿಜೆಪಿಯ ಪ್ರಮುಖ ನಾಯಕರಲ್ಲಿ ಒಬ್ಬರಾದ, ಇದೀಗ ಉಪ ರಾಷ್ಟ್ರಪತಿಯಂತಹ ಪ್ರತಿಷ್ಠಿತ ಹುದ್ದೆಗೇರಿರುವ ಮುಪ್ಪವರಪು ವೆಂಕಯ್ಯ ನಾಯ್ಡು ಸಾಗಿ ಬಂದ ಹಾದಿ ಸುದೀರ್ಘವಾದುದು.

Journey Of Venkaiah Naidu From Poster Boy To Vice President

ನವದೆಹಲಿ(ಆ.06): ಪೋಸ್ಟರ್ ಹಚ್ಚುವುದರಿಂದ ಹಿಡಿದು ರಾಜಕೀಯ ವ್ಯಕ್ತಿಯಾಗಿ ಮತ್ತು ಸೈದ್ಧಾಂತಿಕ ಬದ್ಧತೆಯ ಮೂಲಕ ಬಿಜೆಪಿಯ ಪ್ರಮುಖ ನಾಯಕರಲ್ಲಿ ಒಬ್ಬರಾದ, ಇದೀಗ ಉಪ ರಾಷ್ಟ್ರಪತಿಯಂತಹ ಪ್ರತಿಷ್ಠಿತ ಹುದ್ದೆಗೇರಿರುವ ಮುಪ್ಪವರಪು ವೆಂಕಯ್ಯ ನಾಯ್ಡು ಸಾಗಿ ಬಂದ ಹಾದಿ ಸುದೀರ್ಘವಾದುದು.

ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಸಾಮಾನ್ಯ ಕೃಷಿ ಕುಟುಂಬದಲ್ಲಿ ಜನಿಸಿದ ನಾಯ್ಡು (68), ದೀರ್ಘ ಕಾಲೀನ ರಾಜ್ಯಸಭಾ ಸದಸ್ಯರಾಗಿ, ಬಿಜೆಪಿ ಅಧ್ಯಕ್ಷರಾಗಿ, ಸಚಿವರಾಗಿ ವಿವಿ‘ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಅವರು ಸುಮಾರು ನಾಲ್ಕು ದಶಕಗಳ ಸೇವೆ ಸಲ್ಲಿಸಿದ್ದಾರೆ.

70ರ ದಶಕದಲ್ಲಿ ಜನ ಸಂಘ ದಕ್ಷಿಣ ಭಾರತದಲ್ಲಿ ಅಷ್ಟೇನೂ ಪ್ರಭಾವ ಹೊಂದಿಲ್ಲದಿದ್ದರೂ, ಯುವಕ ನಾಯ್ಡು ಆ ಸಂದ‘ರ್ ಪಕ್ಷದ ಹಿರಿಯ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಅಡ್ವಾಣಿಯವರಂ ತಹ ನಾಯಕರ ಪೋಸ್ಟರ್‌'ಗಳನ್ನು ಹಚ್ಚುವುದರಲ್ಲಿ ಸಕ್ರಿಯರಾಗಿದ್ದರು.

ಉತ್ತಮ ವಾಗ್ಮಿಯಾಗಿರುವ ನಾಯ್ಡು, ಆಂಧ್ರ ಪ್ರದೇಶ ವಿಧಾನಸಭೆಗೆ 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 1978ರಲ್ಲಿ ಜನತಾ ಪಾರ್ಟಿಯಿಂದ ಆಯ್ಕೆಯಾಗಿದ್ದ ಅವರು, ಮತ್ತೊಂದು ಬಾರಿ ಬಿಜೆಪಿಯಿಂದ ಆಯ್ಕೆ ಯಾಗಿದ್ದರು. ರಾಜ್ಯಸಭೆಗೆ ಮೂರು ಬಾರಿ ಕರ್ನಾಟಕದಿಂದ ಆಯ್ಕೆಯಾಗಿದ್ದಾರೆ

Follow Us:
Download App:
  • android
  • ios